ಗುಂಡ್ಮಿ : ಕಾರು ಬೈಕ್ ಅಪಘಾತ – ಕೋಟದ ಸುಭಾಷ್ ಅಮೀನ್ ಸಾವು

ಕೋಟ : ಕಾರು ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಗುಂಡ್ಮಿ ಅಂಬಾಗಿಲು ಬಳಿಯಲ್ಲಿ ನಡೆದಿದೆ.

ಕೋಟ ಬನ್ನಾಡಿ ಮೂಲದ ಸುಭಾಷ್ ಅಮೀನ್ (45 ವರ್ಷ) ಎಂಬಾತನೇ ಸಾವನ್ನಪ್ಪಿದ ದುರ್ದೈವಿ. ಕೋಟದಿಂದ ಉಡುಪಿಯ ಕಡೆಗೆ ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆಯಲ್ಲಿ ವೇಗವಾಗಿ ಬಂದ ಕಾರು ಬೈಕ್ ಗೆ ಢಿಕ್ಕಿ ಹೊಡೆದಿದೆ. ಇದರ ಪರಿಣಾಮ ಸುಭಾಷ್ ಅಮೀನ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

https://kannada.newsnext.live/brahmavara-corpse-found-in-railway-track-suicide-suspects/

ಸುಭಾಷ್ ಅಮೀನ್ ಗುತ್ತಿಗೆದಾರರಾಗಿದ್ದಾರೆ. ಅಪಘಾತಕ್ಕೀಡಾದ ಕಾರು ಕುಂದಾಪುರದ ಚರ್ಚ್ ಫಾದರ್ ವೊಬ್ಬರಿಗೆ ಸೇರಿದ್ದು ಎನ್ನಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡಿರುವ ಕೋಟ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ.

https://kannada.newsnext.live/brahmavara-corpse-found-in-railway-track-suicide-suspects/

Comments are closed.