ಸೋಮವಾರ, ಏಪ್ರಿಲ್ 28, 2025
HomeBreakinginflammation: ದೇಹದಲ್ಲಿನ ಉರಿಯೂತ ಸಮಸ್ಯೆಗೆ ಹೇಳಿ ಗುಡ್‌ ಬೈ

inflammation: ದೇಹದಲ್ಲಿನ ಉರಿಯೂತ ಸಮಸ್ಯೆಗೆ ಹೇಳಿ ಗುಡ್‌ ಬೈ

- Advertisement -

(inflammation) ದೇಹ ಆರೋಗ್ಯವಾಗಿರಲು ಜೀವನಶೈಲಿ ಮತ್ತು ಆಹಾರ ಪದ್ದತಿ ಉತ್ತಮವಾಗಿದ್ದರೆ ಮಾತ್ರ ಸಾಧ್ಯ. ಒಂದು ವೇಳೆ ಇವೆರಡು ಸರಿಯಾಗಿಲ್ಲದಿದ್ದರೆ ನಮ್ಮನ್ನು ರೋಗಿಗಳನ್ನಾಗಿ ಮಾಡಿಬಿಡುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ದೌರ್ಬಲ್ಯ ಎನಿಸಿಕೊಂಡಾಗ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡುತ್ತದೆ. ಇಂತಹ ಆರೋಗ್ಯ ಸಮಸ್ಯೆಗಳಲ್ಲಿ ಉರಿಯೂತ ಕೂಡ ಒಂದು. ನಿಷ್ಕ್ರಿಯ ವ್ಯವಸ್ಥೆಗೆ ದೇಹ ಪ್ರತಿಕ್ರಿಯಿಸಿದಾಗ ದೇಹದಲ್ಲಿ ಉರಿಯೂತ ಕಾಣಿಸಿಕೊಳ್ಳುತ್ತದೆ. ಇದನ್ನು ಕಡಿಮೆ ಮಾಡಿಕೊಳ್ಳಲು ನಮ್ಮ ಅಹಾರ ವ್ಯವಸ್ಥೆಯಲ್ಲಿ ಕೆಲವು ಪದಾರ್ಥಗಳನ್ನು ಸೇರಿಸಿಕೊಂಡರೆ ನೈಸಿರ್ಗವಾಗಿ ಉರಿಯೂತ ಕಡಿಮೆಯಾಗುತ್ತದೆ.

ಜರ್ನಲ್ ಆಫ್ ಅಪ್ಲೈಡ್ ಟಾಕ್ಸಿಕಾಲಜಿಯ ಪ್ರಕಾರ, ನಮ್ಮ ದೇಹವು ಎರಡು ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ. ದೇಹದಲ್ಲಿ ಯಾವುದೇ ರೀತಿಯ ಸೋಂಕು ಅಥವಾ ಗಾಯಗಳಿದ್ದಾಗ ಈ ರೀತಿಯ ಊತ (inflammation) ಉಂಟಾಗುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಗಳು ದುರ್ಬಲವಾದಾಗ ರೋಗಗಳು ಸಂಭವಿಸುತ್ತವೆ. ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದಾಗ, ರಕ್ತದ ಕ್ಯಾನ್ಸರ್‌, ಮೂತ್ರಪಿಂಡದ ಕಾಯಿಲೆಗಳು ಕಾಡುವುದರಿಂದ ದೀರ್ಘಕಾಲದ ಉರಿಯೂತ ಉಂಟು ಮಾಡುತ್ತದೆ. ಇದು ಆರೋಗ್ಯಕ್ಕೆ ಅತ್ಯಂತ ಹಾನಿಕರವಾಗಿದೆ.

ನೈಸರ್ಗಿಕವಾಗಿ ಉರಿಯೂತ ಕಡಿಮೆ ಮಾಡಲು ಕೆಲವು ಪದಾರ್ಥಗಳು
ಅರಿಶಿನ:

ಅರಿಶಿನವು ವಿಟಮಿನ್ ಸಿ, ವಿಟಮಿನ್ ಬಿ 6, ಸೋಡಿಯಂ, ಪೊಟ್ಯಾಸಿಯಮ್, ಆಂಟಿಆಕ್ಸಿಡೆಂಟ್‌ ಹೊಂದಿದೆ.ಅರಿಶಿನ ಶಕ್ತಿಯುತ ಕರ್ಕ್ಯುಮಿನ್ ಸಂಯುಕ್ತ ಹೊಂದಿದೆ. ಇದು ತೀವ್ರ ಮತ್ತು ದೀರ್ಘಕಾಲದ ಉರಿಯೂತ ಕಡಿಮೆ ಮಾಡಲು ಚಿಕಿತ್ಸಕವಾಗಿ ಕೆಲಸ ಮಾಡುತ್ತದೆ. ದಾಲ್, ಸೂಪ್ ಮಾಡುವಾಗ ಅರಿಶಿನವನ್ನು ಸರಿಯಾದ ಪ್ರಮಾಣದಲ್ಲಿ ಬಳಸಬೇಕು. ಉರಿಯೂತದಿಂದ ಗಾಯವಾಗಿದ್ದರೆ, ಆ ಜಾಗದಲ್ಲಿ ಅರಿಶಿನ ಹಚ್ಚಿ. ಆಂಟಿ ಸೆಪ್ಟಿಕ್ ಗುಣವಿರುವ ಅರಿಶಿನವು ಗಾಯ ಬೇಗ ವಾಸಿವಾಗಲು ಸಹಕಾರಿಯಾಗಿದೆ. ಅರಿಶಿನ ಹಾಲನ್ನು ರಾತ್ರಿ ಕುಡಿಯುವುದು ದೇಹದ ಆರೋಗ್ಯಕ್ಕೆ ಹಾಗೂ ಉರಿಯೂತದ ಸಮಸ್ಯೆಗೆ ಉತ್ತಮ.

