ನಿತ್ಯಭವಿಷ್ಯ: 13-02-2021

ಮೇಷರಾಶಿ
ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ಕೆಲಸ ಕಾರ್ಯಗಳಲ್ಲಿ ತೊಂದರೆ, ರಾಜಕೀಯ ವ್ಯಕ್ತಿಗಳಿಗೆ ತೊಂದರೆ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ವಾಹನ ಅಪಘಾತ ಸಂಭವ, ಸರ್ಕಾರಿ ಉದ್ಯೋಗಸ್ಥರಿಗೆ ಕಿರಿಕಿರಿ.

ವೃಷಭರಾಶಿ
ಆತ್ಮಸ್ಥೈರ್ಯದಿಂದ ಮುಂದುವರಿಯಿರಿ, ದಾಂಪತ್ಯದ ಮೇಲೆ ದುಷ್ಪರಿಣಾಮ, ಅಧಿಕ ಕೋಪ, ಅಹಂಭಾವ ಆತುರದ ಸ್ವಭಾವ, ತಂದೆ ಮಕ್ಕಳಲ್ಲಿ ಮನಸ್ತಾಪ, ಧನ ನಷ್ಟ, ಸಾಲ ಮಾಡುವ ಪರಿಸ್ಥಿತಿ, ಕಷ್ಟ ಸಂಕಷ್ಟಗಳು ಎದುರಾಗುವ ಸಂಭವ.

ಮಿಥುನರಾಶಿ
ಆರೋಗ್ಯದಲ್ಲಿ ಚೇತರಿಕೆ, ವಿದ್ಯಾಭ್ಯಾಸದಲ್ಲಿ ಪ್ರಗತಿ, ದೂರ ಪ್ರಯಾಣ, ಬಾಡಿಗೆದಾರರಿಂದ ಸಮಸ್ಯೆ, ವ್ಯಾಪಾರ, ವ್ಯವಹಾರಗಳಲ್ಲಿ ಯಶಸ್ಸು, ಯೋಗ್ಯ ವಯಸ್ಕರಿಗೆ ಕಂಕಣಬಲ ಕೂಡಿಬರಲಿದೆ, ದೂರ ಪ್ರಯಾಣ.

ಕಟಕರಾಶಿ
ಹಲವು ರೀತಿಯ ಸಮಸ್ಯೆಗಳು ಎದುರಾಗಲಿದೆ, ಮಕ್ಕಳ ವಿದ್ಯಾಭ್ಯಾಸದ ಕುರಿತು ಚಿಂತೆ ಮಾಡದಿರಿ, ಮಕ್ಕಳಿಂದ ಧನಾಗಮನ, ಉದ್ಯೋಗ ಕಳೆದುಕೊಳ್ಳುವಿರಿ, ಅಧಿಕ ಒತ್ತಡ, ಪ್ರೀತಿ ಪ್ರೇಮದಲ್ಲಿ ಯಶಸ್ಸು.

ಸಿಂಹರಾಶಿ
ಅತಿಯಾದ ಆತ್ಮವಿಶ್ವಾಸದಿಂದ ಏಕಾಂಗಿಯನ್ನಾಗಿಸಲಿದೆ, ಕೆಲವೊಂದು ಕಷ್ಟ ಸಂಕಷ್ಟದಿಂದ ಕುಗ್ಗಿ ಹೋಗುವಿರಿ, ಯಾವುದಕ್ಕೂ ಎದೆಗುಂದದಿರಿ, ರಾಜಯೋಗದ ದಿವಸ, ಉದ್ಯೋಗದ ಚಿಂತೆ, ದೂರ ಪ್ರದೇಶಕ್ಕೆ ತೆರಳುವ ಆಸೆ, ತಂದೆ ಆರೋಗ್ಯದಲ್ಲಿ ವ್ಯತ್ಯಾಸ.

ಕನ್ಯಾರಾಶಿ
ಧಾರ್ಮಿಕ ಪುಣ್ಯಕ್ಷೇತ್ರಗಳ ದರ್ಶನ, ಸಂಶಯ ಪ್ರವೃತ್ತಿಯಿಂದ ಕೆಡುವಿರಿ, ಯಾರ ಮೇಲೂ ವಿಶ್ವಾಸವಿರದು, ಉತ್ತಮ ಹೆಸರು ಪ್ರಾಪ್ತಿ, ಪ್ರೋತ್ಸಾಹ ಸಹಕಾರ, ಉತ್ತಮ ಅವಕಾಶಗಳು, ಅನಿರೀಕ್ಷಿತ ಪ್ರಯಾಣ, ಕೋರ್ಟ್ ಮೆಟ್ಟಿಲೇರುವ ಸಂದರ್ಭ.

