ಸ್ವದೇಶಿ ದೀಪ ಬಳಸಿ….ದೀಪಾವಳಿ ಆಚರಿಸಿ…! ಮಾರುಕಟ್ಟೆಗೆ ಗೋಮಯ ಹಣತೆ…!!

ನವದೆಹಲಿ: ಕೊರೋನಾ ಸಂಕಷ್ಟದ ನಡುವೆಯೇ ದೀಪಾವಳಿ ಹಬ್ಬ ಹೊಸ್ತಿಲಿನಲ್ಲಿದೆ.  ಪರಿಸರ ಮಾಲಿನ್ಯದ ಕೂಗಿನ ನಡುವೆ ಮಾಲಿನ್ಯ ರಹಿತ ದೀಪಾವಳಿ ಆಚರಣೆಗೆ ಮಹತ್ವ ನೀಡಲಾಗುತ್ತಿದ್ದು, ಗೋಮಯ ಹಣತೆ ಬಳಸುವಂತೆ ರಾಷ್ಟ್ರೀಯ ಕಾಮಧೇನು ಆಯೋಗ ಮನವಿ ಮಾಡಿದೆ.

ದೇಶದಲ್ಲಿ ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಗೋವುಗಳ ಸಗಣಿಯಿಂದ ಗೋಮಯ ದೀಪ,ಹಣತೆ ಉತ್ಪಾದಿಸಲಾಗಿದ್ದು, ಇದನ್ನು ಬಳಸಿದ್ರೆ  ಗೋಸಾಕಾಣಿಕೆಗೆ ಇನ್ನಷ್ಟು ಪ್ರೋತ್ಸಾಹ ಹಾಗೂ ಬೆಂಬಲ ದೊರೆತಂತಾಗಲಿದೆ. ರಾಷ್ಟ್ರೀಯ ಕಾಮಧೇನು ಆಯೋಗ ಇಂತಹದೊಂದು ವಿನೂತನ ಪ್ರಯತ್ನಕ್ಕೆ ಮುನ್ನುಡಿ ಬರೆದಿದೆ.

ದೇಶದ ವಿವಿಧ ಭಾಗಗಳಲ್ಲಿ ಮಹಿಳೆಯರ ಸ್ವ-ಸಹಾಯ ಸಂಘಗಳನ್ನು ಬಳಸಿಕೊಂಡು ಇದೇ ಮೊದಲ ಬಾರಿಗೆ ಗೋಮಯ ಹಣತೆಗಳನ್ನು ಸಿದ್ಧಪಡಿಸಲಾಗಿದೆ. ಮಣ್ಣು ಸೇರಿ ವ್ಯರ್ಥ್ಯವಾಗುವ ಸಗಣಿಯನ್ನು ಬಳಸಿಕೊಂಡು ಹಣತೆ ತಯಾರಿಸಲಾಗುತ್ತಿದ್ದು, ಇವುಗಳಿಗೆ ಪರಿಸರ ಸ್ನೇಹಿ ಬಣ್ಣ ಬಳಿದು ಶೃಂಗರಿಸಲಾಗಿದೆ.

ಗೋಮಯ ಹಣತೆ ಬಳಸುವುದರಿಂದ ಪರಿಸರ ಸ್ನೇಹಿ ದೀಪಾವಳಿ ಆಚರಣೆ ಕೂಡ ಸಾಧ್ಯವಾಗಲಿದ್ದು, ಸ್ವದೇಶಿ ಉತ್ಪಾದನೆಗೆ ಪ್ರೋತ್ಸಾಹ ನೀಡಿದಂತೆಯೂ ಆಗಲಿದೆ ಅನ್ನೋದು ಆಯೋಗದಚಿಂತನೆ. ಒಟ್ಟು 11 ಕೋಟಿ  ಹಣತೆಗಳನ್ನು ಉತ್ಪಾದಿಸಲಾಗಿದ್ದು, ಮಾಲ್ ಗಳಲ್ಲಿ, ಸೂಪರ್ ಮಾರ್ಕೆಟ್ ಹಾಗೂ ವಿವಿಧೆಡೆ ಲಭ್ಯವಿದೆ.

Comments are closed.