ಅಮೇರಿಕಾಕ್ಕೆ ಕೊರೊನಾ ಶಾಕ್ : ಒಂದೇ ದಿನ 3744 ಸೋಂಕಿತರು ಸಾವು

ವಾಷಿಂಗ್ಟನ್ : ಕೊರೊನಾ ಎರಡನೇ ಅಲೆಯ ಅಬ್ಬರ ಜೋರಾಗಿದೆ. ಅದ್ರಲ್ಲೂ ಹಿರಿಯಣ್ಣ ಅಮೇರಿಕಾದಲ್ಲಿ ಸೋಂಕಿತರ ಸಂಖ್ಯೆ ಇಳಿಕೆಯಾಗಿದ್ದರೂ ಕೂಡ, ಸಾವನ್ನಪ್ಪುವವರ ಸಂಖ್ಯೆ ಏರಿಕೆಯಾಗಿದ್ದು, ಒಂದೇ ದಿನ ಬರೋಬ್ಬರಿ 3744 ಮಂದಿ ಕೊರೊನಾ ಸೋಂಕಿತರನ್ನು ಬಲಿ ಪಡೆಯುವ ಮೂಲಕ ಶಾಕ್ ಕೊಟ್ಟಿದೆ.

ಕೊರೊನಾ ವೈರಸ್ ಸೋಂಕಿನ ಹೊಡೆತಕ್ಕೆ ತತ್ತರಿಸಿದ್ದ ಅಮೇರಿಕಾದಲ್ಲಿ ಇದುವರೆಗೆ 1,97,45,136 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಆದ್ರೀಗ 2,29,042 ಜನರಿಗೆ ಹೊಸದಾಗಿ ಸೋಂಕು ತಗುಲುವ ಮೂಲಕ ದಾಖಲೆ ಬರೆದಿದೆ. ಇನ್ನು ಕೊರೊನಾ ಸೋಂಕಿನಿಂದ ಸಾವನ್ನಪ್ಪುವವರ ಸಂಖ್ಯೆಯಲ್ಲಿಯೂ ಏರಿಕೆಯಾಗುತ್ತಿದೆ. ಒಂದೇ ದಿನ 3744 ಮಂದಿಯನ್ನು ಕೊರೊನಾ ಸೋಂಕು ಬಲಿ ಪಡೆಯುವ ಮೂಲಕ ಅಮೇರಿಕಾದಲ್ಲಿ ಸೋಂಕಿನಿಂದ ಸಾವನ್ನಪ್ಪಿರುವವರ ಸಂಖ್ಯೆ 3,42,414ಕ್ಕೆ ಏರಿಕೆಯಾಗಿದೆ.

ಅಮೇರಿಕಾದಲ್ಲಿ ಇದುವರೆಗೆ 24 ಗಂಟೆಗಳ ಅವಧಿಯಲ್ಲಿ 3725 ಮಂದಿ ಸಾವನ್ನಪ್ಪಿರುವುದು ದಾಖಲೆಯಾಗಿತ್ತು. ಆದ್ರೀಗ 3744 ಮಂದಿ ಸಾವನ್ನಪ್ಪುವ ಮೂಲಕ ಹೊಸ ದಾಖಲೆಯನ್ನು ಬರೆದು, ಅಮೇರಿಕಾಕ್ಕೆ ತಲೆನೋವು ತರಿಸಿದೆ. ಅಮೇರಿಕಾದಲ್ಲಿ ಕೊರೊನಾ ಸೋಂಕು ಏರಿಕೆಯಾಗುತ್ತಿರುವ ಕುರಿತು ಜಾನ್ಸ್ ಹಾಫ್ಕೀನ್ಸ್ ವಿಶ್ವವಿದ್ಯಾಲಯ ಮಾಹಿತಿ ನೀಡಿದೆ. ನೀಡಲಾಗಿದೆ. ದಾಖಲೆಯ ಪ್ರಮಾಣದಲ್ಲಿ ಕೊರೋನಾ ಸೋಂಕಿತರು ಸಾವನ್ನಪ್ಪುತ್ತಿರುವುದು ಅಮೆರಿಕ ನಿವಾಸಿಗಳಲ್ಲಿ ತೀವ್ರ ಆತಂಕವನ್ನುಂಟು ಮಾಡಿದೆ.


ಕೊರೊನಾ ಸೋಂಕು ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳಲ್ಲಿ ಲಸಿಕೆ ನೀಡುವುದನ್ನು ಮುಂದುವರೆಸಲಾಗಿದೆ. 1, 24, 09,050 ಡೋಸ್ ಲಸಿಕೆಯನ್ನು ನೀಡಲಾಗಿದೆ. ಆರಂಭದ ವೇಳೆಗೆ 27,94,588 ಜನ ಎರಡು ಡೋಸ್ ಲಸಿಕೆ ಸ್ವೀಕರಿಸಿದ್ದಾರೆ ಎಂದು ತಿಳಿದುಬಂದಿದೆ.

Comments are closed.