ದಾಲ್ಚಿನ್ನಿ:
ದಾಲ್ಚಿನ್ನಿ ಸಂಧಿವಾತ ಸೇರಿ ಹಲವು ದೀರ್ಘಕಾಲದ ಉರಿಯೂತ ಸಮಸ್ಯೆಯನ್ನು ನಿವಾರಿಸುತ್ತದೆ. ಇದು ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ರಂಜಕ, ಪೊಟ್ಯಾಸಿಯಮ್, ವಿಟಮಿನ್ ಎ ಮುಂತಾದ ಪ್ರಮುಖ ಪೋಷಕಾಂಶಗಳನ್ನು ಹೊಂದಿದೆ. ಇದು ರಕ್ತದಲ್ಲಿನ ಉರಿಯೂತ ಉತ್ತೇಜಿಸುವ ಸಿ-ಪ್ರತಿಕ್ರಿಯಾತ್ಮಕ ಪ್ರೋಟೀನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಉರಿಯೂತ ಸಮಸ್ಯೆಯನ್ನು ಕಡಿಮೆ ಮಾಡಲು ಪ್ರತಿದಿನ ದಾಲ್ಚಿನ್ನಿ ಚಹಾ ಕುಡಿಯಿರಿ ಹಾಗೆಯೇ ಅಡುಗೆಯಲ್ಲಿ ಕೂಡ ದಾಲ್ಚಿನ್ನಿಯನ್ನು ಬಳಸಬಹುದು.

ಬಾದಾಮಿ:
ಬಾದಾಮಿಯು ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣನ್ನು ಹೊಂದಿದೆ. ಬಾದಾಮಿ ವಿಟಮಿನ್ ಇ ಹಾಗೂ ಮೊನೊಸಾಚುರೇಟೆಡ್ ಕೊಬ್ಬನ್ನು ಹೊಂದಿದೆ. ಸಿ-ಪ್ರತಿಕ್ರಿಯಾತ್ಮಕ ಪ್ರೋಟೀನ್‌ ಉರಿಯೂತ ಗುರುತಿಸುವ ಸಂಯುಕ್ತವನ್ನು ಕಡಿಮೆ ಮಾಡುತ್ತದೆ. ಪ್ರತಿದಿನ ನೀರಿನಲ್ಲಿ ನೆನೆಸಿದ ಬಾದಾಮಿಯನ್ನು ಸೇವಿಸಿ.

ಬೆಳ್ಳುಳ್ಳಿ:
ಬೆಳ್ಳುಳ್ಳಿಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ6, ಪೊಟ್ಯಾಶಿಯಂ, ಸೋಡಿಯಂ, ಮ್ಯಾಂಗನೀಸ್ ಸಮೃದ್ಧವಾಗಿದೆ. ಪಶು ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಕಾರ ಡಯಾಲಿಲ್ ಡೈಸಲ್ಫೈಡ್ ಬೆಳ್ಳುಳ್ಳಿಯಲ್ಲಿದೆ. ಇದು ಉರಿಯೂತಕ್ಕೆ ಪ್ರಯೋಜನಕಾರಿ. ಪ್ರತಿದಿನ ಆಹಾರದಲ್ಲಿ ಬೆಳ್ಳುಳ್ಳಿಯನ್ನು ಬಳಸಿ.

ಇದನ್ನೂ ಓದಿ : Zika Virus : ರಾಜ್ಯದಲ್ಲಿ ಮೊದಲ ಝೀಕಾ ವೈರಸ್‌ ಸೋಂಕು ದೃಢ

ಗೀನ್‌ ಟೀ:
ಗ್ರೀನ್‌ ಟೀಯಲ್ಲಿ 13 ರೀತಿಯ ದೇಹಕ್ಕೆ ಪೂರಕವಾಗುವಂತಹ ಅಗತ್ಯ ಜೀವಸತ್ವಗಳಿವೆ. ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಡಿ, ವಿಟಮಿನ್ ಇ, ವಿಟಮಿನ್ ಕೆ ಹೀಗೆ ಅನೇಕ ರೀತಿಯ ಜೀವಸತ್ವಗಳನ್ನು ಇದು ಹೊಂದಿದೆ. ಗ್ರೀನ್ ಟೀ ಕೂಡ ಉತ್ಕರ್ಷಣ ನಿರೋಧಕ ಗುಣವನ್ನು ಕೂಡಿದೆ. ಗ್ರೀನ್‌ ಟೀ ಸೇವನೆ ಬೊಜ್ಜು ಮತ್ತು ಕ್ಯಾನ್ಸರ್ ಕಾಯಿಲೆ ರೋಗಿಗಳಿಗೆ ಪ್ರಯೋಜನವನ್ನು ನೀಡುತ್ತದೆ. ಪ್ರತಿದಿನ ಹಾಲಿನ ಟೀ ಬದಲು ಗ್ರೀನ್ ಟೀ ಸೇವಿಸಿ. ಇದು ಆರೋಗ್ಯಕ್ಕೆ ತುಂಬಾ ಒ‍ಳ್ಳೆಯದು.

(inflammation) A healthy body is only possible if the lifestyle and diet are good. If these two are not right then it makes us sick. Many types of health problems bother us when the immune system becomes weak in the body. Inflammation is one such health problem.

RELATED ARTICLES

Most Popular