ಮಂಗಳೂರು : ಬಿಸಿಲಿನ ತಾಪದಿಂದ ಕಾದ ಕಾವಲಿಯಂತಾಗಿದ್ದ, ಕರಾವಳಿಗೆ ಮಳೆರಾಯ ತಂಪೆರೆದಿದ್ದಾನೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಸುರಿದ ಮಳೆ ಇಳೆಯನ್ನು ತಂಪಾಗಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ಮುಂಜಾನೆ ಸುಮಾರು 5.00 ಗಂಟೆಯ ವೇಳೆಗೆ ಮಂಗಳೂರಿನ ಬಂಟ್ವಾಳ,ವಿಟ್ಲ, ಪುತ್ತೂರು ಸೇರಿದಂತೆ ಹಲವೆಡೆ ತುಂತುರು ಮಳೆಯಾದರೆ, ಸುತ್ತಮುತ್ತಲಿನ ಪ್ರದೇಶದಲ್ಲಿ ಉತ್ತಮ ಮಳೆ ಸುರಿದಿದೆ. ಉಡುಪಿ ಜಿಲ್ಲೆಯಲ್ಲಿಯ ಉಡುಪಿ,ಬ್ರಹ್ಮಾವರ, ಕುಂದಾಪುರ, ಕಾರ್ಕಳ ತಾಲೂಕಿನ ಬಹುತೇಕ ಕಡೆ ಅಕಾಲಿಕ ಮಳೆ ಸುರಿದಿದೆ.
ಕಳೆದ ಒಂದು ವಾರದಿಂದ ಬಿಸಿಲಿನ ಬೇಗೆಯಿಂದ ಬಳಲುತ್ತಿದ್ದ ಕರಾವಳಿಯ ಭಾಗದಲ್ಲಿ 2-3 ಗಂಟೆಗಳ ಕಾಲ ತುಂತುರು ಮಳೆಯಾಗಿದೆ. ಮೋಡ ಕವಿದು ತಂಪಾದ ಗಾಳಿ ಬೀಸಿ, ತಣ್ಣನೆಯ ವಾತಾವರಣ ಸೃಷ್ಟಿಯಾಗಿದೆ. ಸುರಿದ ಹನಿ ಮಳೆ ಕರಾವಳಿಯ ಜನರ ಮುಖದಲ್ಲಿ ಮಂದಹಾಸ ಉಂಟು ಮಾಡಿದೆ
ಬಿಸಿಲ ತಾಪ ತಣಿಸಿದ ವರುಣ : ಕರಾವಳಿಯಲ್ಲಿ ಅಕಾಲಿಕ ಮಳೆ
- Advertisement -
RELATED ARTICLES