ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕಿಲ್ವಂತೆ ಅವಕಾಶ….! ಮೋದಿ ಸಹೋದರನ ಮಗಳಿಗೂ ಸಿಗಲಿಲ್ಲ ಟಿಕೇಟ್…!!

ಅಹಮದಾಬಾದ್: ಒಬ್ಬ ಎಂಎಲ್ಎ ತನ್ನ ಕುಟುಂಬವನ್ನೆಲ್ಲ ರಾಜಕಾರಣ ಕ್ಕೆ ತಂದು ನಿಲ್ಲಿಸುವ ಕಾಲದಲ್ಲಿ ಪ್ರಧಾನಿ‌ ಮೋದಿ ಅಣ್ಣನ‌ ಮಗಳಿಗೆ ಬಿಜೆಪಿ ಎಲೆಕ್ಷನ್ ಟಿಕೇಟ್ ನಿರಾಕರಿಸಿ ಅಚ್ಚರಿ ಮೂಡಿಸಿದೆ.

ಅಹ್ಮದಾಬಾದ್ ಮಹಾನಗರ ಪಾಲಿಕೆ ಚುನಾವಣೆ ವೇಳೆ ಮೋದಿ ಸಹೋದರ ಪ್ರಹ್ಲಾದ್ ಮೋದಿ ಪುತ್ರಿ ಸೋನಾಲ್‌ಮೋದಿಗೆ ಟಿಕೇಟ್ ನೀಡಲು ಸ್ಥಳೀಯ ಬಿಜೆಪಿ ನಿರಾಕರಿಸಿದೆ.

ಅಹ್ಮದಾಬಾದ್ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ದು ಈ ಪಟ್ಟಿಯಲ್ಲಿ ಸ್ಥಾನ ಪಡೆಯಲು ಮೋದಿ ಅಣ್ಣನ ಮಗಳು ಸೋನಾಲ್ ವಿಫಲರಾಗಿದ್ದಾರೆ.

೩೦ ವರ್ಷದ ಸೋನಾಲ್  ಬೋದಕ್ ದೇವ್ ವಾರ್ಡ್ ನಿಂದ ಬಿಜೆಪಿಯಿಂದ ಕಣಕ್ಕಿಳಿಯಲು ಬಯಸಿದ್ದರು. ಅಲ್ಲದೇ ಮೋದಿಯವರ ಹೆಸರಿನ ಬಲದಿಂದ ಅಲ್ಲ ಬಿಜೆಪಿ ಕಾರ್ಯಕರ್ತೆಯಾಗಿ ಈ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುತ್ತೇನೆ ಎಂದು ಸೋನಲ್ ಹೇಳಿದ್ದರು. ಆದರೂ ಬಿಜೆಪಿ ಟಿಕೇಟ್ ಗಿಟ್ಟಿಸುವಲ್ಲಿ ಸೋನಲ್ ವಿಫಲರಾಗಿದ್ದಾರೆ.

ಫೆ.21 ಹಾಗೂ 28 ರಂದು ಚುನಾವಣೆ ನಡೆಯಲಿದೆ.  ಸೋನಲ್ ಅಹ್ಮದಾಬಾದ್ ನಗರದಲ್ಲಿ ನ್ಯಾಯಬೆಲೆ ಅಂಗಡಿಯನ್ನು ಹೊಂದಿದ್ದು, ನಗರದ ಫೇರ್ ಪ್ರೈಸ್ ಶಾಪ್ ಅಸೋಸಿಯೇಶನ್ ಅಧ್ಯಕ್ಷರು ಕೂಡ ಆಗಿದ್ದಾರೆ. ಆದರೂ ಬಿಜೆಪಿ ಟಿಕೇಟ್ ನಿರಾಕರಿಸಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಮೂಲಗಳ ಮಾಹಿತಿ ಪ್ರಕಾರ ಅಹ್ಮದಾಬಾದ್ ಬಿಜೆಪಿ ಸ್ಥಳೀಯ ಸಂಸ್ಥೆ ಸೇರಿದಂತೆ ವಿವಿಧ ಚುನಾವಣೆಗಳಿಗೆ ಟಿಕೇಟ ಬಯಸುವ ಅಭ್ಯರ್ಥಿಗಳಿಗೆ ಕೆಲವೊಂದು ನಿಯಮ ವಿಧಿಸಿದೆ. ಈ ನಿಯಮಗಳ ಆಧಾರದಲ್ಲಿ ಸೋನಲ್ ಟಿಕೇಟ್ ನಿಂದ ವಂಚಿತರಾಗಿದ್ದಾರೆ ಎನ್ನಲಾಗಿದೆ.

ಕುಟುಂಬ ರಾಜಕಾರಣವನ್ನು ದೂರವಿಡಲು ಬಿಜೆಪಿ ಸಿದ್ಧವಾಗಿದೆ ಎಂಬ ಸಂದೇಶ ನೀಡಲು ಬಿಜೆಪಿ ಸರ್ಕಸ್ ಆರಂಭಿಸಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಜನರು ಟೀಕಿಸುತ್ತಿದ್ದಾರೆ. ಒಟ್ಟಿನಲ್ಲಿ ಸೋನಲ್ ಗೆ ಚುನಾವಣೆ ಸ್ಪರ್ಧಿಸಲು ಬಿಜೆಪಿ ಅವಕಾಶ ನೀಡದೇ ಇರೋದು ಸಾಕಷ್ಟು ಪ್ರಚಾರ ಪಡೆದುಕೊಂಡಿದೆ. ಕೆಲದಿನಗಳ ಹಿಂದೆಯಷ್ಟೇ ಸೋನಲ್ ತಂದೆ ಹಾಗೂ ಮೋದಿ ಸಹೋದರ ಪ್ರಹ್ಲಾದ್ ಮೋದಿ ಲಖ್ನೋ ಏರ್ಪೋರ್ಟ್ ನಲ್ಲಿ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿ ಸುದ್ದಿಯಾಗಿದ್ದರು.

Comments are closed.