Royal Enfield 650 Anniversary Editions: 120 ಸೆಕೆಂಡುಗಳಲ್ಲಿ 120 ಬೈಕ್ ಮಾರಾಟ ! ಬಿಸಿದೋಸೆಯಂತೆ ಮಾರಾಟವಾದ ರಾಯಲ್ ಎನ್‌ಫೀಲ್ಡ್‌ನ ಹೊಸ ಮಾಡೆಲ್

ರಾಯಲ್ ಎನ್‌ಫೀಲ್ಡ್ ಬೈಕ್ ಅಂದ್ರೆ ಎಲ್ಲರಿಗೂ ಒಂದು ಒಂದು ರೀತಿ ಕ್ರೇಜ್. ಅದೆಷ್ಟೇ ದುಬಾರಿ ಆದ್ರೂ, ಆ ಬೈಕ್ ಖರೀದಿ ಮಾಡಬೇಕು ಅನ್ನುವ ಆಸೆ ಬಹುತೇಕರಿಗೆ ಇದ್ದೆ ಇರುತ್ತದೆ. ಇದೀಗ ರಾಯಲ್ ಎನ್‌ಫೀಲ್ಡ್ ಭಾರತದಲ್ಲಿ ಕೇವಲ 120 ಸೆಕೆಂಡುಗಳಲ್ಲಿ 650 ಟ್ವಿನ್ಸ್ ಆನಿವರ್ಸರಿ ಆವೃತ್ತಿಯ 120 ಯುನಿಟ್‌ಗಳನ್ನು ಮಾರಾಟ ಮಾಡಿ ಹೊಸ ದಾಖಲೆ ನಿರ್ಮಿಸಿದೆ. ಈಮುನ್ನ ಮೇಜರ್ ರಾಯಲ್ ಎನ್‌ಫೀಲ್ಡ್ 650 ಟ್ವಿನ್ ಆನಿವರ್ಸರಿ (Royal Enfield 650 Anniversary) ಎಡಿಷನ್ ಮಾಡೆಲ್‌ಗಳನ್ನು ಮಿಲನ್‌ನಲ್ಲಿ ನಡೆದ ಇಐಸಿಎಂಎ 2021 ನಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿತು.

ಈ ವಿಶೇಷ ಆವೃತ್ತಿಯ ಬೈಕ್‌ ಜಾಗತಿಕವಾಗಿ 480 ಘಟಕಗಳು ಮಾತ್ರ ಲಭ್ಯವಿರುತ್ತವೆ ಎಂದು ತಯಾರಕರು ಘೋಷಿಸಿದ್ದಾರೆ. ಅವುಗಳಲ್ಲಿ 120 ಯುನಿಟ್‌ಗಳನ್ನು ಭಾರತೀಯ ಮಾರುಕಟ್ಟೆಗೆಂದು ನಿಗದಿಪಡಿಸಲಾಗಿತ್ತು. ಅಷ್ಟೂ ಬೈಕ್‌ಗಳು ದಾಖಲೆಯ ಸಮಯದಲ್ಲಿ ಮಾರಾಟವಾಗಿದೆ ಎಂದು ರಾಯಲ್ ಎನ್‌ಫೀಲ್ಡ್ ಹೇಳಿಕೊಂಡಿದೆ.

ವಿಶೇಷ ಆವೃತ್ತಿಯ ರಾಯಲ್ ಎನ್‌ಫೀಲ್ಡ್ 650 ಟ್ವಿನ್ಸ್ ಆನಿವರ್ಸರಿ ಎಡಿಷನ್ ಮೋಟಾರ್‌ಸೈಕಲ್‌ಗಳನ್ನು ಮೊದಲು ಬಂದವರಿಗೆ ಮೊದಲು ಸೇವೆಯ ಆಧಾರದ ಮೇಲೆ ಗ್ರಾಹಕರಿಗೆ ಡಿಸೆಂಬರ್ 6 ರಂದು ಮಾರಾಟಕ್ಕೆ ಒದಗಿಸಲಾಗಿತ್ತು. ಸೀಮಿತ ಆವೃತ್ತಿಯ ರಾಯಲ್ ಎನ್‌ಫೀಲ್ಡ್ 650 ಟ್ವಿನ್ಸ್ ಆನಿವರ್ಸರಿ ಎಡಿಷನ್ ಮಾದರಿಗಳು ಗಾಢ ಕಪ್ಪು, ಕ್ರೋಮ್ ಪೇಂಟ್ ಥೀಮ್‌ನಲ್ಲಿ ಚಿತ್ರಿಸಲಾಗಿದೆ. ಈ ಎಡಿಷನ್ ಬೈಕ್‌ಗಳು ಕರಕುಶಲ ಹಿತ್ತಾಳೆಯ ಟ್ಯಾಂಕ್ ಬ್ಯಾಡ್ಜ್ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ.

