ಸೋಮವಾರ, ಏಪ್ರಿಲ್ 28, 2025
HomeBreakingಸರ್ಕಾರದ ವಿರುದ್ಧ ಸಿಡಿದೆದ್ದ ಮೋದಿ ಸಹೋದರ....! ಏರ್ಪೋರ್ಟ್ ನಲ್ಲಿ ಏಕಾಂಗಿ ಧರಣಿ....!!

ಸರ್ಕಾರದ ವಿರುದ್ಧ ಸಿಡಿದೆದ್ದ ಮೋದಿ ಸಹೋದರ….! ಏರ್ಪೋರ್ಟ್ ನಲ್ಲಿ ಏಕಾಂಗಿ ಧರಣಿ….!!

- Advertisement -

ಎಲ್ಲರೂ ಮೋದಿ ವಿರುದ್ಧ ತಿರುಗಿ ಬಿದ್ದಿರುವಾಗಲೇ ಪ್ರಧಾನಿ ಸಹೋದರ ಕೂಡ ಸರ್ಕಾರದ ವಿರುದ್ಧ ಮುನಿಸಿಕೊಂಡು ಧರಣಿ ನಡೆಸಿದ್ದಾರೆ. ಆದರೆ ಮೋದಿ ಸಹೋದರ ಧರಣಿ ನಡೆಸಿರೋದು ಉತ್ತರ ಪ್ರದೇಶದ ಯೋಗಿ ಸರ್ಕಾರದ ವಿರುದ್ಧ.

ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿ ಯೋಗ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಲಕ್ನೋ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.

ಈ ವೇಳೆ ಪ್ರಹ್ಲಾದ್ ಮೋದಿಯವರನ್ನು ಸ್ವಾಗತಿಸಲು ಯೋಗಸೊಸೈಟಿಯ ಹಲವರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಈ ವೇಳೆ ವಿಮಾನ ನಿಲ್ದಾಣದ ನಿಯಮ ಉಲ್ಲಂಘನೆ ಆರೋಪದ ಅಡಿಯಲ್ಲಿ ಪೊಲೀಸರು ಪ್ರಹ್ಲಾದ್ ಮೋದಿಯವರ ಸ್ವಾಗತಕ್ಕೆ ಆಗಮಿಸಿದವರನ್ನು ವಶಕ್ಕೆ ಪಡೆದಿದ್ದಾರೆ.

ವಿಮಾನ ನಿಲ್ದಾಣದ ಹೈಸೆಕ್ಯೂರಿಟಿ ಝೋನ್ ನಲ್ಲಿ ಸೆಕ್ಷನ್ 144 ಉಲ್ಲಂಘಿಸಿದ್ದಾರೆ ಎಂಬ ಆರೋಪದ ಅಡಿಯಲ್ಲಿ ಮೋದಿ ಬೆಂಬಲಿಗರನ್ನು ಬಂಧಿಸಲಾಗಿತ್ತು.ತಮ್ಮ‌ಬೆಂಬಲಿಗರನ್ನು ಬಂಧಿಸಿದ್ದನ್ನು ಖಂಡಿಸಿ ಮೋದಿ ಸಹೋದರ ಏರ್ಪೊರ್ಟ್ ನಲ್ಲೇ ಧರಣಿ ಆರಂಭಿಸಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಪ್ರಹ್ಲಾದ್ ಜೋಷಿ ಪ್ರಧಾನಿ‌ಕಾರ್ಯಾಲಯದ ಸೂಚನೆ ಮೇರೆಗೆ ನನ್ನ ಬೆಂಬಲಿಗರನ್ನು‌ ಬಂಧಿಸಲಾಗಿದೆ ಎಂದಿದ್ದಾರೆ. ಆದರೆ ಯಾವುದೇ ದಾಖಲೆ,ಅಧಿಕೃತ ಆದೇಶ ತೋರಿಸಿಲ್ಲ.ಉತ್ತರ ಪ್ರದೇಶ ಪೊಲೀಸರು ಯಾವಾಗ ಯಾರನ್ನು ಬೇಕಾದರೂ ಬಂಧಿಸಬಹುದೇ ಎಂದು ಪ್ರಶ್ನೆ ಮಾಡಿದರು. ಪೊಲೀಸರ ಮನವೊಲಿಕೆಗೂ ಬಗ್ಗದ ಪ್ರಹ್ಲಾದ್ ಮೋದಿ ತಮ್ಮ ಧರಣಿ ಮುಂದುವರೆಸಿದ್ದರು.

ಬಳಿಕ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರಹ್ಲಾದ್ ಮೋದಿ‌ ಮನವೊಲಿಸಿ ಅವರ ಬೆಂಬಲಿಗರನ್ನು ಬಿಡುಗಡೆಗೊಳಿಸಿ ಪ್ರಕರಣ ಸುಖಾಂತ್ಯಗೊಳಿಸಿದರು.

RELATED ARTICLES

Most Popular