ಕೆಜಿಎಫ್-2 ಚಿತ್ರತಂಡಕ್ಕೆ ಎದುರಾಯ್ತು ಸಂಕಷ್ಟ…! ದಾಖಲೆ ನಿರ್ಮಿಸಿದ ಟೀಸರ್ ಗೆ ಬೀಳುತ್ತಾ ಕತ್ತರಿ…?!

ಯೂಟ್ಯೂಬ್ ಸೇರಿದಂತೆ ಎಲ್ಲ ಸೋಷಿಯಲ್ ಮೀಡಿಯಾದಲ್ಲಿ ಹೊಸ ದಾಖಲೆ‌ ನಿರ್ಮಿಸುತ್ತ ಸಾಗುತ್ತಿರುವ ಬಹುನೀರಿಕ್ಷಿತ ಕೆಜಿಎಫ್-೨ ಟೀಸರ್ ಗೆ ಕಂಟಕವೊಂದು ಎದುರಾಗಿದೆ.

ಕೆಜಿಎಫ್-೨ ಟೀಸರ್ ರಿಲೀಸ್ ಆದ ಕೂಡಲೇ ಸಿನಿಪ್ರಿಯರ ಮನಸೆಳೆದ ಗನ್ ನಿಂದ ಸಿಗರೇಟ್ ಹೊತ್ತಿಸಿಕೊಳ್ಳುವ ಸೀನ್ ಗೆ ಕತ್ತರಿ‌ಬೀಳುವ ಸ್ಥಿತಿ ಎದುರಾಗಿದ್ದು, ಚಿತ್ರತಂಡ ಆತಂಕದಲ್ಲಿದೆ.

ಕಳೆದ ಗುರುವಾರ ರಾತ್ರಿ ಅಂದ್ರೇ ಜ.7 ರಂದು ರಿಲೀಸ್ ಆದ ಕೆಜಿಎಫ್-೨ ಟೀಸರ್ ಯೂಟ್ಯೂಬ್ ನಲ್ಲಿ 125 ಮಿಲಿಯನ್ ವೀಕ್ಷಣೆ ಕಂಡಿದ್ದು ಹೊಸ ವಿಶ್ವದಾಖಲೆ ನಿರ್ಮಿಸಿದೆ.

ಆದರೆ ಈ ದಾಖಲೆಗಳ ಮಧ್ಯೆ ಕೆಜಿಎಫ್-೨ ಟೀಸರ್ ಗೆ ನಿಯಮ ಉಲ್ಲಂಘನೆ ಕಳಂಕ ಎದುರಾಗಿದ್ದು ರಾಜ್ಯ ಆರೋಗ್ಯ ಇಲಾಖೆ ನೊಟೀಸ್ ಜಾರಿ ಮಾಡಿದೆ.

ಕೆಜಿಎಫ್-೨ ಟೀಸರ್ ನಲ್ಲಿ ನಾಯಕ ಯಶ್ ರೈಫಲ್ ನಿಂದ. ಸಿಗರೇಟ್ ಹೊತ್ತಿಸಿಕೊಳ್ಳುವ ದೃಶ್ಯವಿದೆ. ಈ ದೃಶ್ಯದಲ್ಲಿ ನಿಯಮದಂತೆ “ಧೂಮಪಾನ ಆರೋಗ್ಯಕ್ಕೆ ಹಾನಿಕರ” ಎಂಬ ಸೂಚನೆ ಪ್ರಕಟಿಸಿಲ್ಲ.

ಹೀಗಾಗಿ ಇದು ತಂಬಾಕು ಉತ್ಪನ್ನ ಕಾಯಿದೆ 2003 ರ ಸೆಕ್ಷನ್ 5 ಪ್ರಕಾರ ಅಪರಾಧವಾಗಿದೆ. ಈ ಹಿನ್ನೆಲೆಯಲ್ಲಿ ಅರೋಗ್ಯ ಇಲಾಖೆ ಚಿತ್ರತಂಡ ಕ್ಕೆ ನೊಟೀಸ್ ಜಾರಿ‌ಮಾಡಿದೆ.ದೃಶ್ಯವನ್ನು ಕೈಬಿಡುವಂತೆ ನಾಯಕ ಯಶ್ ಹಾಗೂ ಚಿತ್ರತಂಡ ಕ್ಕೆ ಆರೋಗ್ಯ ಇಲಾಖೆ ಸೂಚಿಸಿದೆ.

ಹೀಗಾಗಿ ಚಿತ್ರತಂಡ ಸಂದಿಗ್ಧಕ್ಕೆ ಸಿಲುಕಿದ್ದು ಟೀಸರ್ ಎಡಿಟ್ ಮಾಡಿ ಬಿಡುಗಡೆ ಮಾಡೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Comments are closed.