Mayank Agarwal lost Punjab Captaincy : ಪಂಜಾಬ್ ತಂಡದಲ್ಲಿ ಕನ್ನಡಿಗ ಮಯಾಂಕ್ ನಾಯಕತ್ವಕ್ಕೆ ಕುತ್ತು, ಶಿಖರ್ ಧವನ್ ಹೊಸ ನಾಯಕ

ಬೆಂಗಳೂರು : (Mayank Agarwal lost Punjab Captaincy)ಐಪಿಎಲ್’ನಲ್ಲಿ ಪಂಜಾಬ್ ಕಿಂಗ್ಸ್ (Punjab Kings – PBKS) ತಂಡದ ನಾಯಕರಾಗಿರುವ ಮಯಾಂಕ್ ಅಗರ್ವಾಲ್ (Mayank Agarwal) ಅವರನ್ನು ನಾಯಕತ್ವದಿಂದ ಕೆಳಗಿಳಿಸಲು ಪಂಜಾಬ್ ಫ್ರಾಂಚೈಸಿ ಮುಂದಾಗಿದೆ.

ಕನ್ನಡಿಗ ಮಯಾಂಕ್ ಅಗರ್ವಾಲ್ (Mayank Agarwal lost Punjab Captaincy)ಅವರ ಬದಲು ಭಾರತ ತಂಡದ ಅನುಭವಿ ಎಡಗೈ ಆರಂಭಿಕ ಆಟಗಾರ ಶಿಖರ್ ಧವನ್ (Shikhar Dhawan) ಅವರಿಗೆ ನಾಯಕ ಪಟ್ಟ ಕಟ್ಟಲು ಪಂಜಾಬ್ ಫ್ರಾಂಚೈಸಿ ನಿರ್ಧರಿಸಿದೆ.
ಕಳೆದ ವರ್ಷ ಮಯಾಂಕ್ ಅಗರ್ವಾಲ್ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿ ನೇಮಕಗೊಂಡಿತ್ತು. ಮಯಾಂಕ್ ನಾಯಕತ್ವದಲ್ಲಿ 7 ಪಂದ್ಯಗಳನ್ನು ಗೆದ್ದಿದ್ದ ಪಂಜಾಬ್ ಕಿಂಗ್ಸ್ ಪ್ಲೇ ಆಫ್ ತಲುಪುವಲ್ಲಿ ವಿಫಲವಾಗಿತ್ತು. ನಾಯಕತ್ವದ ಒತ್ತಡವನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದ(Mayank Agarwal lost Punjab Captaincy) ಮಯಾಂಕ್ 13 ಪಂದ್ಯಗಳಿಂದ ಕೇವಲ ಒಂದು ಅರ್ಧಶತಕ ಸಹಿತ ಕೇವಲ 196 ರನ್’ಗಳನ್ನಷ್ಟೇ ಕಲೆ ಹಾಕಿದ್ದರು. ಹೀಗಾಗಿ ಮುಂದಿನ ವರ್ಷದ ಟೂರ್ನಿಯಲ್ಲಿ ಮಯಾಂಕ್ ಕೇವಲ ಆಟಗಾರನಾಗಿ ತಂಡದಲ್ಲಿ ಮುಂದುವರಿಯಲಿದ್ದು, ಪಂಜಾಬ್ ತಂಡವನ್ನು ಶಿಖರ್ ಧವನ್ ಮುನ್ನಡೆಸಲಿದ್ದಾರೆ.

ಇದನ್ನೂ ಓದಿ : India Vs Bangladesh: ಭಾರತದ ಗೆಲುವಿಗೆ ಕನ್ನಡಿಗನ ಕಿರು ಕಾಣಿಕೆ, ಬಾಂಗ್ಲಾ ವಿರುದ್ಧದ ಗೆಲುವಿನ ಹಿಂದೆ ‘ಬ್ರಷ್’ ಮಹಿಮೆ

