(Indigestion Problem Solution)ಆಹಾರ ಸೇವನೆಯ ಸಮಯ ಬದಲಾವಣೆಯಿಂದಾಗಿ ಮತ್ತು ಅಧಿಕ ಆಹಾರ ಸೇವನೆ ಮಾಡುವುದರಿಂದ ಅಜೀರ್ಣ ಸಮಸ್ಯೆಗಳು ಉಂಟಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಅಜೀರ್ಣ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಈ ಕೆಳಗೆ ತಿಳಿಸಿದ ಮಾಹಿತಿಯನ್ನು ಅನುಸರಿಸಿ.
Indigestion Problem Solutionಬೇಕಾಗುವ ಸಾಮಾಗ್ರಿಗಳು:
ಲವಂಗ ಪುಡಿ
ನೀರು
ಮಾಡುವ ವಿಧಾನ:
ಮೊದಲಿಗೆ ಪಾತ್ರೆಯಲ್ಲಿ ಒಂದು ಲೋಟ ನೀರು ಹಾಕಿ ಗುಳ್ಳೆ ಬರುವವರೆಗೆ ಕಾಯಿಸಿಕೊಳ್ಳಬೇಕು. ನಂತರ ಅದಕ್ಕೆ ಮೂರು ಚಿಟಿಕೆಯಷ್ಟು ಲವಂಗ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಿಕೊಂಡು ಕುಡಿಯುವುದರಿಂದ ಅಜೀರ್ಣದ ಸಮಸ್ಯೆ ಕಡಿಮೆ ಆಗುತ್ತದೆ.
ಬೇಕಾಗುವ ಸಾಮಾಗ್ರಿಗಳು:
ಓಮದ ಕಾಳು
ನಿಂಬೆ ಹಣ್ಣು
ಉಪ್ಪು
ನೀರು
ಮಾಡುವ ವಿಧಾನ:
ಪಾತ್ರೆಯಲ್ಲಿ ಒಂದು ಲೋಟ ನೀರು ಹಾಕಿ ಕಾಯಿಸಿಕೊಳ್ಳಬೇಕು ನಂತರ ಅದಕ್ಕೆ ಓಮದ ಕಾಳು ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು. ನಂತರ ಓಮದಕಾಳು ಸಮೇತ ನೀರನ್ನು ಲೋಟಕ್ಕೆ ಹಾಕಿಕೊಳ್ಳಬೇಕು ಅನಂತರ ಅದಕ್ಕೆ ಉಪ್ಪು, ನಿಂಬೆಹಣ್ಣಿನ ರಸ ಹಾಕಿ ಕರಡಿಕೊಂಡು ಕುಡಿದರೆ ಅಜೀರ್ಣದ ಸಮಸ್ಯೆ ಕಡಿಮೆ ಆಗುತ್ತದೆ.
ಲವಂಗ ಪುಡಿ:
ಲವಂಗ ಆಧಿಕ ಪ್ರಮಾಣದಲ್ಲಿ ವಿಟಮಿನ್ ಸಿ ಅಂಶಗಳನ್ನು ಹೊಂದಿರುವುದರಿಂದ ದೇಹದಲ್ಲಿ ಬಿಳಿ ರಕ್ತ ಕಣ ಹೆಚ್ಚಾಗುವಂತೆ ನೋಡಿಕೊಳ್ಳುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಹಲವಾರು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಲವಂಗವನ್ನು ಬಾಯಲ್ಲಿ ಹಾಕಿ ಜಗಿದು ರಸವನ್ನು ನುಂಗುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಣೆ ಮಾಡುವುದಲ್ಲದೇ, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.ಲವಂಗದಲ್ಲಿ ಹೇರಳವಾಗಿ ನಾರಿನಾಂಶ ಇರುವುದರಿಂದ ಇದನ್ನು ಸೇವನೆ ಮಾಡಿದರೆ ಜೀರ್ಣಾಂಗ ವ್ಯವಸ್ಥೆಯ ಆರೋಗ್ಯ ಸದೃಢವಾಗಿ ಇರುವಂತೆ ಕಾಪಾಡುತ್ತದೆ. ಮತ್ತು ಲಿವರ್ ಗೆ ಸೋಂಕು ತಗುಲದಂತೆ ನೋಡಿಕೊಳ್ಳುವ ಕಾರ್ಯವನ್ನು ಮಾಡುತ್ತದೆ.
ಇದನ್ನೂ ಓದಿ:Skin Problem Tips:ಚರ್ಮ ಸಂಬಂಧಿತ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಈ ಟಿಪ್ಸ್ ಬಳಸಿ
ಇದನ್ನೂ ಓದಿ:Face Toner:ಮುಖದ ಕಾಂತಿ ಹೆಚ್ಚಿಸುವ ಟೋನರ್ ಮನೆಯಲ್ಲಿಯೇ ತಯಾರಿಸಿಕೊಳ್ಳಿ
ಇದನ್ನೂ ಓದಿ:Natural Dry Cough Medicine:ಒಣಕೆಮ್ಮು ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ? ಇಲ್ಲಿದೆ ಪರಿಹಾರ
ಓಮದ ಕಾಳು
ಓಮದ ಕಾಳು ಆಯುರ್ವೇದದಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಪ್ರಾಚೀನ ಕಾಲದಿಂದಲೂ ಕೂಡ ಓಮದ ಕಾಳನ್ನು ಆಯುರ್ವೇದದಲ್ಲಿ ಬಳಕೆ ಮಾಡುತ್ತಾ ಬಂದಿದ್ದಾರೆ. ಇದರಲದಲಿ ಇರುವ ಥೈಮೋಲ್ ಎನ್ನುವ ಅಂಶ ಗ್ರಾಸ್ಟ್ರಿಕ್ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಅಷ್ಟೇ ಅಲ್ಲದೆ ಓಮದ ಕಾಳಿನ ಪುಡಿಯನ್ನು ನೀರಿನಲ್ಲಿ ಬೇರೆಸಿ ಕುಡಿಯುವುದರಿಂದ ಜೀರ್ಣಕ್ರಿಯೆ ಉತ್ತಮ ಆಗುವುದರ ಜೊತೆಗೆ ತೂಕ ಇಳಿಕೆಗೆ ಸಹಕಾರಿಯಾಗಿದೆ.
ಇದನ್ನೂ ಓದಿ:Almond Cream: ಚಳಿಗಾಲಕ್ಕೆ ತ್ವಚೆ ಒಡೆಯದಿರಲು ಬಾದಾಮಿ ಕ್ರೀಮ್ ತಯಾರಿಸಿಕೊಳ್ಳಿ
Indigestion Problem Solution Are you suffering from indigestion? Here’s an easy solution