Vasuki Vaibhav – Chandana : ಹಸೆಮಣೆ ಏರಲು ಸಜ್ಜಾದ ಬಿಗ್‌ಬಾಸ್‌ ಖ್ಯಾತಿಯ ವಾಸುಕಿ ವೈಭವ್‌ – ಚಂದನಾ

ಕಿರುತೆರೆ ಹಾಗೂ ಸಿನಿರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಸ್ಟಾರ್‌ ಸೆಲೆಬ್ರಿಟಿಗಳು ಸದ್ದಿಲ್ಲದೇ ತಮ್ಮ ಮದುವೆ ಪೂರ್ವಭಾವಿ ಕಾರ್ಯಕ್ರಮಗಳನ್ನು ಜೋರಾಗಿ ನಡೆಯುತ್ತಿವೆ. (Vasuki Vaibhav – Chandana) ಅದರಲ್ಲೂ ಈ ಕರೋನಾ ಮಹಾಮಾರಿ ಬಂದು ಲಾಕ್‌ಡೌನ್‌ ಆದ ಮೇಲೆ ಹೆಚ್ಚಾಗಿದ್ದು ಕೇವಲ ಬೇರೆ ಭಾಷೆಯ ಸಿನಿರಂಗದಲ್ಲಿ ಮಾತ್ರವಲ್ಲದೇ ನಮ್ಮ ಸ್ಯಾಂಡಲ್‌ವುಡ್‌ನಲ್ಲಿ ಕೂಡ ಹೆಚ್ಚಾಗಿರುತ್ತದೆ. ಸದ್ಯ ಅಂತಹ ಸುದ್ದಿಗೆ ಗುರಿಯಾಗಿರುವುದು ಬಿಗ್‌ಬಾಸ್‌ ಖ್ಯಾತಿಯ ವಾಸುಕಿ ವೈಭವ್‌ ಮತ್ತು ಚಂದನ.

ಇನ್ನೂ ಕನ್ನಡ ಕಿರುತೆರೆಯಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತಿರುವ ರಿಯಾಲಿಟಿ ಶೋ ಎಂದರೆ ಬಿಗ್‌ಬಾಸ್‌ ಕನ್ನಡ ಸೀಸನ್‌ 9. ಈ ಹಿಂದೆ ಬಿಗ್‌ ಬಾಸ್‌ ಸೀಸನ್‌ನಲ್ಲಿ ಗಾಯಕ ವಾಸುಕಿ ವೈಭವ್‌ ಮತ್ತು ನಟಿ ಚಂದನ ಭಾಗವಹಿಸಿದ್ದಾರೆ. ಅಲ್ಲಿಂದ ಪ್ರಾರಂಭವಾದ ಇವರಿಬ್ಬರ ಪ್ರೀತಿ ಪಯಣ ಇದೀಗ ಹಸೆಮಣೆ ಏರಲು ಸಜ್ಜಾಗಿದ್ದಾರೆ. ನಟಿ ಚಂದನ ಕಿರುತೆರೆಯಲ್ಲಿ ಒಂದಷ್ಟು ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಇನ್ನೂ ಚಂದನ್‌ ಇತ್ತೀಚಿನ ದಿನಗಳಲ್ಲಿ ಕನ್ನಡ ಸಿನಿರಂಗದಲ್ಲಿ ಹಿನ್ನಲೆ ಗಾಯಕ, ಸಂಗೀತ ನಿರ್ದೇಶಕ ಹಾಗೂ ಕೆಲವೊಂದಿ ಸಿನಿಮಾಗಳಲ್ಲಿ ನಟಿಸುವ ಮೂಲಕ ಪ್ರಚಲಿತದಲ್ಲಿ ಇದ್ದಾರೆ.

