- ರಕ್ಷಾ ಬಡಾಮನೆ
ಇತ್ತಿಚಿನ ಕಾಲದಲ್ಲಿ ನಮ್ಮ ಹೆಂಗೆಳೆಯರ ದೊಡ್ಡ ಸಮಸ್ಯೆ ಮುಖದ ಮೇಲಿನ ಕಲೆಗಳು, ಜೋತು ಬಿದ್ದಿರುವ ಚರ್ಮ, ಡಾರ್ಕ್ ಸರ್ಕಲ್, ಮೊಡವೆ ಕಲೆಗಳು, ಕಲುಷಿತ ನೀರು, ಧೂಳು, ಬಿಸಿಲು ಮುಂತಾದವುಗಳು ಮುಖದ ಕಲೆಗಳಿಗೆ ಕಾರಣವಾಗುತ್ತಿವೆ.

ಮುಖದ ಮೇಲಿನ ಕಲೆಗಳ ಸಮಸ್ಯೆಗಳಿಂದ ಪಾರಾಗಲು ಹಲವಾರು ಕಾಸ್ಮೆಟಿಕ್ಸ್ ಗಳ ಬಳಕೆ ಮಾಡಿ ಸೋತಿರುವರರಿಗೆ ಮುಖದ ಕಲೆ ಹೋಗಲಾಡಿಸಲು ಮನೆಯಲ್ಲಿಯೇ ಮದ್ದು ಮಾಡಿ ಪರಿಹಾರವನ್ನು ಕಂಡುಕೊಳ್ಳಿ.

ನಮ್ಮ ಆರೋಗ್ಯ ವೃದ್ದಿಗಾಗಿ ತಿನ್ನುವ ಮೊಟ್ಟೆ ಮುಖದಲ್ಲಿನ ಕಲೆಯನ್ನು ಹೋಗಲಾಡಿಸಲು ರಾಮಬಾಣ. ಈ ಮೊಟ್ಟೆಯಲ್ಲಿ ನಿಮ್ಮ ಮುಖದ ಸೌಂದರ್ಯವಿದೆ.

ಮೊಟ್ಟೆ ನ್ಯಾಚುರಲ್ ವಿಟಮಿನ್ ಗಳ ಆಗರವಾಗಿದ್ದು, ಮೊಟ್ಟೆಯಲ್ಲಿರುವ ಹಳದಿ ಲೋಳೆ ಮತ್ತು ಬಿಳಿ ಲೋಳೆ ಎರಡನ್ನೂ ನೀವು ನೋಡಿರುತ್ತೀರಿ. ಈ ಎರಡು ಕೂಡ ನಿಮ್ಮ ಸೌಂದರ್ಯ ವೃದ್ದಿಯಲ್ಲಿ ಸಹಾಯಕವಾಗಿದೆ.

ಕ್ಯಾರೆಟ್ ನಿಂದ ರಸ ತೆಗೆದು ಅದಕ್ಕೆ ಒಂದು ಮೊಟ್ಟೆಯ ಬಿಳಿ ಲೋಳೆಯನ್ನು ಸೇರಿಸಿಕೊಳ್ಳಿ. ಇದನ್ನು ತೆಳುವಾಗಿ ತ್ವಚೆಗೆ ಹಚ್ಚಿಕೊಂಡು ಸ್ವಲ್ಪ ಸಮಯ ಒಣಗಲು ಬಿಡಿ. ಉಗುರುಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಒಂದು ಸಲ ಹೀಗೆ ಮಾಡಿ.

ಮೊಟ್ಟೆಯ ಬಿಳಿ ಲೋಳೆ ಮತ್ತು ಜೇನುತುಪ್ಪವನ್ನು ಸೇರಿಸಿ ಸರಿಯಾಗಿ ಮಿಶ್ರಣ ಮಾಡಿ ಹಚ್ಚಿಕೊಳ್ಳಿ. 15 ನಿಮಿಷ ಬಿಟ್ಟು ತೊಳೆಯಿರಿ.ಇದರಿಂದ ಮುಖವೂ ಕಾಂತಿಯುಕ್ತವಾಗುತ್ತದೆ.

ಒಂದು ಚಮಚ ಕಡಲೆಹಿಟ್ಟು ಮತ್ತು ಒಂದು ಮೊಟ್ಟೆಯ ಬಿಳಿ ಲೋಳೆಯನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. 20 ನಿಮಿಷ ಬಿಟ್ಟು ಮುಖ ತೊಳೆಯಿರಿ. ವಾರಕ್ಕೊಮ್ಮೆ ಈ ಮಿಶ್ರಣವನ್ನು ಬಳಸಿ. ಇದು ತ್ವಚೆಯ ಆರೈಕೆಗೆ ಸೂಕ್ತ.

