ನೆಲ್ಲಿಕಾಯಿಗೆ ಆರ್ಯುವೇದದಲ್ಲಿ ತುಂಬಾನೇ ಮಹತ್ವವಿದೆ. ನೆಲ್ಲಿಕಾಯಿಯಲ್ಲಿರುವ(Health Tips) ಅಗಾಧ ಪ್ರಮಾಣದ ಪೋಷಕಾಂಶಗಳ ಕಾರಣ ಇದನ್ನು ಸೂಪರ್ ಫ್ರೂಟ್ ಎಂದು ಕರೆಯಲಾಗುತ್ತದೆ . ಆಯುರ್ವೇದದ ಅನೇಕ ಔಷಧಿಗಳಲ್ಲಿ ನೆಲ್ಲಿಕಾಯಿಯನ್ನು ಬಳಕೆ ಮಾಡಲಾಗುತ್ತದೆ. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಅಂಶವು ಅಗಾಧ ಪ್ರಮಾಣದಲ್ಲಿದೆ. ಇದರ ಸೇವನೆಯಿಂದ ನಿಮ್ಮ ಯಕೃತ್ತಿನ ಆರೋಗ್ಯ ಸುಧಾರಿಸುತ್ತದೆ ಹಾಗೂ ಜೀರ್ಣಕ್ರಿಯೆಯು ಅತ್ಯಂತ ಸರಾಗವಾಗಿ ಇರಲಿದೆ. ಇದನ್ನು ಹೊರತುಪಡಿಸಿ ನೆಲ್ಲಿಕಾಯಿಯ ಸೇವನೆಯು ಎಷ್ಟೆಲ್ಲ ಪ್ರಯೋಜನಗಳನ್ನು ನೀಡುತ್ತದೆ ಎಂಬುದನ್ನು ನೋಡೋಣ:
ನೆಲ್ಲಿಕಾಯಿ ಸೇವನೆಯ ಪ್ರಯೋಜನಗಳು :
- ನೆಲ್ಲಿಕಾಯಿಯಲ್ಲಿ ಆ್ಯಂಟಿಆಕ್ಸಿಡಂಟ್ ಪ್ರಮಾಣ ಅತ್ಯಧಿಕವಾಗಿದೆ
- ನೆಲ್ಲಿಕಾಯಿ ಸೇವನೆಯಿಂದ ದೇಹಕ್ಕೆ ವಿಟಾಮಿನ್ ಸಿ, ಎ ಹಾಗೂ ಇ ಅಗಾಧಪ್ರಮಾಣದಲ್ಲಿ ಸಿಗಲಿದೆ.
- ನೆಲ್ಲಿಕಾಯಿಯಲ್ಲಿ ಫೈಬರ್ ಅಗಾಧ ಪ್ರಮಾಣದಲ್ಲಿದೆ. ಇದರಿಂದ ಜೀರ್ಣಶಕ್ತಿ ಸುಧಾರಿಸುತ್ತದೆ
- ನೆಲ್ಲಿಕಾಯಿಯಲ್ಲಿ ಪ್ರೋಟಿನ್, ಕೊಬ್ಬು, ಫೈಬರ್, ಸಕ್ಕರೆ ಅಂಶ ಹಾಗೂ ಕಾರ್ಬೋಹೈಡ್ರೇಟ್ ಇದೆ.
- ನೆಲ್ಲಿಕಾಯಿಯಲ್ಲಿ ಕಬ್ಬಿಣಾಂಶ ಹಾಗೂ ಕ್ಯಾಲ್ಶಿಯಂ ಅಂಶ ಕೂಡ ಇದೆ.
