ಭಾನುವಾರ, ಏಪ್ರಿಲ್ 27, 2025
HomeBreakingಚಿನ್ನವೇ ಉಡುಗೆ, ಆಭರಣವೇ ತೊಡುಗೆ….! ಮತ್ತೇರಿಸುವಂತಿದೆ ಮತ್ತೊಂದು ಪೋಟೋಶೂಟ್…!!

ಚಿನ್ನವೇ ಉಡುಗೆ, ಆಭರಣವೇ ತೊಡುಗೆ….! ಮತ್ತೇರಿಸುವಂತಿದೆ ಮತ್ತೊಂದು ಪೋಟೋಶೂಟ್…!!

- Advertisement -

ಪೋಟೋಶೂಟ್ ಈಗ ಮದುವೆ-ಹಬ್ಬದ ಕಾಮನ್ ಸಂಪ್ರದಾಯವಾಗಿ ಬಿಟ್ಟಿದೆ. ಆದರೆ ಇಲ್ಲೊಂದು ಪೋಟೋಶೂಟ್ ಮಾತ್ರ ಬಟ್ಟೆಯ ಕಾರಣಕ್ಕಲ್ಲ ಆಭರಣದ ಕಾರಣಕ್ಕೆ ಸುದ್ದಿಯಾಗಿದ್ದು, ಪೋಟೋಗಳು ಒಂದಕ್ಕಿಂತ ಒಂದು ಮತ್ತೇರಿಸುವಂತಿದೆ. ಪೋಟೋದ ಪೋಸ್ ನೋಡಬೇಕೋ, ಹುಡುಗಿಯರ ಮಾದಕ ಸೌಂದರ್ಯ ನೋಡಬೇಕೋ ಎಂಬ ಕನ್ ಪ್ಯೂಸ್ ಸೃಷ್ಟಿಸುತ್ತಿದೆ ಈ ಪೋಟೋಶೂಟ್.

ಸಾಮಾನ್ಯವಾಗಿ ಪೋಟೋಶೂಟ್ ನಲ್ಲಿ ಗಮನ ಸೆಳೆಯೋದು ಧರಿಸಿದ ಡ್ರೆಸ್ ಹಾಗೂ ಲೊಕೇಶನ್. ಆದರೆ ಈ ಪೋಟೋಶೂಟ್ ನಲ್ಲಿ ನಿಮಗೆ ಬಟ್ಟೆ ಕಾಣಿಸೋದೇ ಇಲ್ಲ. ಬದಲಾಗಿ ಮೈಮುಚ್ಚೋಕೋ ಕಾಣೋದು ಚಿನ್ನವೇ.

ಮಾನಿನಿಯರೆಲ್ಲ ಮೈತುಂಬ ಚಿನ್ನ ಧರಿಸಿ ಪೋಟೋಗೆ ಪೋಸ್ ನೀಡಿರೋ ಈ ಪೋಟೋಶೂಟ್ ಕಾನ್ಸೆಪ್ಟ್ ಹಿಂದೆಂದಿಗಿಂತ ಭಿನ್ನವಾಗಿದೆ.

ಟೂ ಪೀಸ್, ತ್ರೀಪೀಸ್ ಎಲ್ಲದರ ಬದಲು ಇಲ್ಲಿ ಚಿನ್ನದ ಆಭರಣವನ್ನೇ ಬಳಸಲಾಗಿದೆ. ಜುವೆಲ್ಲರಿ ಶಾಪ್ ನ ಜಾಹೀರಾತಿನಂತೆ ಕಾಣೋ ಈ ಪೋಟೋಶೂಟ್ ಈಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.

ಝಾವಾ ಸ್ಟುಡಿಯೋ ನಡೆಸಿರೋ ಪೋಟೋಶೂಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಆಭರಣದಲ್ಲಿ ಕಷ್ಟಪಟ್ಟು ಮೈಮುಚ್ಚಿಕೊಂಡಿರೋ ಹುಡುಗಿಯರ ನೋಡಿದ ಯುವಕರ ಎದೆಬಡಿತ ಏರುಪೇರಾಗುತ್ತಿದೆ.

ವಿದೇಶದಲ್ಲಿ ನಡೆದಿರೋ ಈ ಪೋಟೋಶೂಟ್  ಭಾರಿ ಆಭರಣಗಳನ್ನ ಪ್ರದರ್ಶಿಸುತ್ತಿದ್ದು, ಒಂದಕ್ಕಿಂದ ಒಂದು ಮನಸೆಳೆಯೋ ವಿನ್ಯಾಸದ ಚಿನ್ನದ ಸರ,ನೆಕ್ಲೆಸ್, ಕಾಲಂದುಗೆ,ಕೊರಳ ಹಾರ ಎಲ್ಲವೂ ಸೆಳೆಯುವಂತಿದೆ.

ಆದರೆ ಮೈಚಳಿ ಬಿಟ್ಟು ಪೋಸ್ ಕೊಟ್ಟಿರೋ ಹೆಂಗಳೆಯರನ್ನು ನೋಡಿದ ಮೇಲೆ ನಿಮಗೆ ಆಭರಣ ಕೊಂಡುಕೊಳ್ಳೋ ಮನಸ್ಸಾಗುತ್ತೋ ಅಥವಾ ಮೈಮರೆತು ಬಿಡ್ತಿರೋ ಅನ್ನೋ ಸಂಶಯವಂತೂ ಕಾಡೋದು ಸುಳ್ಳಲ್ಲ.

RELATED ARTICLES

Most Popular