ತುಲಾರಾಶಿ
ಪ್ರತಿಯೊಂದನ್ನು ಅಳೆದು ತೂಗುವ ಪ್ರವೃತ್ತಿಯನ್ನು ಬಿಟ್ಟುಬಿಡಿ, ಮಾನಸಿಕವಾದ ಚಿಂತೆ ನಿಮ್ಮನ್ನು ಕಾಡಲಿದೆ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ, ಆತ್ಮ ಸಂಕಟಗಳು, ಆರೋಗ್ಯದಲ್ಲಿ ವ್ಯತ್ಯಾಸ, ಅಧಿಕ ಖರ್ಚು, ಸಂಗಾತಿ ಮತ್ತು ಮಕ್ಕಳೊಂದಿಗೆ ವಾಗ್ವಾದ.

ವೃಶ್ಚಿಕರಾಶಿ
ಮಾನಸಿಕವಾದ ಕಿರಿಕಿರಿ, ಸಮಸ್ಯೆಗಳಿಂದ ಆಕಾಶವೇ ತಲೆಮೇಲೆ ಕಳಚಿಬಿದ್ದಂತೆ ಆಡದಿರಿ, ಆತ್ಮವಿಶ್ವಾಸದಿಂದ ಮುನ್ನಡೆಯಿರಿ, ಅವಮಾನ, ಅಪನಿಂದನೆ, ಕೆಲಸ ಕಾರ್ಯಗಳಲ್ಲಿ ಅಡೆ ತಡೆ, ವಿದ್ಯಾರ್ಥಿಗಳಲ್ಲಿ ಮಂದತ್ವ, ಸಾಲ ಪಡೆಯುವ ಆಲೋಚನೆ.

ಧನಸ್ಸುರಾಶಿ
ಪತ್ನಿಗೆ ಉದ್ಯೋಗ ಭಾಗ್ಯ, ತಂದೆಯಿಂದ ನಷ್ಟ, ದೂರ ಪ್ರದೇಶದಲ್ಲಿ ಉದ್ಯೋಗ, ವಿವಾಹಿತರಿಗೆ ಶುಭಫಲ, ವಿದ್ಯಾರ್ಥಿಗಳಿಗೆ ಅನುಕೂಲ, ಆತ್ಮೀಯರು ದೂರವಾಗುವರು, ಪರಿಹಾರ ದಕ್ಷಿಣಾಭಿಮುಖ ಆಂಜನೇಯನ ದರ್ಶನ ಮಾಡಿ.

ಮಕರರಾಶಿ
ವಿರೋಧಿಗಳಿಗೆ ಸೋಲು, ಆಶಾಭಂಗದ ಅನುಭವ, ಎಲ್ಲವನ್ನೂ ಸಮಭಾವದಿಂದ ಸ್ವೀಕರಿಸಿ, ಮಿತ್ರರು ದೂರಾಗುವರು, ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ, ಹವಾಮಾನದಿಂದ ಆರೋಗ್ಯದಲ್ಲಿ ಸಮಸ್ಯೆ.

ಕುಂಭರಾಶಿ
ಮಿತ್ರರಿಂದ ಸಹಕಾರ ಲಭಿಸಲಿದೆ, ದ್ರವ್ಯ ವಸ್ತುಗಳ ವ್ಯವಹಾರದಲ್ಲಿ ಲಾಭ, ದೂರ ಪ್ರಯಾಣ ಯೋಗ, ಆರ್ಥಿಕ ಲಾಭ, ಮಹಿಳೆಯರಿಗೆ ಅನುಕೂಲ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಕೆಲಸ ಕಾರ್ಯದಲ್ಲಿ ಆಸಕ್ತಿ.

ಮೀನರಾಶಿ
ಉದ್ವೇಗ ಒಳ್ಳೆಯದಲ್ಲ, ವ್ಯಾಪಾರ ವ್ಯವಹಾರಗಳಲ್ಲಿ ವಂಚನೆ, ಕಾದು ನೋಡುವ ಪ್ರವೃತ್ತಿಯಿಂದ ಅನುಕೂಲ, ಧಾರ್ಮಿಕ ಕ್ಷೇತ್ರಗಳ ದರ್ಶನ, ಹೊಸ ವ್ಯವಹಾರಕ್ಕೆ ಕೈ ಹಾಕುವ ಮುನ್ನ ಯೋಚಿಸಿ, ಒಂಟಿತನದ ಬಯಕೆ, ವಿದ್ಯಾಭ್ಯಾಸಕ್ಕೆ ತೊಡಕು, ಮಕ್ಕಳಿಂದ ಸಹಕಾರ.

Comments are closed.