ಬ್ರಹ್ಮಾವರ : ಗುಂಡಿಕ್ಕಿ ಯುವಕ ಹತ್ಯೆ, ಆರೋಪಿಗಳು ಪರಾರಿ

Udupi Brahmavar  : ಬ್ರಹ್ಮಾವರ :ಯುವಕನೋರ್ವನ ಮೇಲೆ ದುಷ್ಕರ್ಮಿಗಳ ತಂಡ ಪಿಸ್ತೂಲಿನಿಂದ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹನೇಹಳ್ಳಿ ಎಂಬಲ್ಲಿ ನಡೆಇದೆ. 36 ವರ್ಷ ಪ್ರಾಯದ ಕೃಷ್ಣ ಎಂಬಾತನೇ ಹತ್ಯೆಗೆ ಒಳಗಾದ ಯುವಕ.

Udupi Brahmavar  : ಬ್ರಹ್ಮಾವರ :ಯುವಕನೋರ್ವನ ಮೇಲೆ ದುಷ್ಕರ್ಮಿಗಳ ತಂಡ ಪಿಸ್ತೂಲಿನಿಂದ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹನೇಹಳ್ಳಿ ಎಂಬಲ್ಲಿ ನಡೆಇದೆ. 36 ವರ್ಷ ಪ್ರಾಯದ ಕೃಷ್ಣ ಎಂಬಾತನೇ ಹತ್ಯೆಗೆ ಒಳಗಾದ ಯುವಕ.

Udupi Brahmavar a Youth Shot dead in Hanehalli
Image Credit to Original Source

ಮಣಿಪಾಲದಲ್ಲಿ ಕೆಲಸ ಮಾಡಿಕೊಂಡಿದ್ದ ಕೃಷ್ಣ ಹನೆಹಳ್ಳಿಯ ಮನೆಯಲ್ಲಿ ಕಳೆದ ರಾತ್ರಿ ಒಬ್ಬಂಟಿಯಾಗಿ ಊಟ ಮಾಡುತ್ತಿದ್ದ. ಈ ವೇಳೆಯಲ್ಲಿ ಸ್ಥಳಕ್ಕೆ ಆಗಮಿಸಿದ್ದ ದುಷ್ಕರ್ಮಿಗಳು ಪಿಸ್ತೂಲಿನಿಂದ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಕೃಷ್ಣ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಘಟನೆಯ ಬೆನ್ನಲ್ಲೇ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌, ಬ್ರಹ್ಮಾವರ ವೃತ್ತ ನಿರೀಕ್ಷಕರಾದ ದಿವಾಕರ ಪಿ.ಎಂ, ಬ್ರಹ್ಮಾವರ ಠಾಣಾಧಿಕಾರಿ ಮಧು ಬಿ.ಇ. ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ರಾತ್ರಿ ದುಷ್ಕರ್ಮಿಗಳು ಪಿಸ್ತೂಲಿನಿಂದ ಗುಂಡಿಕ್ಕಿ ಕೃಷ್ಣನನ್ನು ಹತ್ಯೆ ಮಾಡಿದ್ದಾರೆ. ಆದರೆ ನೆರೆ ಮನೆಯವರು ಪಟಾಕಿ ಸದ್ದು ಇರಬೇಕೆಂದು ಸುಮ್ಮನಾಗಿದ್ದರು ಎನ್ನಲಾಗುತ್ತಿದೆ.

ಇದನ್ನೂ ಓದಿ : Mobile Users Alert … ! ಈ ಸೆಟ್ಟಿಂಗ್‌ ಬದಲಾಯಿಸದೇ ಇದ್ರೆ ನಿಮ್ಮ ಮೊಬೈಲ್‌ ಹ್ಯಾಕ್‌ ಆಗೋದು ಪಕ್ಕಾ ..!

Udupi Brahmavar a Youth Shot dead in Hanehalli
Image Credit to Original Source

ಇಂದು ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ಘಟನೆಯಿಂದ ಬ್ರಹ್ಮಾವರದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ಕಳೆದ ಹಲವು ವರ್ಷಗಳಿಂದಲೂ ಇಂತಹ ಘಟನೆ ನಡೆದಿರಲಿಲ್ಲ. ಯಾವುದೋ ದ್ವೇಷದ ಹಿನ್ನೆಲೆಯಲ್ಲಿಯೇ ಈ ಹತ್ಯೆ ನಡೆದಿರಬಹುದು ಎಂದು ಶಂಕಿಸಲಾಗುತ್ತಿದೆ. ಪೊಲೀಸರು ಘಟನಾ ಸ್ಥಳದಲ್ಲಿ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಕೊಲೆ ಪ್ರಕರಣ ಬೇಧಿಸಲು ವಿಶೇಷ ತಂಡವನ್ನು ರಚಿಸಲಾಗಿದೆ.

ಇದನ್ನೂ ಓದಿ : ರಾಮೇಶ್ವರಂ ಕಫೆಯಲ್ಲಿ ತಿಂಡಿ ತಿಂದು ಬಾಂಬ್ ಸ್ಪೋಟಸಿದ ದುಷ್ಕರ್ಮಿ : ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ, ತನಿಖೆಗೆ ಸಿಎಂ ಸಿದ್ದರಾಮಯ್ಯ ಆದೇಶ

ಎಲ್ಲಾ ಆಯಾಮಗಳಿಂದಲೂ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ. ವೈಯಕ್ತಿಕ ದ್ವೇಷವೇ ಅಥವಾ ವ್ಯವಹಾರಿಕ ದ್ವೇಷದಿಂದ ಈ ಹತ್ಯೆ ನಡೆದಿದೆಯಾ ಅನ್ನೋ ಬಗ್ಗೆ ಪೊಲೀಸರು ಮಾಹಿತಿಯನ್ನು ಪಡೆಯುತ್ತಿದ್ದಾರೆ.

ಇದನ್ನೂ ಓದಿ  : ರಾಮೇಶ್ವರಂ ಕಫೆ ಸ್ಪೋಟ ಪ್ರಕರಣ : ತಾಯಿಯ ಒಂದು ಕರೆ ಮಗನ ಜೀವ ಉಳಿಸಿತು …!

Udupi Brahmavar a Youth Shot dead in Hanehalli

Comments are closed.