ಸಚಿನ್, ಸೆಹ್ವಾಗ್ ಅಬ್ಬರಕ್ಕೆ ಮುಗ್ಗರಿಸಿ ವೆಸ್ಟ್ ಇಂಡಿಸ್

0

ಮುಂಬೈ : ಭಾರತದ ಸ್ಪೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಅವರ ಅರ್ಧಶತಕ ಹಾಗೂ ಸಚಿನ್ ತೆಂಡೂಲ್ಕರ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಭಾರತ ರೋಡ್ ಸೇಫ್ಟಿ ವಲ್ಡ್ ಸೀರಿಸ್ ನ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡಿಸ್ ವಿರುದ್ದ ಭಾರತ 7 ವಿಕೆಟ್ ಗಳ ಅಂತರದಿಂದ ಗೆಲುವು ಸಾಧಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಬ್ರಾಯಾನ್ ಲಾರಾ ನಾಯಕತ್ವದ ವೆಸ್ಟ್ ಇಂಡಿಸ್ ಲೆಜೆಂಡ್ಸ್ ಉತ್ತಮ ಬ್ಯಾಟಿಂಗ್ ನಡೆಸಿದ್ರು. ವೆಸ್ಟ್ ಇಂಡಿಸ್ ಲೆಜೆಂಡ್ಸ್ ಪರ ಆರಂಭಿಕರಾಗಿ ಅಂಗಳಕ್ಕೆ ಇಳಿದ ಡಾರೆನ್ ಗಂಗಾ ಮತ್ತು ಶಿವನಾರಾಯಣ್ ಚಂದ್ರಪಾಲ್ ಭರ್ಜರಿ ಆರಂಭವೊದಗಿಸಿದ್ರು. ಡ್ಯಾರೆನ್ ಗಂಗಾ ಅಬ್ಬರದ ಆಟಕ್ಕೆ ಮುಂದಾದ್ರು. 24 ಎಸೆತಗಳಲ್ಲಿ 32 ರನ್ ಗಳಿಸಿದ್ದ ಗಂಗಾ ಜಹೀರ್ ಖಾನ್ ಗೆ ಬೌಲ್ಡ್ ಆದ್ರು.

ನಂತರ ಶಿವನಾರಾಯಣ ಚಂದ್ರಪಾಲ್ ಜೊತೆಯಾದ ಬ್ರಾಯನ್ ಲಾರಾ, 15 ಎಸೆತಗಳಲ್ಲಿ 17 ರನ್ ಗಳಿಸಿದ್ರು. ಆದರೆ ಪ್ರಗ್ಯಾಜ್ ಓಜಾಗೆ ವಿಕೆಟ್ ಒಪ್ಪಿಸಿದ್ರೆ, ಹಯತ್ 12 ರನ್ ಗೆ ತನ್ನ ಆಟ ಮುಗಿಸಿದ್ರು. ಕಾರ್ಲ ಹೂಪರ್ 2, ರೆಕಾರ್ಡೋ ಪಾವೆಲ್ 1 ಹಾಗೂ ರೆಡ್ಲಿ ಜಾಕಬ್ಸ್ 2 ರನ್ ಗಳಿಸಿ ಔಟಾದ್ರು.

ಒಂದೆಡೆ ವಿಕೆಟ್ ಉರುಳುತ್ತಿದ್ರು ಕೂಡ ತಾಳ್ಮೆಯ ಆಟ ಪ್ರದರ್ಶಿಸಿದ ಶಿವನಾರಾಯಣ ಚಂದ್ರಪಾಲ್ 41 ಎಸೆತಗಳಲ್ಲಿ ಭರ್ಜರಿ 4 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 61 ರನ್ ಗಳಿಸಿದ್ರು. ಉತ್ತಮ ಆಟವಾಡುತ್ತಿದ್ದ ಟೀನ್ ಬೆಸ್ಟ್ 11 ರನ್ ಗಳಿಸಿದ್ದಾ ಸಮೀರ್ ದಿಗ್ಗೆ ರನೌಟ್ ಬಲೆಗೆ ಬಿದ್ರು.

ಅಂತಿಮವಾಗಿ ವೆಸ್ಟ್ ಇಂಡಿಸ್ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 150 ರನ್ ಗಳಿಸಿತು. ಭಾರತ ಪರ ಜಹೀರ್ ಖಾನ್ 30/2, ಮುನಾಪ್ ಪಟೇಲ್ 24/2, ಪ್ರಗ್ಯಾನ್ ಓಜಾ 27/2 ಹಾಗೂ ಇರ್ಪಾನ್ ಪಠಾಣ್ 21 ರನ್ ನೀಡಿ 1 ವಿಕೆಟ್ ಪಡೆದಿದ್ದಾರೆ.

