ಮದ್ಯಪ್ರಿಯರಿಗೆ ಶಾಕ್ !, ಮಾರ್ಚ್ 31ರ ವರೆಗೆ ಬಾರ್ ಬಂದ್, ಹೋಟೆಲ್ ನಲ್ಲಿ ಪಾರ್ಸೆಲ್ ಮಾತ್ರ

0

ಬೆಂಗಳೂರು : ಕೊರೊನಾ ವೈರಸ್ ಎಫೆಕ್ಟ್ ಇದೀಗ ಮದ್ಯಪ್ರಿಯರಿಗೂ ತಟ್ಟಿದೆ. ಕೊರೊನಾ ಸೋಂಕು ಹರಡುತ್ತಿರೋ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮಾರ್ಚ್ 31ರ ವರೆಗೆ ಬಾರ್ ಗಳನ್ನು ಬಂದ್ ಮಾಡಿ ಆದೇಶ ಹೊರಡಿಸಿದೆ.

ಕೊರೊನಾ ಕಾಣಿಸಿಕೊಳ್ಳುತ್ತಿದ್ದಂತೆಯೇ ರಾಜ್ಯ ಸರಕಾರ ರಾಜ್ಯದಲ್ಲಿನ ಪಬ್ ಗಳನ್ನು ಬಂದ್ ಮಾಡುವಂತೆ ಆದೇಶ ಹೊರಡಿಸಿತ್ತು. ಅಲ್ಲದೇ ಪಬ್ ಮಾಲೀಕರು ಕೂಡ ಸರಕಾರದ ಆದೇಶವನ್ನು ಪಾಲನೆ ಮಾಡಿದ್ದರು.

ಕೊರೊನಾ ವಿರುದ್ದ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಂಡಿರೋ ರಾಜ್ಯ ಸರಕಾರ ಪಬ್ ಬೆನ್ನಲ್ಲೇ ಹೋಟೆಲ್ ಗಳ ಮೇಲೆಯೂ ನಿರ್ಬಂಧ ಹೇರಿದೆ. ಹೋಟೆಲ್ ಗಲ್ಲಿ ಸರ್ವಿಸ್ ನೀಡುವುದಕ್ಕೆ ನಿರ್ಬಂಧ ಹೇರಿ. ಗ್ರಾಹಕರಿಗೆ ಕೇವಲ ಪಾರ್ಸೆಲ್ ವ್ಯವಸ್ಥೆಯನ್ನಷ್ಟೇ ಕಲ್ಪಿಸಲು ಸೂಚಿಸಿದೆ.

ಸರ್ವಿಸ್ ನೀಡುವುದಕ್ಕೆ ನಿರ್ಬಂಧ ಹೇರಿ, ಕೇವಲ ಪಾರ್ಸೆಲ್ ನೀಡುವುದಕ್ಕಷ್ಟೇ ಅವಕಾಶವನ್ನು ಕಲ್ಪಿಸಿದೆ. ಆದರೆ ಬಾರ್ ಗಳ ವಿರುದ್ದ ಯಾವುದೇ ಕ್ರಮವನ್ನು ಕೈಗೊಂಡಿರಲಿಲ್ಲ. ಇದೀಗ ರಾಜ್ಯ ಸರಕಾರ ಬಾರ್ ಗಳನ್ನು ಬಂದ್ ಮಾಡುವಂತೆ ಆದೇಶಿಸಿದ್ದು, ಮದ್ಯಪ್ರಿಯರಿಗೆ ನಿರಾಸೆಯಾಗಿದೆ.

ರಾಜ್ಯ ಸರಕಾರದ ಆದೇಶದಂತೆ ಮಾರ್ಚ್ 31ರ ವರೆಗೆ ರಾಜ್ಯದಲ್ಲಿನ ಎಲ್ಲಾ ಬಾರ್ ಗಳು ಬಂದ್ ಆಗಲಿದ್ದು, ಕೊರೊನಾ ನಿಯಂತ್ರಣಕ್ಕೆ ಬಾರದೇ ಇದ್ರೆ ಇನ್ನಷ್ಟು ದಿನ ಬಾರ್, ಹೋಟೆಲ್, ಪಬ್ ಸಂಪೂರ್ಣವಾಗಿ ಸ್ತಬ್ದವಾಗಲಿದೆ.

Leave A Reply

Your email address will not be published.