ಸಕ್ಕರೆ ಕಾಯಿಲೆ (Home Remedies for Diabetes) ಎನ್ನುವುದು ಇತ್ತೀಚಿನ ಕಾಲದಲ್ಲಿ ಸಣ್ಣ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಬರುವ ಕಾಯಿಲೆ ಆಗಿದೆ. ಸಕ್ಕರೆ ಕಾಯಿಲೆ ಒಮ್ಮೆ ಬಂದರೆ ಒಂದು ರೀತಿಯ ಮಾನಸಿಕ ಕಾಯಿಲೆಯಾಗಿ ಪರಿಣಮಿಸುತ್ತದೆ. ಯಾಕೆಂದರೆ ಯಾವುದನ್ನು ತಿನ್ನಬೇಕು, ಎಷ್ಟು ತಿನ್ನಬೇಕು ಎನ್ನುವಂತಹ ಮಾನಸಿಕ ಒತ್ತಡಕ್ಕೆ ನಮ್ಮನ್ನು ಸಿಲುಕಿಸುತ್ತದೆ. ಸಕ್ಕರೆ ಕಾಯಿಲೆ ಎನ್ನುವುದು ದೇಹದಲ್ಲಿ ಉತ್ಪತ್ತಿಯಾಗುವ ಅಧಿಕ ಗ್ಲೂಕೋಸ್ ಪ್ರಮಾಣದಿಂದಾಗಿ ಉಂಟಾಗುತ್ತದೆ. ನಾವು ತಿಂದಂತಹ ಆಹಾರ ಮೇದೋಜೀರಕ (ಪ್ಯಾಂಕ್ರಿಯಾಸ್) ಗ್ರಂಥಿಗೆ ಹೋಗಿ ಅಲ್ಲಿ ನಮ್ಮ ದೇಹಕ್ಕೆ ಬೇಕಾಗುವ ಗ್ಲೂಕೋಸ್‌ನ್ನು ಉತ್ಪತ್ತಿ ಮಾಡುತ್ತದೆ.
ಗ್ಲೊಕೋಸ್ ಒಂದು ರೀತಿಯ ಸಕ್ಕರೆಯಾಗಿದ್ದು,ಇದನ್ನು ಪ್ರಮುಖವಾಗಿ ಪ್ಯಾಂಕ್ರಿಯಾಸ್ ಅಂಗವು ಉತ್ಪತ್ತಿ ಮಾಡುವ ಇನ್ಸುಲಿನ್ ಎಂಬ ಹಾರ್ಮೋನ್ ನಿಯಂತ್ರಿಸುತ್ತದೆ. ಒಂದು ವೇಳೆ ಈ ಹಾರ್ಮೋನ್ ಗ್ಲೂಕೋಸ್‌ನ್ನು ಮಟ್ಟವನ್ನು ನಿಯಂತ್ರಿಸುವುದನ್ನು ನಿಲ್ಲಿಸಿದ್ದರೆ, ನಮ್ಮ ರಕ್ತದಲ್ಲಿ ಗ್ಲೂಕೋಸ್ ಮಟ್ಟ ಹೆಚ್ಚಾಗಿ ಸಕ್ಕರೆ ಕಾಯಿಲೆ ಬರುತ್ತದೆ. ಹಾಗಾಗಿ ನಮ್ಮ ಆಹಾರ ಪದ್ಧತಿಯಲ್ಲಿ ಹಿತ ಮಿತವಾದ ಆಹಾರವನ್ನು ಸೇವಿಸಬೇಕಾಗಿರುವುದು ಮುಖ್ಯವಾಗಿರುತ್ತದೆ. ಹಾಗೆ ಎಂತಂಹ ಸಕ್ಕರೆ ಕಾಯಿಲೆ ಆಗಿದ್ದರೂ ಸಕ್ಕರೆ ಮಟ್ಟವನ್ನು ಕೇವಲ ಈ ಮನೆ ಮದ್ದಿನ ಮೂಲಕ ಗುಣಪಡಿಸಿಕೊಳ್ಳಬಹುದಾಗಿದೆ. ಹಾಗಾದರೆ ಆ ಮನೆಮದ್ದನ್ನು ತಯಾರಿಸುವ ವಿಧಾನವನ್ನು ತಿಳಿಯೋಣ.
