ಕೊರೊನಾ ವೈರಸ್ ಸೋಂಕು ವಿಶ್ವವನ್ನೇ ತಲ್ಲಣಗೊಳಿಸಿದೆ. ಕೊರೊನಾ ಮಹಾಮಾರಿಯಿಂದಾಗಿ ಎಲ್ಲಿ ಹೋದ್ರು ಸ್ಯಾನಿಟೈಸರ್ ಬಳಕೆ ಕಡ್ಡಾಯ ಗೊಳಿಸಲಾಗಿದೆ. ಊಟ ತಿಂಡಿಗೆ ಮೊದಲು ಕೈ ತೊಳೆದು ತಿನ್ನುವುದು ಮಾಮೂಲು. ಆದ್ರೆ ಕೊರೊನಾ ಸೋಂಕು ಪತ್ತೆಯಾದ ನಂತರದಲ್ಲಿ ಯಾವುದನ್ನು ತಿನ್ನ ಬೇಕಾದ್ರೂ ಕೈ ಶುಚಿಯಾಗಿರಲೇ ಬೇಕು. ಆದರೆ ಹೊರಗಡೆಯಲ್ಲಿ ಕೈ ತೊಳೆಯುವ ವ್ಯವಸ್ಥೆ ಸಿಗೋದು ಡೌಟು. ಹೀಗಾಗಿ ಅನಿವಾರ್ಯವಾಗಿ ಇಂದು ಹ್ಯಾಂಡ್ ಸ್ಯಾನಿಟೈಸರ್ ಬಳಕೆಯಾಗುತ್ತಿದೆ.

ಕೊರೊನಾ ಹಿನ್ನೆಲೆಯಲ್ಲಿ ಶಾಪ್, ಮಾಲ್ , ಹೋಟೆಲ್, ಆಫೀಸ್ ಎಲ್ಲಿಗೆ ಹೋದ್ರೂ ಸ್ಯಾನಿಟೈಸರ್ ಬಳಕೆ ಅನಿವಾರ್ಯವಾಗಿದೆ. ಕೊರೊನಾ ವೈರಸ್ ನೆಪದಲ್ಲಿ ನಾವು ಬೆಳಗಿನಿಂದ ಸಂಜೆಯವರೆಗೆ ಕನಿಷ್ಠ 10ಕ್ಕೂ ಅಧಿಕ ಬಾರಿ ಸ್ಯಾನಿಟೈಸರ್ ಬಳಕೆ ಮಾಡುತ್ತಿದ್ದೇವೆ.
ಅದ್ರಲ್ಲೂ ಒಂದೊಂದು ಕಡೆಗಳಲ್ಲಿ ಒಂದೊಂದು ಸ್ಯಾನಿಟೈಸರ್ ಬಳಕೆ ಮಾಡುವುದು ಹೆಚ್ಚು ಅಪಾಯಕಾರಿ. ಅತಿಯಾಗಿ ಸ್ಯಾನಿಟೈಸರ್ ಬಳಕೆ ಮಾಡುವುದರಿಂದ ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಂದು ಕಾಣಿಸಿಕೊಳ್ಳುತ್ತಿದೆ.

ಸ್ಯಾನಿಟೈಸರ್ ನಲ್ಲಿ ಬಳಕೆ ಮಾಡುತ್ತಿರುವ ಮೆಥೆನಾಲ್ ಅಂಶ ಹೆಚ್ಚು ಅಪಾಯಕಾರಿಯಾಗಿದೆ. ಸ್ಯಾನಿಟೈಸರ್ ಬಳಕೆಯ ಕುರಿತು ಎಫ್ ಡಿಎ ಈಗಾಗಲೇ ಎಚ್ಚರಿಕೆಯನ್ನು ನೀಡಿದ್ದು, ಸ್ಯಾನಿಟೈಸರ್ ದೇಹವನ್ನು ಸೇರಿದರೆ ದೇಹದ ಅಂಗಾಂಗಳಿಗೆ ಹಾನಿಯುಂಟು ಮಾಡುವುದು, ಇದರಿಂದ ಕುರುಡುತನ ಕೂಡ ಉಂಟಾಗುವುದು.

