ನುಗ್ಗೆ ಕಾಯಿ ತಿನ್ನಲು ಮಾತ್ರ ರುಚಿಯಲ್ಲ ಇದರಲ್ಲಿ ಬಹಳಷ್ಟು ಔಷದೀಯ ಸತ್ವ ಅಡಗಿದೆ. ನುಗ್ಗೆ ಕಾಯಿಯಿಂದ ಹಲವಾರು ಬಗೆಯ ಖಾದ್ಯವನ್ನು ತಯಾರಿಸಿ ಸವಿಯ ಬಹುದು ಆದರೆ ಇದನ್ನು ಸೇವಿಸುವುದರಿಂದ ಹಲವಾರು ಕಾಯಿಲೆಗಳು ಹತ್ತಿರವು ಸುಳಿಯುವುದಿಲ್ಲ ಎನ್ನುವುದು ಅಷ್ಟೇ ಸತ್ಯ.

ನುಗ್ಗೆ ಪೌಸ್ಟಿಕಾಂಶಗಳ ಆಗರ. ಬೆಳೆಯುವ ಮಕ್ಕಳಿಗೆ ನುಗ್ಗೆ ಕಾಯಿಯನ್ನು ಹೆಚ್ಚಾಗಿ ತಿನ್ನಿಸುವುದರಿಂದ ಮಕ್ಕಳು ಚೆನ್ನಾಗಿ ಬೆಳೆಯುತ್ತಾರೆ. ಮಕ್ಕಳ ಬೆಳವಣಿಗೆಗೆ ಬೇಕಾದ ಹೆಚ್ಚಿನ ಪೋಷಕಾಂಶ ನುಗ್ಗೆ ಕಾಯಿಯಲ್ಲಿ ಹೇರಳವಾಗಿದೆ. ಎಳೆ ನುಗ್ಗೆ ಕಾಯಿಯನ್ನು ಹೆಚ್ಚುತ್ತಿನ್ನುವುದರಿಂದ ಹೊಟ್ಟೆ ಒಳಗಿನ ಜಂತು ಹುಳುಗಳ ಸಮಸ್ಯೆ ಕಡಿಮೆಯಾಗುತ್ತದೆ.
ಇದನ್ನೂ ಓದಿ: Carrot : ನಿತ್ಯವೂ ಕ್ಯಾರೆಟ್ ತಿನ್ನುವುದು ಆರೋಗ್ಯಕ್ಕೆ ಉತ್ತಮವೇ ?

ನುಗ್ಗೆ ಕಾಯಿಯ ಸೇವನೆಯಿಂದ ದೇಹದಲ್ಲಿ ಉಷ್ಣತೆ ಹೆಚ್ಚುತದೆ. ಅಲ್ಲದೇ ನುಗ್ಗೆ ಕಾಯಿ ಸುಲಭವಾಗಿ ಜೀರ್ಣವಾಗುತ್ತದೆ. ಕಫಾ ಸಮಸ್ಯೆ ಇಂದ ಬಳಲುತ್ತಿರುವವರು ನುಗ್ಗೆ ಯನ್ನು ದಿನ ಸೇವಿಸಿದರೆ ಕಫಾದ ಸಮಸ್ಯೆ ಕಡಿಮೆ ಯಾಗುತ್ತದೆ. ಅಲ್ಲದೇ ನುಗ್ಗೆಯನ್ನು ಹೆಸರು ಕಾಳಿನ ಪಲ್ಯದೊಂದಿಗೆ ಸೇವಿಸುವುದರಿಂದ ಕಣ್ಣಿನ ದೃಷ್ಟಿಯ ಶಕ್ತಿಯನ್ನು ಹೆಚ್ಚಿಸುತ್ತದೆ.

ನುಗ್ಗೆ ಕಾಯಿಯನ್ನು ಆರ್ಯವೇಧದಲ್ಲಿ ಮುಖ್ಯವಾಗಿ ಲಕ್ವ ಕಾಯಿಲೆಯನ್ನು ಗುಣಪಡಿಸಲು ಬಳಸುತ್ತಾರೆ. ಲೈಂಗಿಕ ಸಮಸ್ಯೆಯಿಂದ ಬಳಲುತ್ತಿರುವವರು ಕೂಡ ನುಗ್ಗೆ ಕಾಯಿಯ ಸೇವನೆಯಿಂದ ತಮ್ಮ ಲೈಂಗಿಕ ಸಮಸ್ಯೆಯನ್ನು ದೂರಮಾಡಿಕೊಳ್ಳ ಬಹುದು.
(Gourd of nutrients Drumstick)