ತೆಲಂಗಾಣ: ಎಲ್ಲ ಅಂದುಕೊಂಡಂತೆ ಆಗಿದ್ದರೇ ಆ ಪುಟ್ಟ ಬಾಲಕ ಈಗ ಎಲ್ಲರೊಂದಿಗೆ ಕುಣಿದಾಡಿಕೊಂಡು, ಆಟ ಆಡಿಕೊಂಡಿ ರುತ್ತಿದ್ದ. ಆದರೆ ವಿಧಿ ಕೈಕಾಲುಗಳನ್ನು ಕಸಿದುಕೊಂಡಿತು.

ಆದರೆ ಕಳೆದುಕೊಂಡ ಕೈಕಾಲು ಆತನ ಆತ್ಮವಿಶ್ವಾಸ ಕುಸಿಯಲಿಲ್ಲ. ಕೈ ಬದಲು ಬಾಯಲ್ಲಿ ಕುಂಚ ಹಿಡಿದ ಬಾಲಕ ಈಗ ಎಲ್ಲರ ಗಮನ ಸೆಳೆದಿದ್ದಾನೆ.ತೆಲಂಗಾಣ ರಾಜ್ಯದ ಮುನ್ಪಲ್ಲೆ ಜಿಲ್ಲೆಯ ಕಾಮಕೋಲೆ ಗ್ರಾಮದ 12 ವರ್ಷದ ಬಾಲಕ ಮಧುಕುಮಾರ್ ಇಂತಹದೊಂದು ಆತ್ಮವಿಶ್ವಾಸದ ಮೂಲಕ ದೇಶದ ಗಮನ ಸೆಳೆದಿದ್ದಾನೆ.

2018ರ ಸಪ್ಟೆಂಬರ್ ದಲ್ಲಿ ಮನೆಯ ಮೇಲ್ಗಡೆ ಟೆರೆಸ್ ನಲ್ಲಿ ಆಟವಾಡಿಕೊಂಡಿದ್ದ ಮಧು ಕುಮಾರ್ ವಿದ್ಯುತ್ ಶಾಕ್ ಗೆ ಒಳಗಾಗಿ ತನ್ನೆರಡು ಕೈ ಹಾಗೂ ಕಾಲು ಕಳೆದುಕೊಂಡಿದ್ದಾನೆ.

ಇದರಿಂದ ಕುಗ್ಗದ ಮಧು ಕುಮಾರ್, ಬಾಯಿಯಿಂದಲೇ ಚಿತ್ರ ಬಿಡಿಸುವುದನ್ನು ಕಲಿತು ಸುಂದರ ಚಿತ್ರಗಳನ್ನು ಬರೆದು ಗಮನಸೆಳೆದಿದ್ದಾನೆ.ಮಧು ಕುಮಾರ್ ಗೆ ಆದ ಅಪಘಾತದ ವಿಷಯ ತಿಳಿದ ,ಕಲಾವಿದ ಡಾ.ಸಮುದ್ರಲಾ ಹರ್ಷ ಮಧುಕುಮಾರ್ ಗೆ ಚಿತ್ರ ಬಿಡಿಸುವ ತರಬೇತಿ ನೀಡಿದ್ದಾರೆ.

ಮಧುಕುಮಾರ್ ಸಾಧನೆ ಬಗ್ಗೆ ಮಾತನಾಡಿದ ತಾಯಿ ನನ್ನ ಮಗನಿಗೆ ವಿದ್ಯುತ್ ಆಘಾತವಾದಾಗ ನಾವೆಲ್ಲ ಧೈರ್ಯ ಕಳೆದುಕೊಂಡಿದ್ದೇವು. ಆದರೆ ಈಗ ನನ್ನ ಮಗ ಎಲ್ಲವನ್ನು ಮರೆತು ಚಿತ್ರ ಬಿಡಿಸುವುದರಲ್ಲಿ ಸಾಧನೆ ಮಾಡುತ್ತಿದ್ದಾನೆ ಎಂದಿದ್ದಾರೆ.

ಇನ್ನೂ ಸ್ವತಃ ಮಧು ಕೂಡ ತನಗಾದ ನೋವಿನ ಬಗ್ಗೆ ಮಾತನಾಡಿದ್ದು, ನಾನು ನೋವಿನಲ್ಲಿದ್ದಾಗ ನನಗೆ ಹಲವರು ಸ್ಪೂರ್ತಿಯಾದರು. ಈಗ ನಾನು ಹಲವರಿಗೆ ಸ್ಪೂರ್ತಿಯಾಗಿದ್ದೇನೆ ಎಂದಿದ್ದಾನೆ.

ಇನ್ನು ಮಧು ಬಿಡಿಸಿದ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗ್ತಿದ್ದು, ಜನರು ಮೆಚ್ಚಿಕೊಂಡು ಪ್ರೋತ್ಸಾಹಿಸುತ್ತಿದ್ದಾರೆ.