ರೆಟ್ರೋ ಕಾಲಕ್ಕೆ ಮರಳಿದ ಜಾಹ್ನವಿ ಕಪೂರ್….! ಹೇಗಿದೆ ಗೊತ್ತಾ ಹಾಟ್ ಬೆಡಗಿಯ ಪೋಟೋಶೂಟ್….!!

ಸದಾ ಹಾಟ್ ಲುಕ್ ಹಾಗೂ ಕಾಸ್ಟ್ಯೂಮ್ ನಿಂದಲೇ ಸುದ್ದಿಯಾಗೋ ಬಾಲಿವುಡ್ ಬೆಡಗಿ ಜಾಹ್ನವಿ ಕಪೂರ್ ಇದೇ ಮೊದಲ ಬಾರಿಗೆ ರೆಟ್ರೋ ಲುಕ್ ನಲ್ಲಿ ಮಿಂಚಿದ್ದು, ಬಾಲಿವುಡ್ ಮಂದಿಯ ನಿದ್ದೆಗೆಡಿಸಿದ್ದಾರೆ.

ರೆಟ್ರೋ ಲುಕ್ ನಲ್ಲಿ ಜಾಹ್ನವಿ ಪೋಟೋಗಳು ಮುದ್ದಾಗಿ ಮೂಡಿಬಂದಿದ್ದು, ಎಂಥವರಾದ್ರೂ ವಾವ್ ಎನ್ನುವಂತಿದೆ ಪೋಸ್ ಗಳು. 1950 ಯ ವೇಷ ಭೂಷಣಗಳ ಜೊತೆ ಜಾಹ್ನವಿ ಸೌಂದರ್ಯ ಮೆಳೈಸಿದಂತಿದ್ದು, ತಾಯಿಯಂತೆ ಜಾಹ್ನವಿ ಕೂಡ ಪಡ್ಡೆಗಳ ಎದೆಬಡಿತ ಹೆಚ್ಚಿಸಿದ್ದಾರೆ.

1950 ರ ವೇಷಭೂಷಣ,ಹೇರ್ ಸ್ಟೈಲ್ ನಲ್ಲಿ ಜಾಹ್ನವಿ ಈ ಪೋಟೋಶೂಟ್ ಮಾಡಿಸಿದ್ದು, ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಬಿಳಿ ಮತ್ತು ಗೋಲ್ಡ್ ಕಲರ್ ಸೀರೆ, ಅಚ್ಚನೀಲಿ ಸೀರೆ ಅದಕ್ಕೊಪುವ ಡವೆಗಳಲ್ಲಿ ಜಾಹ್ನವಿ ಮನಮೋಹಕ ಚೆಲುವು ಅನಾವರಣಗೊಂಡಿದೆ.

ಧಡಕ್ ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿಕೊಟ್ಟ ಜಾಹ್ನವಿ ಕಪೂರ್,ಒಂದು ಕಾಲದಲ್ಲಿ ತನ್ನ ಸೌಂದರ್ಯದಿಂದಲೇ ಬಾಲಿವುಡ್ ನಲ್ಲಿ ಮಿಂಚಿದ್ದ ಶ್ರೀದೇವಿ ಹಾಗೂ ಬೋನಿಕಪೂರ್ ಪುತ್ರಿ. ಜಾಹ್ನವಿ ನಟನೆಯ ಗುಂಜನ್ ಸಕ್ಸೆನಾ ಓಓಟಿಯಲ್ಲಿ ರಿಲೀಸ್ ಆಗಿದ್ದು , ಸಧ್ಯ ಜಾಹ್ನವಿ ಕಪೂರ್, ಅಪ್ಜಾನಾ ಹಾಗೂ ದೋಸ್ತಾನಾ-2 ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಚಿತ್ರಗಳ ಜೊತೆ ವೆಬ್ ಸೀರಿಸ್ ನಲ್ಲೂ ನಟಿಸಿರುವ ಜಾಹ್ನವಿ ಚಿತ್ರಕ್ಕಾಗಿ ಈ ಪೋಟೋ ಶೂಟ್ ಮಾಡಿಸಿದ್ದಾರೆ ಎನ್ನಲಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಜಾಹ್ನವಿಗೆ ಲಕ್ಷಾಂತರ ಅಭಿಮಾನಿಗಳಿದ್ದು, ತಮ್ಮ ನೆಚ್ಚಿನ ನಟಿಯ ಹೊಸ ಲುಕ್ ಗೆ ಫಿದಾ ಆಗಿದ್ದಾರೆ.

Comments are closed.