ಬಿಗ್‌ಬಾಸ್‌ ಮೂಲಕ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡ ವಾಸುಕಿ ವೈಭವ್‌ ಸಾಮಾಜಿಕ ಜಾಲತಾಣದಲ್ಲೂ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸಿನಿಮಾದ ಮ್ಯೂಸಿಕ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನೂ ಇವರಿಬ್ಬರ ಬಗ್ಗೆ ಸುದ್ದಿ ಹುಟ್ಟಿಕೊಂಡಿದ್ದು, ಇವರಿಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪೋಸ್ಟ್‌ ಮೂಲಕ ಎನ್ನುವುದು ತಿಳಿದು ಬಂದಿದೆ.

ಇದನ್ನೂ ಓದಿ : Rashmika Mandanna Ban‌ : ನನ್ನ ಯಾರು ಬ್ಯಾನ್‌ ಮಾಡಿಲ್ಲ : ಕನ್ನಡ ಸಿನಿಮಾ ಬಗ್ಗೆ ಪ್ರೀತಿ ಇದೆ : ರಶ್ಮಿಕಾ ಮಂದಣ್ಣ

ಇದನ್ನೂ ಓದಿ : Vijayananda: ವಿಜಯ್‌ ಸಂಕೇಶ್ವರ್‌ ಜೀವನಾಧಾರಿತ ಚಿತ್ರ ವಿಜಯಾನಂದ ಬಿಡುಗಡೆ

ಇದನ್ನೂ ಓದಿ : Yash Radhika Wedding Anniversary : 6ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ನಟ ಯಶ್‌ ನಟಿ ರಾಧಿಕಾ ಪಂಡಿತ್‌

ವಾಸುಕಿ ವೈಭವ್‌ ಜನ್ಮದಿನದಂದು ಚಂದನ ತಮ್ಮ ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ” ವಾಸುಕಿ ವೈಭವ್‌ ನನ್ನ ಅತ್ಯಂತ ಬೆಸ್ಟ್‌ ಫ್ರೆಂಡ್.‌ ಹಾಗೆ ವಾಸುಕಿ ವೈಭವ್‌ ತುಂಬಾ ಒಳ್ಳೆಯ ಮನುಷ್ಯ ಕೂಡ ಹೌದು ವಾಸುಕಿ ಜೊತೆ ನಾನು ಎಲ್ಲಾ ಸೀಕ್ರೆಟ್‌ಗಳನ್ನು ಹೋಳಿಕೊಳ್ಳಬಹುದು. ಇವರು ನನ್ನ ಆತ್ಮೀಯ ಗೆಳೆಯನಾಗಿದ್ದಾರೆ. ನನ್ನ ಒಳಿತಿಗೆ ಇವರು ಸಹಾಯ ಮಾಡುತ್ತಾರೆ ಎಂದಿಗೂ ನನಗೆ ಬೆಂಬಲವಾಗಿ ನಿಂತಿರುವ ಏಕೈಕ ವ್ಯಕ್ತಿ. ಅತ್ಯಂತ ಬೆಸ್ಟ್‌ ಪರ್ಸನ್‌ ಎಂದು ಹಾಕಿಕೊಳ್ಳುವ ಮೂಲಕ ಸ್ನೇಹಕ್ಕಿಂತ ಮಿಗಿಲಾದ ಸಂಬಂಧ ಇವರಲ್ಲಿದೆ ಎಂಬುವುದಾಗಿ ಜನರು ಊಹೆ ಮಾಡಿಕೊಳ್ಳಲು ಆರಂಭಿಸಿದ್ದಾರೆ. ಹಾಗಾಗಿ ಅಭಿಮಾನಿಗಳು ಅತಿ ಶೀಘ್ರದಲ್ಲೇ ಇವರಿಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುವುದಾಗಿ ಕಾಮೆಂಟ್‌ ಮಾಡಲು ಶುರು ಮಾಡಿದ್ದಾರೆ. ಇನ್ನೂ ಕುರಿತು ಅಧಿಕೃತ ಮಾಹಿತಿಯನ್ನು ಇವರಿಬ್ಬರು ಯಾವಾಗ ಹಂಚಿಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

Vasuki Vaibhav – Chandana : Bigg Boss fame Vasuki Vaibhav – Chandana all set to rise to the throne

Comments are closed.