vastu tips : ಯಾವುದೇ ಕಾರಣಕ್ಕೂ ಈ ವಸ್ತುಗಳನ್ನು ಇನ್ನೊಬ್ಬರಿಂದ ಬೇಡಿ ಪಡೆಯಬೇಡಿ

vastu tips : ಬೇರೆಯವರಿಂದ ಯಾವುದೇ ವಸ್ತುಗಳನ್ನು ಬೇಡಿ ಪಡೆದು ಬಳಸಬಾರದು ಎಂದು ಹಿರಿಯರು ಹೇಳುವ ಮಾತನ್ನು ನೀವು ಕೂಡ ಕೇಳಿದ್ದಿರಬಹುದು. ವಾಸ್ತು ಶಾಸ್ತ್ರ ಕೂಡ ಈ ಮಾತನ್ನು ಒಪ್ಪುತ್ತದೆ. ವಾಸ್ತು ಪ್ರಕಾರ, ನೀವು ಇತರರಿಂದ ವಸ್ತುಗಳನ್ನು ಬೇಡಿ ಪಡೆದರೆ ಅದು ನಿಮಗೆ ಜೀವನದಲ್ಲಿ ಏಳ್ಗೆಯನ್ನು ನೀಡುವುದಿಲ್ಲ.ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಸಲಿದೆ. ಸಣ್ಣ ಸಣ್ಣ ವಿಚಾರಗಳು ಮುಂದೆ ದೊಡ್ಡ ಹಾನಿಯನ್ನೇ ಉಂಟು ಮಾಡಬಹುದು. ಹಾಗಾದರೆ ವಾಸ್ತು ಶಾಸ್ತ್ರ ಹೇಳುವ ಪ್ರಕಾರ ಯಾವೆಲ್ಲ ವಸ್ತುಗಳನ್ನು ನೀವು ಬಳಕೆ ಮಾಡಬಾರದು ಎಂಬುದಕ್ಕೆ ಇಲ್ಲಿದೆ ಮಾಹಿತಿ :


ಕರವಸ್ತ್ರ

– ವಾಸ್ತು ಶಾಸ್ತ್ರದ ಪ್ರಕಾರ, ಕರವಸ್ತ್ರವನ್ನು ಇನ್ನೊಬ್ಬ ವ್ಯಕ್ತಿಯಿಂದ ಪಡೆದುಕೊಳ್ಳುವುದರಿಂದ ಸಂಬಂಧಗಳಲ್ಲಿ ಅಂತರವನ್ನು ತರಬಹುದು. ಇದರಿಂದ ಸಂಬಂಧಗಳಲ್ಲಿ ವಾದಗಳು ಕೂಡ ಹೆಚ್ಚಲಿದೆ. ಹೀಗಾಗಿ ಎಂದಿಗೂ ಇನ್ನೊಬ್ಬರಿಂದ ಕರವಸ್ತ್ರಗಳನ್ನು ಪಡೆಯಬೇಡಿ.


ವಾಚ್​ :

ವಾಸ್ತು ಶಾಸ್ತ್ರದ ಪ್ರಕಾರ ಕೈ ಗಡಿಯಾರವು ಧನಾತ್ಮಕ ಹಾಗೂ ಋಣಾತ್ಮಕ ಎರಡೂ ಅಂಶಗಳನ್ನು ಹೊಂದಿದೆ. ಮಣಿಕಟ್ಟಿನ ಮೇಲೆ ಬೇರೊಬ್ಬರ ವಾಚ್​ನ್ನು ಧರಿಸುವುದು ಅಶುಭ ಎಂದು ಪರಿಗಣಿಸಲಾಗಿದೆ. ಈ ರೀತಿ ಮಾಡುವುದರಿಂದ ವ್ಯಕ್ತಿಯ ಕೆಟ್ಟ ಸಮಯ ಆರಂಭವಾಗುತ್ತದೆ ಎಂದು ಹೇಳಲಾಗುತ್ತದೆ.


ಉಂಗುರ :

ಉಂಗುರಗಳನ್ನು ಬೇರೆಯವರಿಂದ ಕೇಳಿ ಪಡೆಯುವುದು ಕೂಡ ವಾಸ್ತು ಶಾಸ್ತ್ರದಲ್ಲಿ ಅಶುಭವೆಂದು ಪರಿಗಣಿಸಲಾಗಿದೆ. ಹಾಗೆ ಮಾಡುವುದರಿಂದ ವ್ಯಕ್ತಿಯ ಆರೋಗ್ಯ, ಜೀವನ ಹಾಗೂ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ.


ಪೆನ್ನು-

ವಾಸ್ತು ಶಾಸ್ತ್ರದ ಪ್ರಕಾರ ಯಾವುದೇ ವ್ಯಕ್ತಿ ತನ್ನ ಬಳಿ ಬೇರೆಯವರ ಪೆನ್ನು ಇಟ್ಟುಕೊಳ್ಳಬಾರದು. ಹೀಗೆ ಮಾಡುವುದರಿಂದ ವೃತ್ತಿಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಇದರಿಂದ ಹಣ ನಷ್ಟವೂ ಆಗಬಹುದು.


ಬಟ್ಟೆ-

ವಾಸ್ತು ಪ್ರಕಾರ, ಯಾವುದೇ ವ್ಯಕ್ತಿ ಎಂದಿಗೂ ಇತರರ ಬಟ್ಟೆಗಳನ್ನು ಧರಿಸಬಾರದು. ಹೀಗೆ ಮಾಡುವುದರಿಂದ ನಮ್ಮೊಳಗೆ ನಕಾರಾತ್ಮಕತೆ ಪ್ರವೇಶಿಸುತ್ತದೆ ಮತ್ತು ಜೀವನದಲ್ಲಿ ಕಷ್ಟಗಳು ಬರುತ್ತವೆ ಎಂದು ಹೇಳಲಾಗುತ್ತದೆ.

ಇದನ್ನು ಓದಿ :Graeme Smith : ಜನಾಂಗೀಯ ನಿಂದನೆ ಆರೋಪ ಮುಕ್ತರಾದ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್

ಇದನ್ನೂ ಓದಿ : Thanjavur : ತೇರು ಎಳೆಯುವ ವೇಳೆಯಲ್ಲಿ ವಿದ್ಯುತ್‌ ಅವಘಡ : 11 ಮಂದಿ ದುರ್ಮರಣ

vastu tips for money do not use these 6 things even after forgetting others there may be a big crisis

Comments are closed.