ಮಂಗಳವಾರ, ಏಪ್ರಿಲ್ 29, 2025
HomeBreakingHome Remedies For Fever:ಸಾಮಾನ್ಯ ಜ್ವರಕ್ಕೆ ಮನೆಯಲ್ಲೇ ಮಾಡಿ ಮದ್ದು

Home Remedies For Fever:ಸಾಮಾನ್ಯ ಜ್ವರಕ್ಕೆ ಮನೆಯಲ್ಲೇ ಮಾಡಿ ಮದ್ದು

- Advertisement -

(Home Remedies For Fever)ವಾತಾವರಣದ ಬದಲಾವಣೆಯಿಂದಾಗಿ ಜ್ವರ ಆಗಾಗ ಕಾಣಿಕೊಳ್ಳುತ್ತದೆ, ಸಾಮಾನ್ಯವಾಗಿ ಜ್ವರ ಬಂದಾಗ ದೇಹದ ಉಷ್ಣತೆ ಎರುತ್ತದೆ ಆದರೆ ಕೆಲವರಲ್ಲಿ ದೇಹದ ಉಷ್ಣತೆಯಲ್ಲಿ ಎನು ಬದಲಾವಣೆ ಆಗುವುದಿಲ್ಲ ಆದರೆ ಆಂತರಿಕವಾಗಿ ಸುಸ್ತು, ಪದೇ ಪದೇ ತಲೆಸುತ್ತುವ ಅನುಭವ ಆಗುತ್ತಿರುತ್ತದೆ. ಇಂತಹ ಲಕ್ಷಣಗಳು ಇದ್ದರೆ ಒಳ ಜ್ವರದ ಲಕ್ಷಣ ಎನ್ನಬಹುದು. ಒಳ ಜ್ವರ ಬಂದಾಗ ಆಸ್ಪತ್ರೆಗೆ ಹೋಗುವ ಬದಲು ತಕ್ಷಣಕ್ಕೆ ಮನೆಮದ್ದು ಮಾಡಿಕೊಂಡು ಕುಡಿಯಬಹುದು ಒಂದುವೇಳೆ ಒಳ ಜ್ವರ ಕಡಿಮೆ ಆಗದಿದ್ದರೆ ವೈಧ್ಯರನ್ನು ಬೇಟಿ ಆಗುವುದು ಉತ್ತಮ. ಒಳ ಜ್ವರಕ್ಕೆ ಮನೆಮದ್ದು ಹೇಗೆ ತಯಾರಿಸಿಕೊಳ್ಳಬೇಕು ಎಂಬ ಮಾಹಿತಿಯ ಕುರಿತು ತಿಳಿಯೋಣ.

(Home Remedies For Fever)ಕಾಳು ಜೀರಿಗೆ
ರಾತ್ರಿ ಮಲಗುವ ಮುನ್ನ ಕಾಳು ಜೀರಿಗೆ ಕಷಾಯ ಮಾಡಿಟ್ಟುಕೊಂಡು ಕುಡಿದರೆ ಒಳ ಜ್ವರ ಕಡಿಮೆ ಮಾಡಿಕೊಳ್ಳಬಹುದು . ಪಾತ್ರೆಯಲ್ಲಿ ಒಂದು ಲೋಟ ನೀರು ಹಾಕಿ ಕಾಯಿಸಿಕೊಂಡು ಅದಕ್ಕೆ ಒಂದು ಚಮಚ ಕಾಳು ಜೀರಿಗೆ ಹಾಕಿ ಕುದಿಸಿಕೊಳ್ಳಬೇಕು. ನಂತರ ಲೋಟಕ್ಕೆ ಕಾಳು ಜೀರಿಗೆಯ ಸಮೆತ ನೀರು ಹಾಕಿ ಇಟ್ಟುಕೊಂಡು ಬೆಳಿಗ್ಗೆ ಕಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯಬೇಕು. ಈ ಕಷಾಯವನ್ನು ಹೇಗೆ ಸೇವಿಸಬೇಕು ಎಂಬ ಮಾಹಿತಿಯ ಕುರಿತು ಈ ಕೆಳಗೆ ನೀಡಲಾಗಿದೆ.

