ರೈತರ ಹೋರಾಟ ಬೆಂಬಲಿಸಿದ್ರಾ ಮೈಸೂರು ಯುವರಾಜ?! ಯದುವೀರ್ ಟ್ವೀಟ್ ನ ಅಸಲಿಯತ್ತೇನು ಗೊತ್ತಾ?!

ಸದಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದರೂ ವಿವಾದಗಳಿಂದ ಸದಾ ದೂರ ಉಳಿದು ಘನತೆ ಕಾಪಾಡಿಕೊಂಡ ಮೈಸೂರು ಯುವರಾಜ ಯದುವೀರ್ ಒಡೆಯರ ರೈತರನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದು, ಈಗ ಚರ್ಚೆಗೆ ಗ್ರಾಸವಾಗಿದೆ. ಯದುವೀರ್ ರೈತರ ಹೋರಾಟ ಬೆಂಬಲಿಸಿದ್ದು ಸರಿ/ತಪ್ಪು ಎಂಬ ಚರ್ಚೆ ಆರಂಭವಾಗಿದೆ.

ಮೈಸೂರಿನ ಯುವರಾಜ ಯದುವೀರ್ ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟ ಬೆಂಬಲಿಸಿ ಟ್ವೀಟ್ ಮಾಡಿದ್ದು, ಕರ್ನಾಟಕದಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ. ಆದರೆ ಈ ವಿವಾದದ ಆರಂಭದಲ್ಲೇ ಅಂತ್ಯ ಹಾಡಿರುವ ಯುವರಾಜ ಯದುವೀರ್ ತಮ್ಮ ಹೆಸರಿನಲ್ಲಿ ಫೇಕ್ ಅಕೌಂಟ್ ಕ್ರಿಯೆಟ್ ಮಾಡಿ ಟ್ವೀಟ್ ಮಾಡಲಾಗಿದೆ ಎಂದಿದ್ದಾರೆ.

https://twitter.com/YaduveerWodiyar/status/1357339690911756294?s=08

ಯದುವೀರ ಕೆ ಸಿ ಒಡೆಯರ್ ಎಂಬ ಹೆಸರಿನಲ್ಲಿ ಟ್ವೀಟರ್ ಅಕೌಂಟ್ ಸೃಷ್ಟಿಸಲಾಗಿದ್ದು, ಅದರಲ್ಲಿ ರೈತರ ಸಂಕಷ್ಟಕ್ಕೆ ಸ್ಪಂದಿಸುವುದು ನಮ್ಮ ಆದ್ಯ ಕರ್ತವ್ಯ, ಮಾನ್ಯ ನರೇಂದ್ರಮೋದಿಯವರಿಗೆ ಸಮಸ್ಯೆ ಬಗೆಹರಿಸಿ ಎಂಬರ್ಥದಲ್ಲಿ ಟ್ವೀಟ್ ಮಾಡಲಾಗಿದೆ.

ಆದರೆ ಇನ್ ಸ್ಟಾಗ್ರಾಂನಲ್ಲಿ ಈ ಬಗ್ಗೆ ಪೋಸ್ಟ್ ಹಾಕಿ ಸ್ಪಷ್ಟನೆ ನೀಡಿರುವ ಯದುವೀರ್ ಒಡೆಯರ, ಇದು ತಮ್ಮ ಹೆಸರಿನಲ್ಲಿ ತೆಗೆಯಲಾದ ನಕಲಿ ಅಕೌಂಟ್. ಆ ಟ್ವೀಟರ್ ಖಾತೆಗೂ ನನಗೂ ಸಂಬಂಧವಿಲ್ಲ ಎಂದಿದ್ದಾರೆ. ನಕಲಿ ಟ್ವೀಟರ್ ಖಾತೆಯ ಸ್ಕ್ರೀನ್ ಶಾಟ್ ಜೊತೆ ಪೋಸ್ಟ್ ಹಾಕಿರುವ ಯದುವೀರ್ ಒಡೆಯರ ಇದು ಫೇಕ್ ಅಕೌಂಟ್ ಎಂದಿದ್ದಾರೆ.

ಈ ಅಕೌಂಟ್ ಗೂ ನನಗೂ ಯಾವುದೇ ಸಂಬಂಧವಿಲ್ಲ. ಈ ಖಾತೆಯಲ್ಲಿ ವ್ಯಕ್ತಪಡಿಸಲಾದ ಅಭಿಪ್ರಾಯ ನನ್ನದಾಗಲಿ ಅಥವಾ ಮೈಸೂರು ಅರಮನೆಯದಾಗಲಿ ಅಲ್ಲ ಎಂದಿದ್ದಾರೆ. ಆದರೆ ರೈತ ಹೋರಾಟದ ಬಗ್ಗೆ ತಮ್ಮಅಭಿಪ್ರಾಯ ಏನು ಎಂಬುದನ್ನು ಯುವರಾಜ್ ಯದುವೀರ್ ಹೇಳಿಲ್ಲ.

ಮೈಸೂರು ಯುವರಾಜ ಯದುವೀರ್ ಹೆಸರಿನಲ್ಲಿ ನಕಲಿ ಟ್ವೀಟರ್  ಖಾತೆ ಸೃಷ್ಟಿಯಾಗಿರುವ ಸಂಗತಿ ತಿಳಿದ ಮೈಸೂರು ಸೈಬರ್ ಕ್ರೈಂ ಪೊಲೀಸರು ಇದೀಗ ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.

Comments are closed.