ಯಕೃತ್ತಿನ ಆರೋಗ್ಯ ಸುಧಾರಿಸುತ್ತದೆ :
ಯಕೃತ್ತಿನ ಆರೋಗ್ಯಕ್ಕೆ ನೆಲ್ಲಿಕಾಯಿ ಅತ್ಯಂತ ಸಹಕಾರಿ. ದೇಹದಲ್ಲಿರುವ ಟಾಕ್ಸಿನ್ ಹೊರಹಾಕುವ ಶಕ್ತಿ ನೆಲ್ಲಿಕಾಯಿಯಲ್ಲಿ ಇರುವುದರಿಂದ ಯಕೃತ್ತಿನ ಆರೋಗ್ಯ ಸುಧಾರಿಸುತ್ತದೆ. ಹೈಪರ್ಲಿಪಿಡೆಮಿಯಾ ಹಾಗೂ ಜೀರ್ಣಕ್ರಿಯೆ ಸಂಬಂಧಿ ಕಾಯಿಲೆಗಳ ನಿವಾರಣೆಗೆ ನೆಲ್ಲಿಕಾಯಿ ಸಹಕಾರಿ. ಲಿವರ್ ಫೆಲ್ಯೂರ್ನ್ನೂ ನೆಲ್ಲಿಕಾಯಿ ತಡೆಗಟ್ಟುತ್ತದೆ. ಆದರೆ ಈ ಎಲ್ಲಾ ಪ್ರಯೋಜನಗಳನ್ನು ಪಡೆಯಬೇಕು ಅಂದರೆ ನೆಲ್ಲಿಕಾಯಿ ಹೇಗೆ ಸೇವಿಸಬೇಕು ಎಂಬುದೂ ನಿಮಗೆ ತಿಳಿದಿರಬೇಕು :
ಫ್ಯಾಟಿ ಲಿವರ್ ಸಮಸ್ಯೆಯನ್ನು ನೀವು ಹೊಂದಿದ್ದರೆ ನೀವು ಈ ರೀತಿಯಾಗಿ ನೆಲ್ಲಿಕಾಯಿ ಸೇವಿಸಬಹುದು:
ನೀವು ಯಾವುದೇ ರೂಪದಲ್ಲಿ ನೆಲ್ಲಿಕಾಯಿಯನ್ನು ಸೇವನೆ ಮಾಡಬಹುದು. ಆದರೆ ಯಕೃತ್ತಿನ ಸಮಸ್ಯೆಯನ್ನು ನೀವು ಹೊಂದಿದ್ದರೆ ಹಸಿ ನೆಲ್ಲಿಕಾಯಿಯನ್ನು ನೀವು ಉಪ್ಪಿನ ಜೊತೆ ಸೇವಿಸಬೇಕು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ಜ್ಯೂಸ್ ಸೇವಿಸಿ. ನೆಲ್ಲಿಕಾಯಿ ಚಹವನ್ನೂ ಸೇವಿಸಬಹುದು. ನೆಲ್ಲಿಕಾಯಿ ಚಹ ಮಾಡಲು ನೆಲ್ಲಿಕಾಯಿಯನ್ನು ಕತ್ತರಿಸಿ ರಾತ್ರಿಯಿಡೀ ನೆನೆಸಿಡಿ. ಬೆಳಗ್ಗೆ ನೀರಿಗೆ ಈ ನೆಲ್ಲಿಕಾಯಿ, ಶುಂಠಿ, ಏಲಕ್ಕಿ ಹಾಗೂ ಚೆನ್ನಾಗಿ ಕುದಿಸಿ ಕುಡಿಯಿರಿ.
Health Tips: Consume ‘Amla’ Daily If You Are Suffering From Fatty Liver
ಇದನ್ನು ಓದಿ : turmeric on skin : ಅರಿಶಿಣವನ್ನು ಮುಖಕ್ಕೆ ಲೇಪಿಸುವ ಮುನ್ನ ನೆನಪಿನಲ್ಲಿಡಿ ಈ ಮುಖ್ಯ ವಿಚಾರ..!
ಇದನ್ನೂ ಓದಿ : remedies to deal with dandruff : ಚಳಿಗಾಲದಲ್ಲಿ ಡ್ಯಾಂಡ್ರಫ್ನಿಂದ ಪಾರಾಗಲು ಬಳಸಿ ಈ ಮನೆಮದ್ದು..!