Delta Plus AY.4.2 : 2 ಡೋಸ್ ಲಸಿಕೆ ಪಡೆದ 6 ಜನರಲ್ಲಿ ಡೆಲ್ಟಾ ಪ್ಲಸ್‌ AY.4.2 ರೂಪಾಂತರಿ ಪತ್ತೆ

ಇಂದೋರ್‌ : ಕೊರೊನಾ ಎರಡನೇ ಅಲೆಯ ಆರ್ಭಟ ತಗ್ಗಿದ ಬೆನ್ನಲ್ಲೇ ಇದೀಗ ದೇಶದಲ್ಲಿ ಮತ್ತೆ ಕೊರೊನಾ ಆತಂಕ ಶುರುವಾಗಿದೆ. ಕೊರೊನಾ ಲಸಿಕೆ ಪಡೆದವರಲ್ಲಿ ಇದೀಗ ಡೆಲ್ಟಾ ಪ್ಲಸ್‌ ರೂಪಾಂತರಿ ( Delta Plus AY.4.2) ಆತಂಕ ಮೂಡಿಸಿದ್ದು, ಮದ್ಯ ಪ್ರದೇಶದಲ್ಲಿ ಎರಡು ಡೋಸ್‌ ಲಸಿಕೆ ಪಡೆದ 6 ಜನರಲ್ಲಿ ಇದೀಗ ರೂಪಾಂತರಿ ಸೋಂಕು ಕಾಣಿಸಿಕೊಂಡಿದೆ.

ದೆಹಲಿ ಮೂಲದ ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್‌ ನೀಡಿರುವ ವರದಿಯಪ್ರಕಾರ, ಆರು ಜನರಲ್ಲಿ ಕೊರೋನಾ ವೈರಸ್‌ನ AY.4.2 ರೂಪಾಂತರಿ ಕಂಡು ಬಂದಿದೆ. ಕಳೆದ ಸಪ್ಟೆಂಬರ್‌ ತಿಂಗಳಿನಲ್ಲಿ ಸೋಂಕಿತರ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಪ್ರಯೋಗಾಲಯದಿಂದ ಬಂದ ವರದಿಯಲ್ಲಿ ರೂಪಾಂತರ ಸೋಂಕು ಇರುವುದು ದೃಢಪಟ್ಟಿದೆ ಎಂದು ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಬಿ.ಎಸ್. ಸಾಹಿತ್ಯ ಹೇಳಿದ್ದಾರೆ.

ಇಂದೋರ್‌ನಲ್ಲಿ ರೂಪಾಂತರಿ ಸೋಂಕು ಪತ್ತೆಯಾದ ಬೆನ್ನಲ್ಲೇ ಆರೋಗ್ಯ ಇಲಾಖೆ ಅಲರ್ಟ್‌ ಆಗಿದೆ. ಸೋಂಕಿತರ ಜೊತೆ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಮುಂದಾಗಿದೆ. ಆದರೆ ರೂಪಾಂತರಿ ಸೋಂಕಿಗೆ ತುತ್ತಾಗಿರುವ ಆರು ಮಂದಿ ಕೂಡ ಆರೋಗ್ಯವಾಗಿದ್ದಾರೆ ಎಂದು ಎಂದು ಅವರು ತಿಳಿಸಿದ್ದಾರೆ.

ಭಾರತದಲ್ಲಿ ದಿನೇ ದಿನೇ ಕೊರೊನಾ ಸೋಂಕು ಇಳಿಕೆಯಾಗುತ್ತಿದೆ. ಆದರೆ ಎರಡನೇ ಅಲೆ ಇಳಿಕೆಯಾದ್ರೂ ಮೂರನೇ ಅಲೆಯ ಆತಂಕ ಇದೀಗ ದೇಶವನ್ನು ಕಾಡುತ್ತಿದೆ. ಮದ್ಯ ಪ್ರದೇಶದ ಇಂದೋರ್‌ ಜಿಲ್ಲೆಯಲ್ಲಿ ಸಂಪೂರ್ಣವಾಗಿ ಎರಡು ಡೋಸ್‌ ಲಸಿಕೆ ಪಡೆದ ಆರು ಜನರಲ್ಲಿ ಹೊಸ ಕೊರೊನಾ ವೈರಸ್‌ ಡೆಲ್ಟ್‌ ಫ್ಲಸ್‌ ಎವೈ4.2 ರೂಪಾಂತರಿ ಸೋಂಕು ದೃಢಪಟ್ಟಿದೆ.

ಇದನ್ನೂ ಓದಿ : ಕೋವಿಡ್‌ ವೈರಸ್‌ ಹುಟ್ಟಿದ್ದು ವುಹಾನ್‌ ಲ್ಯಾಬ್‌ನಲ್ಲಿ : ವಿಶ್ವ ಆರೋಗ್ಯ ಸಂಸ್ಥೆ ಕೊಟ್ಟಿದೆ ಶಾಕಿಂಗ್ ವರದಿ

ಇದನ್ನೂ ಓದಿ : 2 -18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ : ಕೊವಾಕ್ಸಿನ್‌ ತುರ್ತು ಬಳಕೆಗೆ ಗ್ರೀನ್‌ ಸಿಗ್ನಲ್‌

Detection of Delta Plus AY.4.2 mutant in 6 people receiving 2 dose vaccine

Comments are closed.