ಸೋಮವಾರ, ಏಪ್ರಿಲ್ 28, 2025
HomeBreakingಚಿಕ್ಕು ಹಣ್ಣಿನಲ್ಲಿದೆ ಆರೋಗ್ಯ ವೃದ್ದಿಸುವ ಪೋಷಕಾಂಶ

ಚಿಕ್ಕು ಹಣ್ಣಿನಲ್ಲಿದೆ ಆರೋಗ್ಯ ವೃದ್ದಿಸುವ ಪೋಷಕಾಂಶ

- Advertisement -

ಭಾರತದ ಹಲವು ಪ್ರದೇಶದಲ್ಲಿ ಚಿಕ್ಕು (ಸಪೋಟ) ಹಣ್ಣನ್ನು ಬೆಳೆಯುತ್ತಾರೆ. ಈ ಹಣ್ಣು ತುಂಬಾ ರುಚಿಕರ ಹಾಗೂ ಸಿಹಿ ಯಾಗಿರುವುದರಿಂದ ಹೆಚ್ಚಿನ ಜನರು ಇದನ್ನು ಇಷ್ಟ ಪಟ್ಟು ತಿನ್ನುತ್ತಾರೆ. ಈ ಚಿಕ್ಕು (ಸಪೋಟ) ಹಣ್ಣು ರುಚಿಕರ ಮಾತ್ರವಲ್ಲಾ ಆರೋಗ್ಯ ವೃದ್ಧಿಸುವ ಹಲವು ಪೋಷಕಾಂಶವನ್ನು ಒಳಗೊಂಡಿದೆ.

ಚಿಕ್ಕು ಹಣ್ಣನ್ನು ನಿಯಮಿತವಾಗಿ ತಿನ್ನುವುದರಿಂದ ಪ್ರತಿರೋಧಕ ಶಕ್ತಿ ಹೆಚ್ಚಳ : ವಿಟಮಿನ್ ಸಿ, ಎ ಮತ್ತು ಆಂಟಿಆಕ್ಸಿಡೆಂಟ್ ಒಳಗೊಂಡಿರುವ ಸಪೋಟ ಹಣ್ಣು ಪ್ರತಿರೋಧಕ ಶಕ್ತಿಯನ್ನು ಬಲಿಷ್ಠವಾಗಿ ಇಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಇದು ಫ್ರೀ ರ್ಯಾಡಿಕಲ್ ನ್ನು ದೂರ ಮಾಡುವುದು, ಚರ್ಮದ ಆರೋಗ್ಯ ವೃದ್ಧಿಸುವುದು ಮತ್ತು ದೀರ್ಘಕಾಲಿಕ ಕಾಯಿಲೆಗಳ ಅಪಾಯ ತಗ್ಗಿಸುವುದು. ಇದು ವೈರಸ್, ಬ್ಯಾಕ್ಟೀರಿಯಾ ಮತ್ತು ಪರಾವಲಂಬಿಗಳ ದಾಳಿಯಿಂದ ರಕ್ಷಿಸುವುದು.

ಇದನ್ನೂ ಓದಿ: ಕುಂಬಳ ಕಾಯಿ ತಿಂದ್ರೆ ಕಣ್ಣಿನ ಆರೋಗ್ಯ ಹೆಚ್ಚುತ್ತೆ, ಯೌವನ ಮರುಕಳಿಸುತ್ತೆ

ಶಕ್ತಿ ವೃದ್ಧಿಸುವುದು : ಫ್ರಾಕ್ಟೋಸ್ ಮತ್ತು ಸುಕ್ರೋಸ್ ನಿಂದ ಸಮೃದ್ಧವಾಗಿರುವಂತಹ ಸಪೋಟ ಹಣ್ಣಿನಲ್ಲಿ ಹೆಚ್ಚಿನ ಮಟ್ಟದ ಶಕ್ತಿ ಇದೆ. ಇದನ್ನು ವ್ಯಾಯಾಮದ ಬಳಿಕ ಸೇವನೆ ಮಾಡಿದರೆ ಅದರಿಂದ ದೇಹಕ್ಕೆ ನೈಸರ್ಗಿಕ ಶಕ್ತಿ ಸಿಗುವುದು. ಬೆಳೆಯುವ ಮಕ್ಕಳು ಮತ್ತು ಗರ್ಭಿಣಿಯರಿಗೆ ಇದು ತುಂಬಾ ಒಳ್ಳೆಯದು. ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಇದು ಒದಗಿಸುವುದು. ಇದರಿಂದ ಆರೋಗ್ಯಕರ ಜೀವನ ಸಾಗಿಸಬಹುದು.

ಆರೋಗ್ಯಕಾರಿ ತ್ವಚೆ : ಸಪೋಟ ಹಣ್ಣು ತ್ವಚೆಯ ಆರೋಗ್ಯ ಹಾಗೂ ಸೌಂದರ್ಯ ವೃದ್ಧಿಸುವುದು. ಇದರಲ್ಲಿ ಇರುವಂತಹ ವಿಟಮಿನ್ ಎ, ಸಿ, ಇ ಮತ್ತು ಕೆ ಚರ್ಮವನ್ನು ಹೈಡ್ರೇಟ್ ಆಗಿಡುವುದು ಮತ್ತು ಚರ್ಮದ ಅಂಗಾಂಶ ಗಳನ್ನು ಪುನರ್ಶ್ಚೇತನಗೊಳಿಸುವುದು. ಪಾಲಿಫೆನಾಲ್, ಫ್ಲಾವನಾಯ್ಡ್ ಮತ್ತು ಆಂಟಿ ಆಕ್ಸಿಡೆಂಟ್ ಹೊಂದಿರುವ ಸಪೋತ ಹಣ್ಣು ನೆರಿಗೆ ನಿವಾರಿಸುವುದು, ಚರ್ಮದ ವಿನ್ಯಾಸ ಸುಧಾರಿಸು ವುದು, ವಯಸ್ಸಾಗುವ ಲಕ್ಷಣಗಳನ್ನು ನಿಧಾನಗೊಳಿಸುವುದು ಮತ್ತು ನೈಸರ್ಗಿಕವಾಗಿ ಕಾಂತಿಯುತ ವಾಗಿಸುವುದು.

ಇದನ್ನೂ ಓದಿ: Health Tips : ಸಾಮಾನ್ಯ ಗಿಡದ ಅಸಾಮಾನ್ಯ ಶಕ್ತಿ ‘ನೆಲನೆಲ್ಲಿ’ ಬಗ್ಗೆ ನಿಮಗೆಷ್ಟು ಗೊತ್ತು?

ಮೂಳೆಗಳು ಬಲಗೊಳ್ಳುವುದು : ಚಿಕ್ಕುವಿನಲ್ಲಿ ಇರುವ ಕೆಲವೊಂದು ಖನಿಜಾಂಶಗಳಾಗಿರುವ ಕ್ಯಾಲ್ಸಿಯಂ, ಪೋಸ್ಪರಸ್, ತಾಮ್ರ ಮತ್ತು ಕಬ್ಬಿನಾಂಶವು ಮೂಳೆಯನ್ನು ಬಲಗೊಳಿಸುವುದು. ನಿಯಮಿತವಾಗಿ ಚಿಕ್ಕು ತಿಂದರೆ ಅದರಿಂದ ಮೂಳೆಗಳ ಗುಣಮಟ್ಟವು ಸುಧಾರಣೆಯಾಗುತ್ತದೆ.

(Healthy nutrients in the fruit sapota)

RELATED ARTICLES

Most Popular