ಬೆಂಗಳೂರು : ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರೋ ಬೆನ್ನಲ್ಲೇ ಪೆಟ್ರೋಲ್, ಡಿಸೇಲ್ ಹಾಗೂ ಮದ್ಯದ ದರದಲ್ಲಿ ಬಾರೀ ಏರಿಕೆಯಾಗಲಿದೆ. ನೂತನ ದರ ಮಧ್ಯರಾತ್ರಿಯೇ ಜಾರಿಗೆ ಬರಲಿದೆ.

ರಾಜ್ಯ ಸರಕಾರ ಬಜೆಟ್ ನಲ್ಲಿ ಪೆಟ್ರೋಲ್, ಡಿಸೇಲ್ ಶುಲ್ಕದಲ್ಲಿ ಶೇ.6 ರಷ್ಟು ಏರಿಕೆಯನ್ನು ಮಾಡಿದ್ದರು. ಹೀಗಾಗಿ ಪೆಟ್ರೋಲ್ ಬೆಲೆಯಲ್ಲಿ 1.60 ರೂಪಾಯಿ ಹಾಗೂ ಡಿಸೇಲ್ ಬೆಲೆಯಲ್ಲಿ 1.59 ರೂಪಾಯಿ ಏರಿಕೆಯಾಗಲಿದೆ. ನೂತನ ದರ ಎಪ್ರಿಲ್ 1ರಿಂದಲೇ ಜಾರಿಗೆ ಬರಲಿದೆ.

ಇನ್ನು ರಾಜ್ಯದಲ್ಲಿ ಮದ್ಯಪ್ರಿಯರಿಗೂ ಸರಕಾರ ಶಾಕ್ ನೀಡಿದ್ದು, ಮದ್ಯದ ದರದಲ್ಲಿಯೂ ಬಾರೀ ಏರಿಕೆಯಾಗಲಿದೆ. ಕೊರೊನಾ ಭೀತಿಯಿಂದ ಕೆಲಸವಿಲ್ಲದೇ ಕಂಗೆಟ್ಟಿರೋ ಜನರಿಗೆ ಇದೀಗ ರಾಜ್ಯ ಸರಕಾರ ಪೆಟ್ರೋಲ್, ಡಿಸೇಲ್ ಹಾಗೂ ಮದ್ಯದ ಶಾಕ್ ನೀಡಿದೆ.