- ರಕ್ಷಾ ಬಡಾಮನೆ
ನಮ್ಮ ದೇಹದ ರೋಗನಿರೋಧಕ ಶಕ್ತಿ (Immunity Power ) ಹೆಚ್ಚಿಸುವುದು ಈಗ ನಮ್ಮ ದಿನನಿತ್ಯದ ಕೆಲಸಗಳಲ್ಲಿ ಒಂದಾಗಿದೆ ಎಂದರೆ ತಪ್ಪಾಗುವುದಿಲ್ಲ. ಈಗ ಎಲ್ಲೆಡೆ ಹಬ್ಬಿರುವ ಮಹಾಮಾರಿ ಕೋರೋನ ದಿಂದಾಗಿ ದಿನವೂ ಹೆದರಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಮನೆಯಂಗಳದಲ್ಲೇ ಇರುವ ಸಾವಿರಾರು ಸಸ್ಯರಾಶಿಗಳಲ್ಲಿ ನಮ್ಮ ಆರೋಗ್ಯ ಅಡಗಿದೆ. ಇದರಲ್ಲಿ ಬಹಳ ಪ್ರಮುಖವಾದ ಕೆಲವು ಔಷದೀಯ ಸಸ್ಯದ ಮತ್ತು ದಿನ ನಿತ್ಯ ಅದರ ಸೇವನೆ ಮಾಡಬಹುದಾಗಿದೆ.

ಈ ನಾಲ್ಕು ವಸ್ತುಗಳನ್ನು ನಿರಂತರವಾಗಿ ಸೇವೆ ಮಾಡಿದ್ರೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಹಾಗಾದ್ರೆ ಆ ನಾಲ್ಕು ವಸ್ತುಗಳು ಬೇರೆ ಯಾವುದೂ ಅಲ್ಲಾ ಅಶ್ವಗಂಧ, ತುಳಸಿ, ಅರಶಿನ, ಕಹಿಬೇವು.

ಅಶ್ವಗಂಧ ಶಕ್ತಿಯುತ ಅಡಾಪ್ಟೋಜೆನ್ ಆಗಿರುವುದರಿಂದ, ಇದು ದೇಹದ ಒತ್ತಡಕ್ಕೆ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುತ್ತದೆ. ಕೋಶ-ಮಧ್ಯಸ್ಥಿಕೆಯ ಪ್ರತಿರಕ್ಷೆಯನ್ನು ಸುಧಾರಿಸುವ ಮೂಲಕ ಅಶ್ವಗಂಧ ರೋಗದ ವಿರುದ್ಧ ದೇಹದ ರಕ್ಷಣೆಯನ್ನು ಸುಧಾರಿಸುತ್ತದೆ.

ಇದು ಸ್ವತಂತ್ರ ರಾಡಿಕಲ್ಗಳಿಂದ ಉಂಟಾಗುವ ಸೆಲ್ಯುಲಾರ್ ಹಾನಿಯಿಂದ ರಕ್ಷಿಸಲು ಸಹಾಯ ಮಾಡುವ ಪ್ರಬಲವಾದ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಸಹ ಹೊಂದಿದೆ.

ಈ ಅಶ್ವಗಂಧ ದ ಬೇರಿನ ಪುಡಿಯನ್ನು ಜೇನಿನೊಂದಿಗೆ ಸೇರಿಸಿ ಹಾಲಿನ ನಲ್ಲಿ ಬೆರಸಿ ಕುಡಿಯಬಹುದು. ಅಥವಾ ಇದರ ಕಷಾಯವನ್ನು ಕೂಡ ಮಾಡಿ ಸೇವಿಸಬಹುದು. ತುಳಸಿಯಲ್ಲಿ ವಿಟಮಿನ್ ಸಿ ಮತ್ತು ಸತುವು ಸಮೃದ್ಧವಾಗಿದೆ. ಇದು ಅಪಾರವಾದ ಬ್ಯಾಕ್ಟೀರಿಯಾ, ಆಂಟಿ-ವೈರಲ್ ಮತ್ತು ಶಿಲೀಂಧ್ರ-ವಿರೋಧಿ ಗುಣಗಳನ್ನು ಹೊಂದಿದೆ, ಇದು ನಮ್ಮನ್ನು ವಿವಿಧ ರೀತಿಯ ಸೋಂಕುಗಳಿಂದ ರಕ್ಷಿಸುತ್ತದೆ.

ತುಳಸಿ ಯನ್ನು ಸುಲಭವಾಗಿ ನಿಮ್ಮ ಆಹಾರದೊಂದಿಗೆ ಸೇವಿಸ ಬಹುದು. ಚಹಾ ಮಾಡುವಾಗ ಸೇರಿಸಿ ಕುಡಿಯಬಹುದು.ಅಥವಾ ನೀರಿನೊಂದಿಗೆ ಬೆರೆಸಿ ಕುದಿಸಿ ಕಷಾಯ ತಯಾರಿಸಿ ಕುಡಿಯಬಹುದು.

ಅರಶಿನ ನಂಜು ನಿರೋ ಧಕ ಉರಿವೂತ ಹಾಗೂ ಬ್ಯಾಕ್ಟ್ರೀಯ ವಿರೋಧಿ ಗುಣಗಳನ್ನು ಹೊಂದಿದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಅರಶಿನವನ್ನು ಹಾಲಿಗೆ ಹಾಕಿ ಕುದಿಸಿ ಕುಡಿಯಬಹುದು.ಅಥವಾ ನಿಮ್ಮ ಯಾವುದೇ ಆಹಾರಕ್ಕೆ ಅರಶಿನ ವನ್ನೂ ಬಳಸಬಹುದು. ಕಹಿಬೇವು ನಿಮ್ಮ ದೇಹವನ್ನು ಆಂತರಿಕವಾಗಿ ತಣ್ಣಗಾಗಿಸುತ್ತದೆ.

ಬೇವು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ-ವಿರೋಧಿ ಗುಣಗಳನ್ನು ಹೊಂದಿದೆ, ಅದು ನಿಮ್ಮ ಚರ್ಮವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.

ಇದು ರಕ್ತದಿಂದ ವಿಷ ಮತ್ತು ಕಲ್ಮಶಗಳನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ. ರೋಗ ನಿರೋಧಕ ಶಕ್ತಿ ಸದೃಢ ವಾಗಿರಲು ಸಹಾಯ ಮಾಡುತ್ತದೆ. ಇದನ್ನು ನೀರು ಮತ್ತು ಜೀರಿಗೆ ಯೊಂದಿಗೆ ಸೇರಿಸಿ ಕಷಾಯ ಮಾಡಿ ಖಾಲಿ ಹೊಟ್ಟೆಯಲ್ಲಿ ಸೇವಿಸಹುದಾಗಿದೆ.
ಇದನ್ನೂ ಓದಿ : ಪಪ್ಪಾಯಿ ಎಂಬ ಮಾಜಿಕ್ ಹಣ್ಣು! ಏನೆಲ್ಲಾ ಅದ್ಭುತ ಪ್ರಯೋಜನಗಳನ್ನು ಅಡಗಿಸಿಕೊಂಡಿದೆ ಎಂಬುದು ನಿಮಗೆ ಗೊತ್ತೇ?
ಇದನ್ನೂ ಓದಿ : ನಿಮ್ಮ ಮನಸ್ಸು ಶುದ್ಧಿಕರಿಸಲು ಈ 5 ಸರಳ ದಾರಿಗಳನ್ನು ಅಳವಡಿಸಿಕೊಳ್ಳಿ!!
Health Grow Immunity Power Turmeric Neem Ashwagandha And Tulasi