ವೆಸ್ಟ್ ಇಂಡಿಸ್ ನೀಡಿದ್ದ 150 ರನ್ ಟಾರ್ಗೆಟ್ ಬೆನ್ನತ್ತಿದ್ದ ಭಾರತ ಲೆಜೆಂಡ್ಸ್ ಪರ ಲೆಜೆಂಡ್ಸ್ ಓಪನರ್ ಆಗಿರೋ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಹಾಗೂ ಸ್ಪೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹವಾಗ್ ಭರ್ಜರಿ ಆರಂಭವೊದಗಿಸಿದ್ರು. ವೆಸ್ಟ್ ಇಂಡಿಸ್ ಬೌಲರ್ ಗಳನ್ನ ಮನಬಂದಂತೆ ಥಳಿಸಿದ ಸಚಿನ್ ಹಾಗೂ ಸೆಹ್ವಾಗ್ ಜೋಡಿ ಅರ್ಧ ಶತಕದ ಜೊತೆಯಾಟ ನೀಡಿದ್ರು. 7 ಬೌಂಡರಿ ಸಹಿತ 29 ಎಸೆತಗಳಲ್ಲಿ 36 ರನ್ ಗಳಿಸಿದ್ದ ಸಚಿನ್ ಬೆನ್ ಎಸೆತಕ್ಕೆ ಬಲಿಯಾದ್ರು. ನಂತರ ಸೆಹ್ವಾಗ್ ಜೊತೆಯಾದ ಮೊಹಮದ್ ಕೈಫ್ ಉತ್ತಮ ಬ್ಯಾಟಿಂಗ್ ನಡೆಸಿದ್ರು.

16 ಎಸೆತಗಳಲ್ಲಿ 14 ರನ್ ಗಳಿಸಿದ್ದ ಕೈಫ್ ಚಾಲ್ಸ್ ಹೂಪರ್ ಗೆ ವಿಕೆಟ್ ಒಪ್ಪಿಸಿದ್ರೆ, ನಂತರ ಬಂದ ಮನ್ ಪ್ರಿತ್ ಗೊನಿ ಹೂಪರ್ ಗೆ ಬೌಲ್ಡ್ ಆದ್ರು. ಮೂರು ವಿಕೆಟ್ ಪತನವಾಗುತ್ತಲೇ ಮೈದಾನಕ್ಕಿಳಿದ ಯುವರಾಜ್ ಸಿಂಗ್ 7 ಎಸೆತಗಳಲ್ಲಿ 10 ರನ್ ಗಳಿಸಿದ್ರೆ, ವೀರೇಂದ್ರ ಸೆಹವಾಗ್ 11 ಬೌಂಡರಿ ನೆರವಿನಿಂದ 57 ಎಸೆತಗಳಲ್ಲಿ 74 ರನ್ ಬಾರಿ ಅಜೇಯರಾಗಿ ಉಳಿದರು. ಈ ಮೂಲಕ ಭಾರತ 18.2 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿದೆ. ವೆಸ್ಟ್ ಇಂಡಿಸ್ ಪರ ಚಾಲ್ಸ್ ಕೂಪರ್ 19/2 ಹಾಗೂ ಸುಲೇಮಾನ್ ಬೆನ್ 26/1 ವಿಕೆಟ್ ಪಡೆದಿದ್ದಾರೆ.
ಸಂಕ್ಷಿಪ್ತ ಸ್ಕೋರ್ :
ಭಾರತ ಲೆಜೆಂಡ್ಸ್ : ವೀರೇಂದ್ರ ಸೆಹ್ವಾಗ್ ಔಟಾಗದೆ 74 (57), ಸಚಿನ್ ತೆಂಡೂಲ್ಕರ್ 36 (29), ಮೊಹಮದ್ ಕೈಪ್ 14 (16), ಯುವರಾಜ್ ಸಿಂಗ್ ಔಟಾಗದೆ 10 (7), ಚಾಲ್ಸ್ ಕೂಪರ್ 19/2, ಸುಲೇಮಾನ್ ಬೆನ್ 26/1
ವೆಸ್ಟ್ ಇಂಡಿಸ್ ಲೆಜೆಂಡ್ಸ್ : ಡ್ಯಾರೆನ್ ಗಂಗಾ 32 (24), ಶಿವನಾರಾಯಣ್ ಚಂದ್ರಪಾಲ್ 61 (41), ಬ್ರಯಾನ್ ಲಾರಾ 17( 15), ಡನ್ಜಾ ಹಯಾತ್ 12 (16), ಟೀನೋ ಬೆಸ್ಟ್ 11 (5), ಜಹೀರ್ ಖಾನ್ 30/2, ಮುನಾಪ್ ಪಟೇಲ್ 24/2, ಪ್ರಗ್ಯಾನ್ ಓಜಾ 27/2, ಇರ್ಪಾನ್ ಪಠಾಣ್ 21/1

Leave A Reply

Your email address will not be published.