ಬೆಂಗಳೂರಲ್ಲಿ ಮತ್ತೆ 3 ಮಂದಿಗೆ ಯುಕೆ ವೈರಸ್ ಸೋಂಕು !

ಬೆಂಗಳೂರು : ರಾಜ್ಯದಲ್ಲಿ ಯುಕೆ ವೈರಸ್ ಸೋಂಕು ನಿಧಾನವಾಗಿ ಹರಡುವ ಸೂಚನೆ ಗೋಚರಿಸುತ್ತಿದೆ. ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಈಗಾಗಲೇ 7 ಮಂದಿಯಲ್ಲಿ ರೂಪಾಂತರಿ ಕೋರೊನಾ ವೈರಸ್ ಸೋಂಕು ಕಾಣಿಸಿಕೊಂಡಿದ್ದು, ಇದೀಗ ಮತ್ತೆ 3 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ದೇಶದಲ್ಲಿ ಒಟ್ಟು 4 ಮಂದಿಗೆ ಹೊಸದಾಗಿ ರೂಪಾಂತರಿ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿಯನ್ನು ನೀಡಿದೆ. ಅದ್ರಲ್ಲೂ ಸಿಲಿಕಾನ್ ಸಿಟಿಯ ಮೂರು ಮಂದಿಯೂ ಒಳಗೊಂಡಿದ್ದಾರೆ. ದೇಶದಲ್ಲಿ ಯುಕೆ ವೈರಸ್ ಸೋಂಕಿತರ ಸಂಖ್ಯೆ 29ಕ್ಕೆ ಏರಿಕೆಯಾಗಿದ್ದರೆ, ಬೆಂಗಳೂರಲ್ಲೇ ಬರೋಬ್ಬರಿ 10 ಮಂದಿಗೆ ಸೋಂಕು ತಗುಲಿದೆ.

ಇನ್ನು ಸಿಲಿಕಾನ್ ಸಿಟಿಯಲ್ಲಿ ರೂಪಾಂತರಿ ಕೊರೊನಾ ಸೋಂಕಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಈ ಮೂಲಕ ಅತೀ ಹೆಚ್ಚು ರೂಪಾಂತರಿ ಕೊರೊನಾ ಸೋಂಕಿತರನ್ನು ಹೊಂದಿದ ನಗರಗಳ ಸಾಲಿನಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ.

Comments are closed.