ಸೇಫ್ಟಿ ಡಾಕ್ಯೂಮೆಂಟ್ ಪ್ರಕಾರ ಸ್ಯಾನಿಟೈಸರ್ನಿಂದ ತಲೆಸುತ್ತು, ವಾಂತಿ, ಬೇಧಿ ಮುಂತಾದ ಸಮಸ್ಯೆ ಉಂಟಾಗುವುದು. ಅಲ್ಲದೆ ಖಿನ್ನತೆ, ತಲೆನೋವು, ಸುಸ್ತು ಮುಂತಾದ ಅನುಭವ ಉಂಟಾಗುವುದು. ಇದು ಸ್ವಲಪ್ ಹೊಟ್ಟೆಗೆ ಹೋದರೂ ಉಸಿರಾಟ ತೀ ವ್ರವಾಗುವುದು, ಹೃದಯ ಬಡಿತ ನಿಧಾನವಾಗು ವುದು, ಕಿಡ್ನಿ ಸಮಸ್ಯೆ ಸೇರಿದಂತೆ ಸಾವನ್ನು ತರಬಲ್ಲದು.

ಸಂಪೂರ್ಣ ಸ್ವಚ್ಛ ಮಾಡುವ, ESk ಬಯೋಕೆಮ್ ಹ್ಯಾಂಡ್ ಸ್ಯಾನಿಟೈಸರ್ , ಸೋಂಕಾಣು ಸಂಪೂರ್ಣ ನಾಶ ಮಾಡುವ ಹ್ಯಾಂಡ್ ಸ್ಯಾನಿಟೈಸರ್, ಲಾವರ್ 70 ಜೆಲ್ ಹ್ಯಾಂಡ್ ಸ್ಯಾನಿಟೈಸರ್, ಬ್ಯಾಕ್ಟಿರಿಯಾ ನಾಶ ಪಡಿಸುವ ಹ್ಯಾಂಡ್ ಸ್ಯಾನಿಟೈಸರ್, ಶೇ. 80ರಷ್ಟು ಆಲ್ಕೋಹಾಲ್ ಇರುವ, ಶೇ. 75ರಷ್ಟು ಆಲ್ಕೋಹಾಲ್ ಇರುವ , ಕ್ಲೀನ್ಕೇರ್ ನೋ ಜೆರ್ಮ್ ಸ್ಯಾನಿಟೈಸರ್, ಸ್ಯಾನಿಡ್ರೆಮ್ ಅಡ್ವಾನ್ಸ್ಡ್, ದೇಹದ ಸೂಕ್ಷ್ಮಜೀವಿಗಳಿಗೆ ಹಾನಿ ನಮ್ಮ ದೇಹದಲ್ಲಿ ಕೂಡ ಕೆಲವು ಸೂಕ್ಷ್ಮ ಜೀವಿಗಳು ಇರುತ್ತವೆ.

ಇದು ನಮ್ಮ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀರುವಂತದ್ದಾಗಿದೆ. ಆದರೆ ಸ್ಯಾನಿಟೈಸರ್ ಇದೆಲ್ಲವನ್ನು ನಾಶ ಮಾಡುವ ಪರಿಣಾಮವಾಗಿ ಅದರಿಂದ ನಮಗೆ ತೊಂದರೆ ಆಗಬಹುದು. ಹೀಗಾಗಿ ಸ್ಯಾನಿಟೈಸರ್ ನ್ನು ಅತಿಯಾಗಿ ಬಳಕೆ ಮಾಡಬಾರದು.

ಸ್ಯಾನಿಟೈಸರ್ ಬಳಕೆಯ ಬದಲು ಹೆಚ್ಚು ಬಾರಿ ಸೋಪಿನಿಂದ ಕೈ ತೊಳೆಯುವ ರೂಢಿ ಮಾಡಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಬಹಳ ಉತ್ತಮ. ಅದ್ರಲ್ಲೂ ಮಕ್ಕಳು ಅತೀ ಹೆಚ್ಚು ಸಂಖ್ಯೆಯಲ್ಲಿ ಸ್ಯಾನಿಟೈಸರ್ ಬಳಕೆಯತ್ತ ಆಕರ್ಷಿತರಾಗಿದ್ದಾರೆ. ಆದರೆ ಸ್ಯಾನಿಟೈಸರ್ ಬಳಕೆಯಿಂದ ಮಕ್ಕಳನ್ನು ಆದಷ್ಟು ದೂರ ಇಡುವುದು ಬಹಳ ಉತ್ತಮ.
