ಸ್ನೇಹಿತರೊಂದಿಗೆ ವಿಡಿಯೋ ಕಾಲ್ನಲ್ಲಿ (Girl Dies Video Call) ಬ್ಯುಸಿಯಾಗಿದ್ದ ವೇಳೆ ಅಕಸ್ಮಾತ್ ಆಗಿ 11 ವರ್ಷದ ಬಾಲಕಿಯ ಕುತ್ತಿಗೆ ಉಯ್ಯಾಲೆಯ ಹಗ್ಗಕ್ಕೆ ಸಿಲುಕಿದ ಪರಿಣಾಮ ಆಕೆ ಸಾವನ್ನಪ್ಪಿದ್ದಾಳೆ. ಇಂಗ್ಲೆಂಡ್ನ(England) ಗ್ರೇಸ್ ಪೆಟ್ರಿಷಿಯಾ ಹ್ಯಾಮ್ನೆಟ್ ಎಂಬಾಕೆ ತನ್ನ ಶಾಲಾ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದ ವೇಳೆ ಕುತ್ತಿಗೆಗೆ ಹಗ್ಗ ಬಿಗಿದ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.
ಮೆಕ್ಡೊನಾಲ್ಡ್ ಡೆಲಿವರಿ ಬಂದಿದೆಯೇ ಎಂದು ಪರಿಶೀಲನೆ ಮಾಡಲು ಗ್ರೇಸ್ ತಾಯಿ ಮನೆಯಿಂದ ಹೊರ ಬಂದ ವೇಳೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಕಿರುಚಿಕೊಂಡ ಗ್ರೇಸ್ ತಾಯಿ ನೆರೆಹೊರೆಯವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಆ್ಯಂಬುಲೆನ್ಸ್ನ್ನು ಸ್ಥಳಕ್ಕೆ ಕರೆಯಿಸಲಾಗಿದೆ. ಆಸ್ಪತ್ರೆಗೆ ಹೋಗುವ ಮಾರ್ಗಮಧ್ಯದಲ್ಲಿ ಬಾಲಕಿಗೆ ಹೃದಯಾಘಾತವಾಗಿದೆ. ಹತ್ತಿರದಲ್ಲೇ ಇರುವ ಮಕ್ಕಳ ಆಸ್ಪತ್ರೆಗೆ ಗ್ರೇಸ್ನ್ನು ದಾಖಲಿಸಲಾಗಿತ್ತು. ಆದರೆ ಐದು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ವರದಿಯಾಗಿದೆ.
ಸಿಟಿ ಸ್ಕ್ಯಾನ್ನಲ್ಲಿ ಈ ಘಟನೆಯಿಂದಾಗಿ ಗ್ರೇಸ್ನ ಮೆದುಳಿಗೆ ಪೆಟ್ಟಾಗಿದೆ ಎಂದು ತಿಳಿದುಬಂದಿದೆ. ಇದರಿಂದಾಗಿ ಗ್ರೇಸ್ ದೇಹಕ್ಕೆ ರಕ್ತ ಹಾಗೂ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯ ಕಂಡು ಬಂದಿದೆ. ಎಂಆರ್ಐ ಸ್ಕ್ಯಾನಿಂಗ್ನಲ್ಲಿ ಗ್ರೇಸ್ಗೆ ಗಂಭೀರವಾಗಿ ಮೆದುಳಿಗೆ ಹಾನಿಯಾಗಿರುವುದು ಧೃಡಪಟ್ಟಿದೆ.
ತನಿಖೆ ವೇಳೆ ಗ್ರೇಸ್ ತಾಯಿ ಗ್ರೇಸ್ಗೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಯಾವುದೇ ಕಾರಣಗಳು ಇರಲಿಲ್ಲ. ಆಕೆಯ ಅತ್ಯಂತ ಖುಷಿಯಾಗಿದ್ದಳು ಎಂದು ಹೇಳಿದ್ದಾರೆ. ತನಿಖೆಯಲ್ಲಿ ಗ್ರೇಸ್ ಪೆಟ್ರಿಷಿಯಾ ಹ್ಯಾಮ್ನೆಟ್ ಸಾವಿನಲ್ಲಿ ಮೂರನೇ ವ್ಯಕ್ತಿಯ ಪಾತ್ರವಿರಲಿಲ್ಲ ಎಂಬುದೂ ಧೃಡಪಟ್ಟಿದೆ. ಹೀಗಾಗಿ ಇದೊಂದು ಆಕಸ್ಮಿಕ ಸಾವು ಎಂದು ವರದಿ ಮಾಡಲಾಗಿದೆ.
ಇದನ್ನೂ ಓದಿ : ಹೆಲ್ಮೆಟ್ ಧರಿಸದ ವ್ಯಕ್ತಿಗೆ ನಡುರಸ್ತೆಯಲ್ಲಿ ಥಳಿಸಿದ ಪೊಲೀಸ್; ಪೊಲೀಸ್ ವರ್ತನೆ ಕಂಡು ಬೆಚ್ಚಿಬಿದ್ದ ಪುಟ್ಟ ಬಾಲಕಿ
ಇದನ್ನು ಓದಿ : Farmer Complaint Against Cow : ಹಾಲು ಕೊಡದೇ ಸತಾಯಿಸುವ ಹಸುವನ್ನು ಠಾಣೆಗೆ ಕರೆಸಿ: ಪೊಲೀಸರ ಮೊರೆ ಹೋದ ಶಿವಮೊಗ್ಗದ ರೈತ
England: Girl dies video call after accidentally entangling herself in rope swing while on video call with friends