ಬೇಕಾಗುವ ಸಾಮಾಗ್ರಿ :
ಅರಶಿನ ಪುಡಿ
ಒಣ ನೆಲ್ಲಿಕಾಯಿ ಪುಡಿ
ನೀರು
ತಯಾರಿಸುವ ವಿಧಾನ :
ಮೊದಲಿಗೆ ಒಂದು ಪಾತ್ರಗೆ ಒಂದು ಲೋಟ ನೀರನ್ನು ಹಾಕಿಕೊಳ್ಳಬೇಕು. ನಂತರ ಎರಡು ಗ್ರಾಂ ಅರಶಿನ ಪುಡಿ, ಎರಡು ಗ್ರಾಂ ಒಣ ನೆಲ್ಲಿಕಾಯಿ ಪೌಡರ್ ಹಾಕಿ ಮಿಕ್ಸ್ ಮಾಡಿ ಮಧ್ಯಮ ಉರಿಯಲ್ಲಿ ಕುದಿಸಿಕೊಳ್ಳಬೇಕು. ಇದನ್ನು ಕಾಲು ಲೋಟ ನೀರು ಆಗುವಷ್ಟು ಚೆನ್ನಾಗಿ ಕುದಿಸಿಕೊಳ್ಳಬೇಕು. ಇದನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಗೂ ರಾತ್ರಿ ಊಟದ ಅರ್ಧ ಗಂಟೆ ಮೊದಲು ಕುಡಿಯಬೇಕು. ಇದನ್ನು ಸತತವಾಗಿ ನೂರು ದಿನಗಳವರೆಗೆ ಮಾಡಿ ಕುಡಿಯುವುದರಿಂದ ಮಾತ್ರ ಯಾವುದೇ ಅಡ್ಡ ಪರಿಣಾಮವಿರದೇ ಸಕ್ಕರೆ ಕಾಯಿಲೆಯಿಂದ ಸಂಪೂರ್ಣವಾಗಿ ಗುಣಮುಖರಾಗಬಹುದಾಗಿದೆ. ಇದರಿಂದ ಕೇವಲ ಸಕ್ಕರೆ ಕಾಯಿಲೆ ಮಾತ್ರವಲ್ಲದೇ ಪಾದದಲ್ಲಿ ಕಾಣಿಸಿಕೊಳ್ಳುವ ಉರಿ, ಮಂಡಿನೋವು, ಕಾಲುಸೆಳೆತವನ್ನು ಗುಣಪಡಿಸುತ್ತದೆ.
ಇದನ್ನೂ ಓದಿ : Home Remedies for Hemorrhoids : ಮೂಲವ್ಯಾಧಿಗೆ ಶಾಶ್ವತ ಪರಿಹಾರ ಬೇಕಾ : ಹಾಗಾದ್ರೆ ಎಳನೀರನ್ನು ಹೀಗೆ ಕುಡಿಯಿರಿ
ಇದನ್ನೂ ಓದಿ : Home Remedies for Fever : ಜ್ವರ ಬಂದಾಗ ಈ ನಾಲ್ಕು ಮನೆಮದ್ದನ್ನು ತಪ್ಪದೇ ಬಳಸಿ
ಇದನ್ನೂ ಓದಿ : Curry Leaves Benefits: ಬಹುಪಯೋಗಿ ಕರಿಬೇವಿನ ಪ್ರಯೋಜನಗಳು ನಿಮಗೆ ಗೊತ್ತಾ…
ಸಕ್ಕರೆ ಕಾಯಿಲೆ ಬಂದ ಮೇಲೆ ಮಾತ್ರೆಗಳನ್ನು ತಿನ್ನಲೇ ಬೇಕಾಗುತ್ತದೆ. ಈ ಮಾತ್ರೆಗಳಿಂದ ನಮ್ಮ ದೇಹದಲ್ಲಿ ಬೇರೆ ಅಡ್ಡ ಪರಿಣಾಮಗಳು ಬೀರುತ್ತದೆ. ಹಾಗಾಗಿ ಸಕ್ಕರೆಕಾಯಿಲೆ ಬಾರದ ಇರುವ ಹಾಗೆ ನಾವು ಉತ್ತಮ ಆಹಾರ ಪದ್ಧತಿಗಳನ್ನು ಅಳವಡಿಸಿಕೊಂಡರೆ ಅದರಲ್ಲೂ ನಾವು ಪ್ರತಿದಿನ ಹಾಲು ಹಾಲಿನ ಉತ್ಪನ್ನಗಳು, ಮೈದಾಹಿಟ್ಟು ಮೈದಾಹಿಟ್ಟಿನಿಂದ ತಯಾರಿಸಿದ ಆಹಾರ, ಸಕ್ಕರೆ, ವೈಟ್ ರೈಸ್ ಹಾಗೂ ಉಪ್ಪಿನಾಂಶವನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಅಳವಡಿಸಿಕೊಂಡರೆ ಸಕ್ಕರೆ ಕಾಯಿಲೆಯಿಂದ ದೂರವಿರಬಹುದಾಗಿದೆ.
Home Remedies for Diabetes: Dry gooseberry powder is the trick for diabetes problem