ಮೆಕ್ಸಿಕೋ: ಪ್ರತಿಯೊಂದು ದೇಶದಲ್ಲೂ ಆ ದೇಶದ ಸಂಸ್ಕೃತಿಗೆ ಅನುಗುಣವಾಗ ಹಬ್ಬಗಳು ನಡೆಯೋದು ಕಾಮನ್. ಇದಕ್ಕೆ ಪೂರಕ ಎಂಬಂತೆ ಮೆಕ್ಸಿಕೋದಲ್ಲಿ ನ್ಯೂಡ್ ಹಬ್ಬ ನಡೆಯಲಿದೆ. ಸಾವಿರಾರು ಜೋಡಿಗಳು ಸಂಪೂರ್ಣ ಬೆತ್ತಲಾಗಿ ಸಮುದ್ರ ತೀರದಲ್ಲಿ ವಿಹರಿಸೋದು ಈ ಹಬ್ಬದ ವಿಶೇಷತೆ.

ಕೊರೋನಾ ಸಂಕಷ್ಟದ ನಡುವೆ ಜನರು ಹಬ್ಬಗಳನ್ನು ಮರೆತೇ ಬಿಟ್ಟಿದ್ದಾರೆ. ಆದರೆ ಮೆಕ್ಸಿಕ್ಕನ್ನರು ಮರೆತಿಲ್ಲ ನೋಡಿ. ಹೀಗಾಗಿ ಮೆಕ್ಸಿಕೋದಲ್ಲಿ ಮುಂದಿನ ತಿಂಗಳು ಅಲ್ಲಿನ ಬಹುದೊಡ್ಡ ನ್ಯೂಡ್ ಬೀಚ್ ಫೆಸ್ಟಿವಲ್ ನಡೆಯಲಿದೆ. ಸಾವಿರಾರು ಜೋಡಿಗಳು ಏಕಕಾಲದಲ್ಲಿ ಬೆತ್ತಲಾಗಿ ಸಮುದ್ರ ತೀರದಲ್ಲಿ ವಿಹರಿಸುವ ಈ ಹಬ್ಬವನ್ನು ಕೊರೋನಾ ಸಂದರ್ಭದಲ್ಲೂ ಆಚರಿಸಲು ನಿರ್ಧರಿಸಲಾಗಿದೆ.

ಕಳೆದ ಐದು ವರ್ಷಗಳಿಂದ ಮೆಕ್ಸಿಕೋ ಈ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದು, ಫೆಬ್ರವರಿ ತಿಂಗಳಿನ ಮೊದಲ ವೀಕೆಂಡ್ ಇಲ್ಲಿ ಹಬ್ಬವನ್ನು ಆಚರಿಸಲಾಗುತ್ತದೆ. ದಕ್ಷಿಣ ಮೆಕ್ಸಿಕೋದ ಜಿಪೋಲೈಟ್ ಸಮುದ್ರ ತೀರದಲ್ಲಿ ಆಚರಿಸಲಾಗುವ ಈ ಆಚರಣೆಯಲ್ಲಿ ಅಂದಾಜು 4 ಸಾವಿರಕ್ಕೂ ಅಧಿಕ ಜನರು ಮೈಮೇಲೆ ಒಂದು ನೂಲಿನ ಎಳೆಯೂ ಇಲ್ಲದಂತೆ ಭಾಗವಹಿಸುತ್ತಾರೆ.

Federación Nudista de México ಈ ಉತ್ಸವವನ್ನು ಆಯೋಜಿಸುತ್ತ ಬಂದಿದೆ. ಇದು ಇಲ್ಲಿನ ಮೊದಲ ಬೆತ್ತಲ ಬೀಚ್ ಸಂಘಟನೆಯಾಗಿದ್ದು, ಸಂಘಟನೆಯ ವತಿಯಿಂದ ಈ ಉತ್ಸವ ಆಚರಿಸಲ್ಪಡುತ್ತದೆ.

ಕೊರೋನಾ ಸಂಕಷ್ಟದಲ್ಲೂ ಉತ್ಸವ ಆಚರಿಸಲು ಸಂಘಟನೆ ನಿರ್ಧರಿಸಿದೆ. ಪ್ರಸ್ತುತ ಮೆಕ್ಸಿಕೋದಲ್ಲಿ 1.4 ಮಿಲಿಯನ್ ಕೊರೋನಾ ಪ್ರಕರಣಗಳು ವರದಿಯಾಗಿದ್ದು ಈ ಪೈಕಿ 1.30 ಸಾವಿರ ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಆದರೂ ಉತ್ಸವ ನಡೆಸಲು ಮೆಕ್ಸಿಕೋ ಸಜ್ಜಾಗಿದ್ದು, ಬೆತ್ತಲೆಯಾಗಿ ವಿಹರಿಸೋ ಜೋಡಿಗಳು ಮುಖಕ್ಕೆ ಮಾಸ್ಕ್ ಹಾಗೂ ಕೈಗೆ ಸ್ಯಾನಿಟೈಸರ್ ಹಾಕಿಕ್ಕೊಳ್ಳೋದು ಕಡ್ಡಾಯ ಅಂತ ಹೇಳಲಾಗ್ತಿದೆ.