ಕಿವಿಸ್ ವಿರುದ್ದ ಮುಗ್ಗರಿಸಿದ ಭಾರತ : ವಿಶ್ವ ಟೆಸ್ಟ್ ಸರಣಿಯಲ್ಲಿ ಕೊಯ್ಲಿ ಪಡೆಗೆ ಮೊದಲ ಸೋಲು

0

ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಹತ್ತು ವಿಕೆಟ್ ಗಳ ಅಂತರದ ಹೀನಾಯ ಸೋಲು ಅನುಭವಿಸಿದೆ. ಮೂರನೇ ದಿನದ ಅಂತ್ಯಕ್ಕೆ ನಾಲ್ಕು ವಿಕೆಟ್ ಕಳೆದುಕೊಂಡು 144 ರನ್ ಗಳಿಸಿದ್ದ ಭಾರತ ಇಂದು ಬ್ಯಾಟಿಂಗ್ ಆರಂಭಿಸಿತ್ತು. ಆದರೆ ಕೇವಲ 45 ರನ್ ಗಳಿಸೋ ಹೊತ್ತಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 191 ರನ್ ಗೆ ಆಲೌಟಾಗಿತ್ತು. ನ್ಯೂಜಿಲೆಂಡ್ ಗೆ ಗೆಲುವಿನ ಅವಶ್ಯಕವಾಗಿದ್ದ 9 ರನ್ ಗಳಿಸೋ ಮೂಲಕ ಗೆಲುವಿನ ನಗೆ ಬೀರಿದೆ.

ಟೆಸ್ಟ್ ಸರಣಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 165 ರನ್ ಗಳಿಗೆ ಆಲೌಟಾಗಿತ್ತು. ನಂತರ ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ 348 ರನ್ ಗಳಿಸೋ ಮೂಲಕ ಇನ್ನಿಂಗ್ಸ್ ಮುನ್ನಡೆ ಕಾಯ್ದುಕೊಂಡಿತ್ತು, ಎರಡನೇ ಇನ್ನಿಂಗ್ಸ್ ನಲ್ಲಿಯೂ ಭಾರತ ಬ್ಯಾಟಿಂಗ್ ವೈಫಲತ್ಯೆ ಕಂಡಿತ್ತು. ಕನ್ನಡಿಗ ಮಾಯಂಕ್ ಅಗರ್ ವಾಲ್ ಅರ್ಧಶತಕದ ನಡುವಲ್ಲಿಯೂ ಭಾರತ ಕೇವಲ 191ರನ್ ಗಳಿಗೆ ಆಲೌಟಾಗಿದೆ. ಏಕದಿನ ಸರಣಿಯನ್ನು ಕೈಬಿಟ್ಟಿದ್ದ ಭಾರತಕ್ಕೆ ಇದೀಗ ಟೆಸ್ಟ್ ಸರಣಿಯಲ್ಲಿಯೂ ವೈಫಲ್ಯತೆಯನ್ನು ಮುಂದುವರಿಸಿದೆ.

ಟೆಸ್ಟ್ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದ ಟಿಮ್ ಸೌಥಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಭಾರತ ಮೊದಲ ಸೋಲು ಕಂಡಿದೆ.

Leave A Reply

Your email address will not be published.