ಮೊಟ್ಟೆಯ ಬಿಳಿ ಲೋಳೆಯನ್ನು ಮುಖಕ್ಕೆ ಹಚ್ಚಿ ಮತ್ತು ಮುಖವನ್ನು ಪೇಪರ್ ನಿಂದ ಮುಚ್ಚಿಕೊಳ್ಳಿ. ಇನ್ನೊಂದು ಸಲ ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ಒಣಗಲು ಬಿಡಿ. ಸ್ವಲ್ಪ ಸಮಯ ಬಿಟ್ಟು ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದರಿಂದ ಕಪ್ಪು ಕಲೆಗಳು ಕಮ್ಮಿಯಾಗುತ್ತದೆ.ಉತ್ತಮ ಫಲತಾಂಶಕ್ಕಾಗಿ ಎರಡು ದಿನಕ್ಕೆ ಬಳಸಿ .

ಕಣ್ಣಿನ ಕೆಳಗೆ ಕಪ್ಪು ವರ್ತುಲದಿಂದ ಬಳಲುತ್ತಿರುವವರು ಹೊರಗೆ ಹೋಗುವ ಸಂದರ್ಭ ತಾತ್ಕಾಲಿಕವಾಗಿ ಮೊಟ್ಟೆಯ ಬಿಳಿ ಲೋಳೆಯ ಮೂಲಕ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಹೊರಗೆ ಹೋಗುವ ಮೊದಲು ಮೊಟ್ಟೆಯ ಬಿಳಿ ಲೋಳೆಯನ್ನು ಕಣ್ಣಿನ ಕೆಳಭಾಗಕ್ಕೆ ಹಚ್ಚಿ. ಸ್ವಲ್ಪ ಒಣಗಿದ ಮೇಲೆ ಇನ್ನೊಂದು ಕೋಟ್ ಹಚ್ಚಿ ಹಾಗೆಯೇ ಹೊರಗೆ ಹೋಗಿ ಮನೆಗೆ ಬಂದು ತೊಳೆದರೆ. ಡಾರ್ಕ್ ಸರ್ಕಲ್ ನಿಂದ ಮುಕ್ತರಾಗಬಹುದು.

ನಾಲ್ಕು ಚಮಚ ಚೆನ್ನಾ (ದೊಡ್ಡ ಕಡಲೆ) ಪುಡಿಯನ್ನು ಒಂದು ಬಾಳೆಹಣ್ಣಿನ ಜೊತೆ ಸೇರಿಸಿ ಪೇಸ್ಟ್ ಮಾಡಿ, ಒಂದು ಮೊಟ್ಟೆಯನ್ನು ಒಡೆದು ಇದಕ್ಕೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಈ ಪೇಸ್ಟ್ ಅನ್ನು ಮುಖಕ್ಕೆ ಮತ್ತು ಕುತ್ತಿಗೆಯ ಭಾಗಕ್ಕೆ ಹಚ್ಚಿ 15 ನಿಮಿಷಗಳ ನಂತರ ತೊಳೆಯಿರಿ. ಇದರಿಂದ ಮುಖದಲ್ಲಿರುವ ಕೆಂಪುಗುಳ್ಳೆಗಳು ಮಾಯವಾಗುತ್ತದೆ. ಜೊತೆಗೆ ಮುಖದ ರಂಧ್ರಗಳನ್ನು ಟೈಟ್ ಮಾಡುತ್ತದೆ.

ಒಂದು ಮೊಟ್ಟೆಯ ಬಿಳಿಲೋಳೆಯನ್ನು ತೆಗೆದು ಅದಕ್ಕೆ ಓಟ್ ಮೀಲ್ ಫೌಡರ್ ಸೇರಿಸಿ ಫೇಸ್ಟ್ ಮಾಡಿ ಅದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿ 15 ನಿಮಿಷಗಳ ನಂತರ ಉಗುರು ಬಿಸಿ ನೀರಿನಲ್ಲಿ ತೊಳೆಯಿರಿ ನಂತರ ತಣ್ಣೀರಿನಲ್ಲಿ ತೊಳೆಯಿರಿ. ಹೀಗೆ ಮಾಡುವುದರಿಂದ ಮೊಡವೆಯ ತೊಂದರೆಯಿಂದ ಮುಕ್ತರಾಗಬಹುದು.