ಇತ್ತೀಚೆಗೆ ಪಂಜಾಬ್ ಫ್ರಾಂಚೈಸಿ ಕೋಚ್ ಸ್ಥಾನದಿಂದ ಅನಿಲ್ ಕುಂಬ್ಳೆ ಅವರಿಗೆ ಕೊಕ್ ನೀಡಿತ್ತು. 2020ರಲ್ಲಿ ಪಂಜಾಬ್ ತಂಡದ ಹೆಡ್ ಕೋಚ್ ಆಗಿ ನೇಮಕಗೊಂಡಿದ್ದ ಕುಂಬ್ಳೆ ಅವರ ಒಪ್ಪಂದ 2022ರಲ್ಲಿ ಮುಕ್ತಾಯಗೊಂಡಿತ್ತು. ಮತ್ತೆ ಕುಂಬ್ಳೆ ಅವರನ್ನು ಕೋಚ್ ಸ್ಥಾನದಲ್ಲಿ ಮುಂದುವರಿಸಲು ಬಯಸದ ಪಂಜಾಬ್ ಫ್ರಾಂಚೈಸಿ, ಇಂಗ್ಲೆಂಡ್ ತಂಡದ ಮಾಜಿ ಕೋಚ್ ಟ್ರೆವೋರ್ ಬೇಲಿಸ್ ಅವರನ್ನು ಮುಖ್ಯ ತರಬೇತುದಾರನನ್ನಾಗಿ ನೇಮಕ ಮಾಡಿದೆ.

ಇದನ್ನೂ ಓದಿ : T20 World Cup 2022: ಬಾಂಗ್ಲಾ ವಿರುದ್ಧ ಗೆದ್ದ ಭಾರತ, ಸೆಮಿಫೈನಲ್‌ಗೆ ರೋಹಿತ್ ಬಳಗ ಮತ್ತಷ್ಟು ಹತ್ತಿರ

2008ರಿಂದಲೂ ಐಪಿಎಲ್ ಟೂರ್ನಿಯಲ್ಲಿ ಆಡುತ್ತಿರುವ ಪಂಜಾಬ್ ಕಿಂಗ್ಸ್ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. 2014ರಲ್ಲಿ ಆಸ್ಟ್ರೇಲಿಯಾದ ಜಾರ್ಜ್ ಬೈಲಿ ನಾಯಕತ್ವದಲ್ಲಿ ಫೈನಲ್ ತಲುಪಿದ್ದ ಪಂಜಾಬ್ ತಂಡ, ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸೋಲು ಕಂಡು ರನ್ನರ್ಸ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟಿತ್ತು.

ಇದನ್ನೂ ಓದಿ : Syed Mushtaq Ali T20 : ಕ್ವಾರ್ಟರ್ ಫೈನಲ್‌ನಲ್ಲಿ ಪಂಜಾಬ್ ವಿರುದ್ಧ ಕರ್ನಾಟಕಕ್ಕೆ ವೀರೋಚಿತ ಸೋಲು

ಮಯಾಂಕ್ ಅಗರ್ವಾಲ್ ಅವರಿಗೂ ಮುನ್ನ ಕರ್ನಾಟಕದ ಮತ್ತೊಬ್ಬ ಆಟಗಾರ ಕೆ.ಎಲ್ ರಾಹುಲ್ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದರು. ಆದರೆ ತಂಡ ಸತತವಾಗಿ ಪ್ಲೇ ಆಫ್ ತಲುಪಲು ವಿಫಲವಾದ ಹಿನ್ನೆಲೆಯಲ್ಲಿ ಪಂಜಾಬ್ ತಂಡವನ್ನು ತೊರೆದಿದ್ದ ರಾಹುಲ್ ಐಪಿಎಲ್’ನ ನೂತನ ತಂಡವಾಗಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೇರಿದ್ದರು. ರಾಹುಲ್ ನಾಯಕತ್ವದಲ್ಲಿ ಲಕ್ನೋ ತಂಡ ಆಡಿದ ಚೊಚ್ಚಲ ಟೂರ್ನಿಯಲ್ಲೇ ಪ್ಲೇ ಆಫ್ ತಲುಪಿದ ಸಾಧನೆ ಮಾಡಿತ್ತು.

(Mayank Agarwal lost Punjab Captaincy) The Punjab franchise has decided to remove Mayank Agarwal (Mayank Agarwal), who is the captain of the Punjab Kings (PBKS) team in the IPL.

Comments are closed.