ನವದೆಹಲಿ : ಕೊರೊನಾ ವೈರಸ್ ಸೋಂಕಿನ ಬೆನ್ನಲ್ಲೇ ಭಾರತ ವಿಶ್ವದ ಹಲವು ರಾಷ್ಟ್ರಗಳಿಗೆ ಆಸರೆಯಾಗಲು ಹೊರಟಿದೆ. ಒಟ್ಟು 20ಕ್ಕೂ ಅಧಿಕ ದೇಶಗಳಿಗೆ ಬರೋಬ್ಬರಿ 20 ದಶಲಕ್ಷ ಡೋಸ್ ಕೋವಿಡ್ -19 ಲಸಿಕೆಯನ್ನು ಸರಬರಾಜು ಮಾಡಲು ಸಜ್ಜಾಗಿದೆ.

ಕೊರೊನಾ ವೈರಸ್ ಸೋಂಕಿನ ಲಸಿಕೆ ಪತ್ತೆಯಾದ ಬೆನ್ನಲ್ಲೇ ಭಾರತ ಕೊರೊನಾ ಲಸಿಕೆಯ ಮೂಲಕ ವಿಶ್ವಗುರುವಾಗಲು ಹೊರಟಿದೆ. ಜನವರಿ 21 ರಿಂದಲೂ ಭಾರತ ಲಸಿಕೆ ಮೈತ್ರಿ ಉಪಕ್ರಮದಡಿಯಲ್ಲಿ ಲಸಿಕೆ ಸರಬರಾಜು ಮಾಡಲು ಮುಂದಾಗಿದೆ. ಅದ್ರಲ್ಲೂ 6.47 ಮಿಲಿಯನ್ ಡೋಸ್ ಗಳನ್ನು ಹಲವು ರಾಷ್ಟ್ರಗಳಿಗೆ ಅನುದಾನದ ರೂಪವಾಗಿ ನೀಡಲಾಗುತ್ತಿದ್ರೆ, 16.5 ಮಿಲಿಯನ್ ಡೋಸ್‌ಗಳನ್ನು ವಾಣಿಜ್ಯದ ರೂಪದಲ್ಲಿ ಸರಬರಾಜು ಮಾಡಲಾಗುತ್ತಿದೆ.

ಭಾರತ ಅನುದಾನದ ರೂಪದಲ್ಲಿ ಬಾಂಗ್ಲಾದೇಶ (ಎರಡು ಮಿಲಿಯನ್ ಡೋಸ್), ಮ್ಯಾನ್ಮಾರ್ (1.7 ಮಿಲಿಯನ್ ಡೋಸ್), ನೇಪಾಳ (1ಮಿಲಿಯನ್ ಡೋಸ್), ಭೂತಾನ್ (150,000 ಡೋಸ್), ಮಾಲ್ಡೀವ್ಸ್ (100,000 ಡೋಸ್), ಮಾರಿಷಸ್ (100,000 ಡೋಸ್), ಸೀಶೆಲ್ಸ್ (50,000 ಡೋಸ್), ಶ್ರೀ ಲಂಕಾ (500,000 ಡೋಸ್), ಬಹ್ರೇನ್ (100,000 ಡೋಸ್), ಒಮಾನ್ (100,000 ಡೋಸ್), ಅಫ್ಘಾನಿಸ್ತಾನ (500,000 ಡೋಸ್), ಬಾರ್ಬಡೋಸ್ (100,000 ಡೋಸ್) ಮತ್ತು ಡೊಮಿನಿಕಾ (70,000 ಡೋಸ್) ಸರಬರಾಜು ಮಾಡಲಾಗುತ್ತಿದೆ.

ಇನ್ನು ವಾಣಿಜ್ಯದ ದೃಷ್ಟಿಯಿಂದ ಬ್ರೆಜಿಲ್ (2 ಮಿಲಿಯನ್ ಡೋಸ್), ಮೊರಾಕೊ (6 ಮಿಲಿಯನ್ ಡೋಸ್), ಬಾಂಗ್ಲಾದೇಶ (5 ಮಿಲಿಯನ್ ಡೋಸ್), ಮ್ಯಾನ್ಮಾರ್ (2 ಮಿಲಿಯನ್ ಡೋಸ್), ಈಜಿಪ್ಟ್ (50,000 ಡೋಸ್), ಅಲ್ಜೀರಿಯಾ (50,000 ಡೋಸ್), ದಕ್ಷಿಣ ಆಫ್ರಿಕಾ ( 1 ಮಿಲಿಯನ್ ಡೋಸ್), ಕುವೈತ್ (200,000 ಡೋಸ್) ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (200,000 ಡೋಸ್) ಸರಬರಾಜು ಮಾಡಲಾಗುತ್ತಿದೆ.

ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ಅಸ್ಟ್ರಾಜೆನೆಕಾ ಲಸಿಕೆಯಾದ ಕೋವಿಶಿಲ್ಡ್ ನ್ನು ಸರಬರಾಜು ಮಾಡುವ ಮೂಲಕ ಭಾರತವನ್ನು “ಲಸಿಕೆ ರಾಜತಾಂತ್ರಿಕತೆ” ಎಂದು ಕರೆಯುವಲ್ಲಿ ಚೀನಾಕ್ಕಿಂತ ಮುಂದೆ ಹೋಗಲು ಸಹಾಯ ಮಾಡಿದೆ. ಚೀನಾದ ಲಸಿಕೆಗಳನ್ನು ಈ ಪ್ರದೇಶದ ಬೆರಳೆಣಿಕೆಯಷ್ಟು ದೇಶಗಳು ಮಾತ್ರ ಅನುಮೋದಿಸಿವೆ ಮತ್ತು ಚೀನಾ ಇದುವರೆಗೆ ಪಾಕಿಸ್ತಾನ ಮತ್ತು ನೇಪಾಳಕ್ಕೆ ಮಾತ್ರ ಲಸಿಕೆಗಳನ್ನು ನೀಡಿದೆ. ಲಸಿಕೆಗಳನ್ನು ಈ ದೇಶಗಳಿಗೆ ಹಂತ ಹಂತವಾಗಿ ಸರಬರಾಜು ಮಾಡಲಾಗುತ್ತಿದೆ.

ಮುಂದಿನ ವಾರದಲ್ಲಿ ಆಫ್ರಿಕಾ, ಲ್ಯಾಟಿನ್ ಅಮೆರಿಕ, ಕ್ಯಾರಿಕೊಮ್ ಮತ್ತು ಪೆಸಿಫಿಕ್ ದ್ವೀಪ ರಾಜ್ಯಗಳ ಹೆಚ್ಚಿನ ದೇಶಗಳಿಗೆ ಲಸಿಕೆಗಳನ್ನು ಸರಬರಾಜು ಮಾಡಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ್ ಹೇಳಿದ್ದಾರೆ.