ಈ ವಿಶೇಷ ಮಾಡೆಲ್‌ನ ವಿನ್ಯಾಸವು ಸಹ ಅಷ್ಟೇ ಸಖತ್ ಆಗಿದೆ. ಎರಡೂ 650 ಸಿಸಿ ಮಾದರಿಗಳ ಸಿಲೂಯೆಟ್ ಪ್ರಮಾಣಿತ ಮಾದರಿಯಂತೆಯೇ ಇರುತ್ತದೆ. ಅಲ್ಲದೆ, ವಿಶೇಷ ಆವೃತ್ತಿಯ 650 ಸಿಸಿ ಮಾಡೆಲ್‌ಗಳಲ್ಲಿ ಅಷ್ಟೇನೂ ವೈಶಿಷ್ಟ್ಯತೆಗಳಲ್ಲಿ ಬದಲಾವಣೆ ಮಾಡಲಾಗಿಲ್ಲ ಮತ್ತು ಯಾಂತ್ರಿಕ ಬಿಟ್‌ಗಳೊಂದಿಗೆ ಎರಡೂ ಮಾಡೆಲ್‌ಗಳು ಲಭ್ಯವಿದ್ದವು.

ಈ ವಿಶೇಷ ಆವೃತ್ತಿಯ ಬೈಕ್‌ಗಳು ರಾಯಲ್ ಎನ್‌ಫೀಲ್ಡ್ ಕಂಪನಿ ಆರಂಭವಾಗಿ 120 ವರ್ಷಗಳ ನೆನಪಿಗಾಗಿ ನಿರ್ಮಿಸಲಾಗಿತ್ತು. ಆದ್ದರಿಂದ, ಮೋಟಾರ್‌ಸೈಕಲ್‌ಗಳು ವಿಶೇಷ ಬ್ಯಾಡ್ಜ್‌ಗಳು ಮತ್ತು ವಿಶೇಷ ಲೈವರಿಗಳನ್ನು ಸಹ ಹೊಂದಿವೆ. ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಮತ್ತು ಇಂಟರ್‌ಸೆಪ್ಟರ್ ಐಎನ್‌ಟಿ 650 ರ ವಿಶೇಷ ಆವೃತ್ತಿಯೆರಡೂ ಇಂತಹ ಬೈಕ್‌ ಪ್ರಿಯರಿಗೆಂದೇ ವಿನ್ಯಾಸ ಮಾಡಿದಂತಿದೆ. ಬ್ಲ್ಯಾಕ್ಡ್-ಔಟ್ ರಾಯಲ್ ಎನ್‌ಫೀಲ್ಡ್ ಅಪ್ಪಟ ಮೋಟಾರ್‌ಸೈಕ್ಲಿಂಗ್ ಪರಿಕರಗಳ ಕಿಟ್‌ ಮತ್ತು ಮೂರು ವರ್ಷಗಳ ಒಇಎಂ ವಾರಂಟಿಯ ಮೇಲೆ ಮತ್ತು ನಾಲ್ಕನೇ ಮತ್ತು ಐದನೇ ವರ್ಷಕ್ಕೆ ವಿಸ್ತೃತ ವಾರಂಟಿಯನ್ನು ಹೊಂದಿವೆ.

ಇದನ್ನೂ ಓದಿ: Smartphone Battery life : ಸ್ಮಾರ್ಟ್‌ಫೋನ್ ಚಾರ್ಜ್ ಉಳಿಸಲು ಸ್ಮಾರ್ಟ್ ಸಲಹೆಗಳು

(Royal Enfield 650 Anniversary Editions 120 bikes sold out in India just 120 second)

Comments are closed.