Traffic Cop Thrashes Man : ಹೆಲ್ಮೆಟ್​ ಧರಿಸದ ವ್ಯಕ್ತಿಗೆ ನಡುರಸ್ತೆಯಲ್ಲಿ ಥಳಿಸಿದ ಪೊಲೀಸ್​; ಪೊಲೀಸ್​ ವರ್ತನೆ ಕಂಡು ಬೆಚ್ಚಿಬಿದ್ದ ಪುಟ್ಟ ಬಾಲಕಿ

ಹೆಲ್ಮೆಟ್​ ಧರಿಸದೇ ಬೈಕ್​ ಚಲಾಯಿಸೋದು ಖಂಡಿತವಾಗಿಯೂ ತಪ್ಪು. ಈ ತಪ್ಪನ್ನು ಎಸಗಿದ ವಾಹನ ಸವಾರನನ್ನು ಪ್ರಶ್ನಿಸುವ ಅಥವಾ ದಂಡ ಹೇರುವ ಎಲ್ಲಾ ಅಧಿಕಾರ ಟ್ರಾಫಿಕ್​ ಪೊಲೀಸರಿಗಿದೆ. ಆದರೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಹೆಲ್ಮೆಟ್​ ಧರಿಸದ ವ್ಯಕ್ತಿಗೆ ಪೊಲೀಸ್​ ಸಿಬ್ಬಂದಿ ಧರ್ಮದೇಟು (Traffic Cop Thrashes Man) ನೀಡಿದ್ದಾರೆ.


ತೆಲಂಗಾಣದ ಮೊಹಬುಬಬಾದ್​ ಜಿಲ್ಲೆಯಲ್ಲಿ ಇಂತಹದ್ದೊಂದು ಅಮಾನವೀಯ ಘಟನೆಯು ವರದಿಯಾಗಿದೆ. ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಪುತ್ರಿಯ ಎದುರಿಗೇ ಪೊಲೀಸ್​ ವಾಹನ ಸವಾರನಿಗಾಗಿ ಹಿಗ್ಗಾ ಮುಗ್ಗಾ ಥಳಿಸುತ್ತಿರೋದನ್ನು ಕಾಣಬಹುದಾಗಿದೆ. ಮೊದಲು 8 ವರ್ಷದ ಮಗಳ ಜೊತೆಗಿದ್ದ ತಂದೆ ಹಾಗೂ ಪೊಲೀಸ್​​ ನಡುವೆ ವಾಗ್ವಾದ ಏರ್ಪಟ್ಟಿದೆ. ಇಷ್ಟು ಹೊತ್ತಿಗಾಗಲೇ ಅಲ್ಲಿದ್ದವರೆಲ್ಲರೂ ಘಟನಾ ಸ್ಥಳದತ್ತ ಜಮಾಯಿಸಿದ್ದು ಪೊಲೀಸ್​​ನ್ನು ಸಮಾಧಾನಪಡಿಸಲು ಯತ್ನಿಸಿದ್ದಾರೆ.


ಶ್ರೀನಿವಾಸ್​ ಎಂಬವರು ತಮ್ಮ ಪುತ್ರಿಯ ಜೊತೆಯಲ್ಲಿನ ತರಕಾರಿ ತರಲು ಬೈಕ್​ ಮೇಲೆ ತೆರಳುತ್ತಿದ್ದರು. ಆದರೆ ಶ್ರೀನಿವಾಸ್​​ ಹೆಲ್ಮೆಟ್​ ಧರಿಸಿರಲಿಲ್ಲ. ಹೀಗಾಗಿ ಶ್ರೀನಿವಾಸ್​ ಬೈಕ್​ನ್ನು ಪೊಲೀಸ್​ ಕಾನ್ಸ್​ಟೇಬಲ್​ ತಡೆ ಹಿಡಿದಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಸಬ್​ ಇನ್ಸ್​ಪೆಕ್ಟರ್​ ಪುತ್ರಿಯ ಸಮ್ಮುಖದಲ್ಲಿಯೇ ಶ್ರೀನಿವಾಸ್​ ಕೆನ್ನೆಗೆ ಬಾರಿಸಿದ್ದಾರೆ. ಪೊಲೀಸ್​ ಅಧಿಕಾರಿಯ ಈ ವರ್ತನೆ ಕಂಡು ಹೆದರಿದ ಬಾಲಕಿ ಜೋರಾಗಿ ಅಳಲು ಆರಂಭಿಸಿದ್ದಾಳೆ .ತಂದೆ ತನ್ನ ಮಗಳನ್ನು ಸಂತೈಸುತ್ತಿರೋದನ್ನೂ ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು ಪೊಲೀಸ್​ ವರ್ತನೆಗೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೆಲ್ಮೆಟ್​ ಧರಿಸದೇ ವ್ಯಕ್ತಿ ತಪ್ಪು ಮಾಡಿದ್ದರೂ ಸಹ ಆತನ ವಿಚಾರಣೆ ನಡೆಸಲು ಇನ್ನೂ ಬೇರೆ ಮಾರ್ಗಗಳನ್ನು ಪೊಲೀಸರು ಕಂಡುಕೊಳ್ಳಬಹುದಿತ್ತು. ಕನಿಷ್ಟ ಮಗುವಿನ ಕಡೆ ಆದರೂ ಪೊಲೀಸರು ಕನಿಕರ ತೋರಬಹುದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Hyderabad Traffic Cop Thrashes Man In Front Of Crying Daughter For Not Wearing Helmet | WATCH

ಇದನ್ನು ಓದಿ : Girl Molested : ವಿದ್ಯುತ್‌ ಮೀಟರ್‌ ರೀಡಿಂಗ್‌ಗೆ ಮನೆಗೆ ಬಂದ : 12 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯವೆಸಗಿದ ಕಾಮುಕ

ಇದನ್ನು ಓದಿ : Deadly Stunt :ಬಸ್​ ಏರಿ ಡೆಡ್ಲಿ ಸಾಹಸ ಮಾಡಿದ ವಿದ್ಯಾರ್ಥಿ..! ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ವಿದ್ಯಾರ್ಥಿಗಳಿಗೆ ಪೊಲೀಸರಿಂದ ಹುಡುಕಾಟ

Comments are closed.