ಹಿರೇನಾಗವಲ್ಲಿ ಸ್ಫೋಟ ಪ್ರಕರಣ : ಪ್ರಮುಖ ಆರೋಪಿ ನಾಗರಾಜು ರೆಡ್ಡಿ ಬಂಧನ

ಚಿಕ್ಕಬಳ್ಳಾಪುರ : ಹಿರೇನಾಗವಲ್ಲಿಯಲ್ಲಿ ನಡೆದಿರುವ ಜಿಲೆಟಿನ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿ, ಕ್ರಷರ್ ಮಾಲೀಕ ನಾಗರಾಜ್ ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹಿರೇನಾಗವಲ್ಲಿಯಲ್ಲಿ ನಡೆದಿರುವ ಜಿಲೆಟಿನ್ ಸ್ಪೋಟದಲ್ಲಿ ಇಂಜಿನಿಯರ್ ಸೇರಿದಂತೆ ಒಟ್ಟು 6 ಮಂದಿ ಸಾವನ್ನಪ್ಪಿದ್ದರು. ಘಟನೆಯ ಬೆನ್ನಲ್ಲೇ ಸ್ಪೋಟಕ ಪೂರೈಸುತ್ತಿದ್ದ ಗಣೇಶ್ ಹಾಗೂ ಕ್ರಷರ್ ಪಾಲುದಾರ ರಾಘವೇಂದ್ರ ರೆಡ್ಡಿಯನ್ನು ಬಂಧಿಸಿದ್ದರು. ಆದರೆ ಸ್ಥಳೀಯ ಬಿಜೆಪಿ ಮುಖಂಡನಾಗಿರುವ ಕ್ರಷರ್ ಮಾಲೀಕ ನಾಗರಾಜ ರೆಡ್ಡಿ ತಲೆ ಮರೆಯಿಸಿಕೊಂಡಿದ್ದ. ಅಂತಿಮವಾಗಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಾಗವಲ್ಲಿ ದುರಂತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರಕಾರ ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಗುಡಿಬಂಡೆ ಎಸ್‍ಐ ಗೋಪಾಲ್ ರೆಡ್ಡಿ ಹಾಗೂ ಇನ್‍ಸ್ಪೆಕ್ಟರ್ ಮಂಜುನಾಥ್‍ ಅವರನ್ನು ಅಮಾನತು ಮಾಡಲಾಗಿದೆ. ಅಲ್ಲದೇ ಹುಣಸೋಡು ಸ್ಪೋಟದ ಬೆನ್ನಲ್ಲೇ ಹಿರೇನಾಗವಲ್ಲಿಯಲ್ಲಿ ಸಂಗ್ರಹಿಸಿದ್ದ ಸ್ಪೋಟಕಗಳನ್ನು ನಾಶ ಮಾಡಲು ಮುಂದಾಗಿದ್ದು, ಸ್ಪೋಟಕಗಳನ್ನು ನೀರಿಗೆ ಎಸೆಯುವ ಬದಲು ನದಿಗೆ ಎಸೆದಿರೋದೆ ದುರಂತಕ್ಕೆ ಕಾರಣವೆನ್ನಲಾಗುತ್ತಿದೆ. ಈ ಕುರಿತು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

Comments are closed.