ವಿಜಯಪುರ : ಮುಂದೂಡಲ್ಪಟ್ಟ ಎಫ್‌ಡಿಎಯ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ಪರೀಕ್ಷಾರ್ಥಿ ನಕಲು ಮಾಡುವಾಗ ಸಿಕ್ಕಿ ಬಿದ್ದಿದ್ದಾರೆ. ಪರೀಕ್ಷಾ ಕೇಂದ್ರದಲ್ಲಿ ನಕಲು ಚೀಟಿ ಪತ್ತೆಯಾಗಿದ್ದು,ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ.
ವಿಜಯಪುರ ನಗರದ ಎಸ್.ಎಸ್. ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಬೆಳಗಿನ ಅವಧಿಯಲ್ಲಿ ಸಾಮಾನ್ಯ ಜ್ಞಾನ ಪತ್ರಿಕೆಯ ಪರೀಕ್ಷೆಯು ನಡೆದಿದೆ. ಪರೀಕ್ಷಾರ್ಥಿಗಳು ನಕಲು ಮಾಡಿರುವ ಆರೋಪ ಕೇಳಿಬಂದಿದೆ. ನಕಲು ಮಾಡುತ್ತಿದ್ದ ಪರೀಕ್ಷಾರ್ಥಿ ಹಾಗೂ ನಕಲು ಚೀಟಿ ಪೂರೈಕೆ ಮಾಡಿದ ಕಾಲೇಜಿನ ಜವಾನ ಹಾಗೂ ಇನ್ನಿಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪರೀಕ್ಷಾ ನಕಲು ವೇಳೆಯಲ್ಲಿ ಪತ್ತೆಯಾಗಿರುವ ನಕಲು ಚೀಟಿಯಲ್ಲಿನ ಉತ್ತರ ಹಾಗೂ ಪ್ರಶ್ನೆ ಪತ್ರಿಕೆಯಲ್ಲಿನ ಪ್ರಶ್ಮೆಗಳಿಗೆ ಹೋಲಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಅಲ್ಲದೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆಯೆಂಬ ಅನುಮಾನ ವ್ಯಕ್ತವಾಗಿದೆ.