ನವದೆಹಲಿ: ಆಂತರಿಕ ಭದ್ರತೆ ಹಾಗೂ ಬಳಕೆದಾರರ ಮಾನಸಿಕ ಆರೋಗ್ಯದ ಮೇಲೆಪರಿಣಾಮ ಬೀರುವ ಕಾರಣಕ್ಕೆ ಭಾರತದಿಂದ ನಿಷೇಧಿಸಲ್ಪಟ್ಟಿದ್ದ ಪಬ್ಜಿ ಆನ್ ಲೈನ್ ಗೇಮ್ ಹೊಸ ರೂಪದಲ್ಲಿ ಭಾರತಕ್ಕೆ ಕಾಲಿರಿಸಿದ್ದು, ಆಟಗಾರರನ್ನು ಉತ್ತೇಜಿಸಲು ೬ ಕೋಟಿ ರೂಪಾಯಿ ವರೆಗಿನ ಬಹುಮಾನದ ಘೊಷಣೆಯಾಗಿದೆ.

ಚೀನಾದ ಸರ್ವರ್ ನಿಯಂತ್ರಣಕ್ಕೆ ಒಳಪಟ್ಟ ಕಾರಣಕ್ಕೆ ನಿಷೇಧಕ್ಕೊಳಗಾಗಿದ್ದ ಗೇಮ್ ಇದೀಗ, ಪಬ್ ಜೀ ಇಂಡಿಯಾ ಪ್ರವೈಟ್ ಲಿಮಿಟೆಡ್ ಹೆಸರಿನಲ್ಲಿ ನೋಂದಣಿಯಾಗಿದ್ದು ಗೇಮ್ ನ ಸರ್ವರ್ ಹಾಗೂ ಬಳಕೆದಾರರ ಮಾಹಿತಿಯನ್ನು ದೇಶದಲ್ಲೇ ನಿರ್ವಹಿಸುವುದಾಗಿ ಹೇಳಿಕೊಂಡಿದೆ.

ಪಬ್ ಜೀ ಬ್ಯಾನ್ ಆಗುತ್ತಿದ್ದಂತೆ ಗೇಮ್ ಗೆ ಅಡಿಕ್ಟ್ ಆಗಿದ್ದ ಯುವಜನತೆ ಇನ್ನಿಲ್ಲದಂತೆ ಚಡಪಡಿಸಿದ್ದರು. ಈ ಗೇಮ್ ಜನಪ್ರಿಯತೆ ಗಮನಿಸಿ ಇದೀಗ ಪಬ್ಜಿ ಇಂಡಿಯಾ ರೂಪದಲ್ಲಿ ಮತ್ತೆ ತರಲಾಗುತ್ತಿದ್ದು, 6 ಕೋಟಿಯವರೆಗೆ ಪ್ರೈಜ್ ಗೆಲ್ಲುವ ಅವಕಾಶವಿದೆ ಎನ್ನಲಾಗಿದೆ. ಈಗಾಗಲೇ ಅಂಡ್ರಾಯ್ಡ್ ಹಾಗೂ ಆಯ್.ಓ.ಎಸ್ ಬಳಕೆದಾರರಿಗೆ ಪಬ್ ಜೀ ರಜಿಸ್ಟ್ರೇಶನ್ ಆರಂಭಿಸಿದೆ.

ಪಬ್ಜಿ ಡಿಸೆಂಬರ್ ನಿಂದ ಕಾರ್ಯಾರಂಭ ಮಾಡಲಿದೆ ಎನ್ನಲಾಗಿದೆ. ಆದರೆ ಪಬ್ಜಿ ಒಮ್ಮೆ ನಿಷೇಧಿತ ಆಟವಾಗಿರೋದರಿಂದ ಮತ್ತೊಮ್ಮೆ ಭಾರತದಲ್ಲಿ ಕಾರ್ಯಾರಂಭ ಮಾಡಲು ಕೇಂದ್ರ ಅನುಮತಿ ನೀಡಿದೆಯೇ? ಯಾವ ಸ್ವರೂಪ ಹಾಗೂ ನಿಯಮಗಳನ್ನು ಆಟ ಒಳಗೊಂಡಿರಲಿದೆ ಎಂಬುದರ ಬಗ್ಗೆ ಪಬ್ಜಿ ಇಂಡಿಯಾ ಪ್ರವೈಟ್ ಲಿಮಿಟೆಡ್ ಯಾವುದೇ ಮಾಹಿತಿ ನೀಡಿಲ್ಲ.

ಈ ಭಾರಿ ಪಬ್ಜಿ ಗೇಮ್ ನ್ನು ಭಾರತಕ್ಕಾಗಿಯೇ, ಹೊಸ ವಿನ್ಯಾಸದಲ್ಲಿ ರೂಪಿಸಲಾಗಿದ್ದು, ಬಳಕೆದಾರರ ಮಾಹಿತಿಯನ್ನು ಗೌಪ್ಯವಾಗಿ ದೇಶದಲ್ಲೇ ಇಡಲಾಗುವುದು. ಸರ್ವರ್ ಕೂಡ ಭಾರತದಿಂದಲೇ ಬಳಕೆಯಾಗಲಿದೆ ಎಂದು ಪಬ್ಜಿ ಹೇಳಿಕೊಂಡಿದೆ.