ನವದೆಹಲಿ : ಕರ್ತವ್ಯದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸರಕಾರಿ ನೌಕರರಿಗೆ ಬಯೋಮೆಟ್ರಿಕ್ಸ್ ಹಾಜರಾತಿಯನ್ನು ಕಡ್ಡಾಯಗೊಳಿಸಿತ್ತು. ಇದರಿಂದಾಗಿ ನೌಕರರು ಸರಿಯಾದ ಸಮಯಕ್ಕೆ ಕಚೇರಿ ಕೆಲಸಗಳಿಗೆ ಹಾಜರಾಗುತ್ತಿದ್ರು. ಜನಸಾಮಾನ್ಯರು ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಲು ಸರಕಾರದ ಕ್ರಮ ಸಹಕಾರವಾಗಿತ್ತು. ಆದ್ರೀಗ ಸರಕಾರಿ ನೌಕರರು ಹಾಜರಾತಿಗೆ ಬಯೋ ಮೆಟ್ರಿಕ್ಸ್ ಬಳಸೋದು ಬೇಡಾ ಅಂತಾ ಆದೇಶ ಹೊರಡಿಸಿದ್ದು, ನಿತ್ಯವೂ ಅಟೆಂಡೆನ್ಸ್ ಪುಸ್ತಕದಲ್ಲಿ ಸಹಿ ಹಾಕುವಂತೆ ಸೂಚಿಸಿದೆ.

ಅಷ್ಟಕ್ಕೂ ಸರಕಾರ ಈ ಆದೇಶ ಹೊರಡಿಸಿರೋದು ಕೊರೊನಾ ವೈರಸ್ ಭೀತಿಯಿಂದಾಗಿ. ದೇಶದಲ್ಲಿ ಕೊರೊನಾ ವೈರಸ್ ಹೆಚ್ಚುತ್ತಿರೋ ಹಿನ್ನೆಲೆಯಲ್ಲಿ ಸರಕಾರ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಸರಕಾರಿ ನೌಕರರು ನಿತ್ಯವೂ ಹಾಜರಾತಿಗೆ ಬಯೋಮೆಟ್ರಿಕ್ಸ್ ಬಳಕೆ ಮಾಡುವುದರಿಂದ ಕೊರೊನಾ ವೈರಸ್ ಹರಡುವ ಸಾಧ್ಯತೆಯಿದೆ. ಹೀಗಾಗಿ ಕೇಂದ್ರ ಸರಕಾರದ ಕುಂದು ಕೊರತೆ ಮತ್ತು ಪಿಂಚಣಿ ಸಚಿವಾಲಯ ಈ ಆದೇಶ ಹೊರಡಿಸಿದ್ದು, ಈ ಆದೇಶ ಮಾರ್ಚ್ 31ರ ವರೆಗೆ ಜಾರಿಯಲ್ಲಿರುತ್ತದೆ.