ಸಣ್ಣ ಲೋಟವನ್ನು ತೆಗೆದುಕೊಂಡು ಅದರಲ್ಲಿ ಕಾಲು ಭಾಗದಷ್ಟು ಕುದಿಸಿಕೊಂಡ ಕಾಳು ಜೀರಿಗೆ ನೀರು ಸೊಸಿಕೊಂಡು ಅದಕ್ಕೆ ಅರ್ಧ ನಿಂಬೆಹಣ್ಣಿನ ರಸ, ಉಪ್ಪು ಬೇರೆಸಿ ಕಾಲಿ ಹೊಟ್ಟೆಯಲ್ಲಿ ಇದನ್ನು ಕುಡಿದರೆ ಒಳ ಜ್ವರ ಕಡಿಮೆ ಆಗುತ್ತದೆ. ಸಣ್ಣ ಮಕ್ಕಳಿಗೆ ಎರಡು ಚಮಚ ಕಾಳು ಜೀರಿಗೆ ನೀರಿಗೆ ಒಂದು ಹನಿ ನಿಂಬೆ ರಸ, ಒಂದು ಚಿಟಿಕೆ ಬೆರೆಸಿ ಕುಡಿಸಿದರೆ ಜ್ವರ ಕಡಿಮೆ ಆಗುತ್ತದೆ. ಥೈರಾಯಿಡ್‌ ಸಮಸ್ಯೆ ಇರುವವರು ಮಾತ್ರೆ ತೆಗೆದುಕೊಂಡು ಅರ್ಧ ಗಂಟೆ ಬಿಟ್ಟು ಕಾಳು ಜೀರಿಗೆ ಕಷಾಯ ಸೇವಿಸಿದರೆ ಉತ್ತಮ. ತಿಂಗಳಿಗೆ ಒಂದು ಬಾರಿ ಕಾಳು ಜೀರಿಗೆ ಕಷಾಯ ಕುಡಿದರೆ ಒಳ ಜ್ವರ ನಿಮ್ಮ ಹತ್ತಿರ ಸುಳಿಯುವುದಿಲ್ಲ.

ಇದನ್ನೂ ಓದಿ:Fever Reduce Tips:ಜ್ವರ ತಟ್ಟನೆ ಉಪಶಮನವಾಗಲು ಇಲ್ಲಿದೆ ಪರಿಹಾರ

ಇದನ್ನೂ ಓದಿ:Curry Leaves: ರುಚಿಗೆ ಅಷ್ಟೇ ಅಲ್ಲ ಅರೋಗ್ಯಕ್ಕೂ ಉತ್ತಮ ಕರಿಬೇವಿನ ಎಲೆಗಳು

ಗರಿಕೆ ಹುಲ್ಲು
ಒಳ ಜ್ವರಕ್ಕೆ ಗರಿಕೆ ಹುಲ್ಲಿನ ಕಷಾಯ ಉತ್ತಮ ಮನೆಮದ್ದು, ಪ್ರತಿದಿನ ಗರಿಕೆ ಹುಲ್ಲಿನ ಕಷಾಯವನ್ನು ಸೇವನೆ ಮಾಡುತ್ತಾ ಬಂದರೆ ಒಳ ಜ್ವರ ನಿವಾರಣೆ ಆಗುತ್ತದೆ. ಗರಿಕೆಹುಲ್ಲು,ಒಂದೆಲಗ,ಜೀರಿಗೆಯನ್ನು ನೀರಲ್ಲಿ ಹಾಕಿ ಕುದಿಸಿಕೊಂಡು ಕುಡಿಯುವುದರಿಂದ ಒಳ ಜ್ವರ ಕಡಿಮೆ ಆಗುತ್ತದೆ. ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯುವುದರಿಂದ ಜ್ವರ ಕಡಿಮೆ ಆಗುತ್ತದೆ. ದೇಹವು ವೈರಸ್‌ ವಿರುದ್ಧ ಹೋರಾಡುವಾಗ ಸಾಮಾನ್ಯವಾಗಿ ಜ್ವರ ಬರುತ್ತದೆ. ಈ ಸಂದರ್ಭದಲ್ಲಿ ದ್ರವ ರೂಪದ ಆಹಾರವನ್ನು ಸೇವನೆ ಮಾಡುವುದು ಉತ್ತಮ. ಹಾಗಾಗಿ ಅತಿ ಹೆಚ್ಚು ನೀರು ಕುಡಿಯಬೇಕು.ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ವಾತಾವರಣ ಹದಗೆಡುತ್ತಿರುವುದರಿಂದ ಎಲ್ಲರಲ್ಲೂ ಅಲರ್ಜಿ, ಅಸ್ತಮಾ ಹೆಚ್ಚಾಗುತ್ತಿದೆ. ಹಾಗಾಗಿ ಕಾಲಿ ಹೊಟ್ಟೆಯಲ್ಲಿ ಗರಿಕೆ ಹುಲ್ಲಿನ ರಸವನ್ನು ಮೂರು ಚಮಚ ಸೇವನೆ ಮಾಡುವುದರಿಂದ ಅಲರ್ಜಿ ಶೀತ , ಅಸ್ತಮಾವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.

Home Remedies For Fever Home remedies for common fever

RELATED ARTICLES

Most Popular