ಮಗಳನ್ನು ತೆರೆಗೆ ತರುವ ಮುನ್ನವೇ ಮರೆಯಾದ ರಾಮು…! ಸ್ಯಾಂಡಲ್ ವುಡ್ ನ ಕೋಟಿನಿರ್ಮಾಪಕ ಕೊರೋನಾಗೆ ಬಲಿ…!!

ಬೇರೆ ಬೇರೆ ಭಾಷೆಗಳಲ್ಲಿ ಸಾಮಾನ್ಯವಾಗಿದ್ದ ಬಿಗ್ ಬಜೆಟ್ ಸಿನಿಮಾವನ್ನು ಕನ್ನಡಕ್ಕೆ ತಂದ ಖ್ಯಾತಿಯ ನಿರ್ಮಾಪಕ ರಾಮು ಕೊರೋನಾಗೆ ಬಲಿಯಾಗಿದ್ದಾರೆ.  ಸ್ಯಾಂಡಲ್ ವುಡ್ ನ ಹಲವು ನಟ-ನಟಿಯರನ್ನು ಲಾಂಚ್ ಮಾಡಿ ಸಿನಿಭವಿಷ್ಯ ಬರೆದಿದ್ದ ರಾಮು ಮಗಳನ್ನು ತೆರೆಗೆ ತರುವ ಕನಸನ್ನು ಅಪೂರ್ಣವಾಗಿ ಬಿಟ್ಟು  ಮರೆಯಾಗಿದ್ದಾರೆ.

ಕೊರೊನಾ ಸಂಕಷ್ಟ, ಸರಕಾರಿ ನೌಕರರ 1 ತಿಂಗಳ ವೇತನ ಕಡಿತ : ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ…!!!!

ಮಾಲಾಶ್ರೀ ಹಾಗೂ ರಾಮು ಸ್ಯಾಂಡಲ್ ವುಡ್ ನ ಬಹುಜನಪ್ರಿಯ ನಟಿ ಹಾಗೂ ನಿರ್ಮಾಪಕ ಜೋಡಿ.  ಗೋಲಿಬಾರ್ ನಿಂದ ಆರಂಭಿಸಿ ಮುಂಬೈ,99 ತನಕ 30 ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಿಸಿದ್ದ ನಿರ್ಮಾಪಕ ರಾಮು  ಮಗಳನ್ನು  ಸ್ಯಾಂಡಲ್ ವುಡ್ ನಲ್ಲಿ ನಟಿಯಾಗಿ ನೋಡುವ ಕನಸಿನಲ್ಲಿದ್ದರು.

ಅದಕ್ಕಾಗಿ ಮಾಲಾಶ್ರಿ ಹಾಗೂ ರಾಮು ತಮ್ಮ ಹಿರಿಯ ಪುತ್ರಿ ಅನನ್ಯಾಳ ತೆರೆಗೆ ತರಲು ಸಿದ್ಧತೆ ನಡೆಸಿದ್ದು ಈಗಾಗಲೇ ಪೋಟೋಶೂಟ್ ಕೂಡ ನಡೆಸಿದ್ದರು.

BIG BREAKING :ನಟಿ ಮಾಲಾಶ್ರೀ ಪತಿ, ಹಿರಿಯ ನಿರ್ಮಾಪಕ ರಾಮು ಕೊರೊನಾಗೆ ಬಲಿ

ಆದರೆ ಮಗಳನ್ನು ತೆರೆಗೆ ತರುವ ರಾಮು ಹಾಗೂ ಮಾಲಾಶ್ರೀ ಕನಸಿಗೆ  ಕೊರೋನಾ ಅಡ್ಡಿಯಾಗಿತ್ತು. ಹೀಗಾಗಿ ತಮ್ಮ ಕನಸನ್ನು ಸದ್ಯಕ್ಕೆ ಮುಂದೂಡಿದ್ದರು.

ಆದರೆ ಈ ಆಸೆಯನ್ನು ಈಡೇರಿಸಿಕೊಳ್ಳುವ ಮುನ್ನವೇ ರಾಮು ಕೊರೋನಾದಿಂದ ಸಾವನ್ನಪ್ಪಿದ್ದಾರೆ.

ಧಿಡೀರ್ ಬರಸಿಡಿಲಿನಂತೆ ಬಂದೆರಗಿದ  ಸುದ್ದಿ ಸ್ಯಾಂಡಲ್ ವುಡ್ ನಲ್ಲಿ ತಲ್ಲಣ ಉಂಟು ಮಾಡಿದೆ. ದೇವರಾಜ್,ಜೋಗಿ ಸೇರಿದಂತೆ ಎಲ್ಲ ಗಣ್ಯರು ರಾಮು ನಿಧನಕ್ಕೆ ಕಣ್ಣೀರಾಗಿದ್ದು, ಕನ್ನಡಕ್ಕೆ ಕೋಟಿ ಬಂಡವಾಳದ ಸಿನಿಮಾ  ನಿರ್ಮಾಣ ಮಾಡಿದ ರಾಮು ಸಾಧನೆಯನ್ನು ಕೊಂಡಾಡಿದ್ದಾರೆ.

ಹೊಟೇಲ್ ಸಪ್ಲೈಯರ್ ಆಗಿ ವೃತ್ತಿ ಆರಂಭಿಸಿದ ರಾಮು ಕನ್ನಡದಲ್ಲಿ ಕೋಟಿ ನಿರ್ಮಾಪಕರಾಗಿ ಬೆಳೆದ ಪರಿಯೇ ಅಚ್ಚರಿ ತರುವಂತದ್ದು. ಆದರೆ ಅದೇಷ್ಟೋ ನಟರನ್ನು ಲಾಂಚ್ ಮಾಡಿ ಸಿನಿಮಾದಲ್ಲಿ ಭವಿಷ್ಯ ರೂಪಿಸಲು ಬುನಾದಿ ಹಾಕಿದ್ದ ರಾಮು ತಮ್ಮ ಮಗಳನ್ನು ಸಿನಿಮಾ ನಟಿಯಾಗಿ ನೋಡುವ ಕನಸನ್ನು ನನಸು ಮಾಡಿಕೊಳ್ಳುವ ಮುನ್ನವೇ ಮರೆಯಾಗಿದ್ದು ಮಾತ್ರ ವಿಪರ್ಯಾಸವೇ ಸರಿ.

Comments are closed.