ನವದೆಹಲಿ : ಇನ್ಮುಂದೆ ಗ್ಯಾಸ್ ಬುಕ್ ಮಾಡಿ ದಿನಗಟ್ಟಲೆ ಎಲ್ ಪಿಜಿ ಸಿಲಿಂಡರ್ ಗಾಗಿ ಅಲೆದಾಡಬೇಕಾದ ಸ್ಥಿತಿ ಇನ್ಮುಂದೆ ಇರೋದಿಲ್ಲ. ಯಾಕೆಂದ್ರೆ ಗ್ಯಾಸ್ ಬುಕ್ಕಿಂಗ್ ಮಾಡಿದ ಕೆಲವೇ ನಿಮಿಷಗಳಲ್ಲಿ ಎಲ್‌ಪಿಜಿ ಸಿಲಿಂಡರ್ ಒದಗಿಸುವ ನಿಟ್ಟಿನಲ್ಲಿ “ತತ್ಕಾಲ್ ಎಲ್‌ಪಿಜಿ ಸೇವಾ’ಆರಂಭಿಸಲು ಇಂಡಿಯನ್ ಆಯಿಲ್ ಕಾರ್ಪೊರೇಶನ್ (ಐಒಸಿಎಲ್) ಯೋಜನೆ ರೂಪಿಸಿದೆ.

ಗ್ಯಾಸ್ ಬುಕ್ಕಿಂಗ್ ಮಾಡಿದ 30 ರಿಂದ 45 ನಿಮಿಷಗಳಲ್ಲಿ ಸಿಲಿಂಡರ್ ಮನೆ ಬಾಗಿಲಿಗೆ ಬರಲಿದೆ. “ಇಂಡೇನ್’ ಬ್ರ್ಯಾಂಡ್‌ನಡಿ ಎಲ್‌ಪಿಜಿ ನೀಡು ತ್ತಿದ್ದು, ಫೆ. 1ರಿಂದಲೇ ತತ್ಕಾಲ್ ಎಲ್‌ಪಿಜಿ ಸೇವಾ ಆರಂಭವಾಗುವ ನಿರೀಕ್ಷೆ ಇದೆ.ಎಲ್‌ಪಿಜಿ ಬಳಕೆಯು 2020ರಲ್ಲಿ 274.1 ಲಕ್ಷ ಟನ್‌ಗಳಾಗಿದ್ದು, ಇದು 2019ಕ್ಕಿಂತ ಶೇ. 4.3 ಹೆಚ್ಚು. ಇದೇ ಅವಧಿಯಲ್ಲಿ ಇಂಧನ ಬಳಕೆ 272.7 ಲಕ್ಷ ಟನ್ ಆಗಿದ್ದು, ಇದು 2019ಕ್ಕಿಂತ ಶೇ. 9.3 ಇಳಿಕೆಯಾಗಿದೆ.

ಇದೀಗ ಒಂದೇ ದಿನದಲ್ಲಿ ಗ್ಯಾಸ್ ವಿತರಣೆ ಮಾಡುವ ಸೇವೆಯನ್ನ ಜಾರಿಗೆ ತರುವ ನಿಟ್ಟಿನಲ್ಲಿ ಏಕ ಸಿಲಿಂಡರ್ ಗ್ರಾಹಕರಿಗಾಗಿ ಈ ಸೇವೆ ಜಾರಿ ಗೊಳಿಸಲು ಎಲ್ಲ ರಾಜ್ಯ ಗಳು ಕನಿಷ್ಠ ಒಂದು ಪ್ರಮುಖ ನಗರ ಅಥವಾ ಜಿಲ್ಲೆಯನ್ನು ಗುರುತಿಸ ಬೇಕಾಗಿದೆ.