ಆಭರಣ ಪ್ರಿಯರಿಗೆ ಗುಡ್ ನ್ಯೂಸ್ : 10 ಗ್ರಾಂ ಚಿನ್ನಕ್ಕೆ 2,086 ರೂ. ಇಳಿಕೆ

ನವದೆಹಲಿ : ಕಳೆದ ಕೆಲ ತಿಂಗಳಿನಿಂದಲೂ ದಾಖಲೆಯ ಪ್ರಮಾಣದಲ್ಲಿ ಏರಿಕೆಯನ್ನು ಕಾಣುತ್ತಲೇ ಸಾಗಿದ್ದ ಚಿನ್ನ ಇದೀಗ ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಇಂದು ಸಾರ್ವಕಾಲಿಕ ಇಳಿಕೆಯನ್ನು ಕಂಡಿದ್ದು 10 ಗ್ರಾಂ ಚಿನ್ನಕ್ಕೆ ಬರೋಬ್ಬರಿ 2,86 ರೂಪಾಯಿ ಇಳಿಕೆ ಕಂಡಿದೆ.

ಕೊರೊನಾ ಸಂಕಷ್ಟದ ಕಾಲದಲ್ಲಿಯೂ ಚಿನ್ನದ ಬೆಲೆ ಗಗನಮುಖಿಯಾಗಿತ್ತು. ಅಲ್ಲದೇ ಚಿನ್ನದ ಬೆಲೆ ಬರೋಬ್ಬರಿ 70 ಸಾವಿರ ದಾಟಲಿದೆ ಅಂತಾನೂ ಹೇಳಲಾಗುತ್ತಿತ್ತು. ಆದ್ರೀಗ ಚಿನ್ನದ ಬೆಲೆ ಇಳಿಕೆ ಕಂಡಿರುವುದು ಆಭರಣ ಪ್ರಿಯರಿಗೆ ಖುಷಿಯನ್ನು ಕೊಟ್ಟಿದೆ.
ಕಳೆದೆರಡು ದಿನಗಳಿಂದಲೂ ಇಳಿಕೆಯತ್ತ ಮುಖ ಮಾಡಿರುವ ಬಂಗಾರದ ಬೆಲೆ ಇಂದು ಕೂಡ ದಾಖಲೆಯ ಪ್ರಮಾಣದಲ್ಲಿ ಕುಸಿತ ಕಂಡಿದೆ.

ಪ್ರತಿ 10 ಗ್ರಾಂ. ಚಿನ್ನದ ಬೆಲೆಯಲ್ಲಿ 2,000 ರೂಪಾಯಿಗಿಂತಲೂ ಹೆಚ್ಚು ಇಳಿಕೆಯಾಗಿದ್ದು, ಪ್ರತೀ 10 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 2,086 ರೂಪಾಯಿ ಇಳಿಕೆಯಾಗಿದೆ. ಈ ಮೂಲಕ ಚಿನ್ನದ ಬೆಲೆ 48,818 ಇಳಿಕೆಯನ್ನು ಕಂಡಿದೆ.

ಕೇವಲ ಚಿನ್ನಾಭರಣಗಳ ಬೆಲೆ ಮಾತ್ರವಲ್ಲ, ಬೆಳ್ಳಿಯ ಬೆಲೆಯಲ್ಲಿಯೂ ದಾಖಲೆಯ ಪ್ರಮಾಣದಲ್ಲಿ ಇಳಿಕೆಯನ್ನು ಕಂಡದ್ದು, ಪ್ರತೀ ಕೆ.ಜಿ ಬೆಳ್ಳಿಯ ದರದಲ್ಲಿ 6,112 ರೂಪಾಯಿಗಳಷ್ಟು ಕುಸಿದಿದ್ದು, ಪ್ರತಿ ಕೆಜಿ ಬೆಳ್ಳಿಯ ಬೆಲೆ 63,850 ಬಂದು ತಲುಪಿದೆ.

Comments are closed.