Pappaya Halva: ಸಿಹಿ ಸಿಹಿಯಾದ ಪಪ್ಪಾಯಿ ಹಲ್ವಾ: ನೀವೊಮ್ಮೆ ಟ್ರೈ ಮಾಡಲೇ ಬೇಕು

(Pappaya Halva) ಪಪ್ಪಾಯಿ ಹಣ್ಣು ಯಾವ ಸೀಸನ್‌ನಲ್ಲಿ ಬೇಕಿದ್ದರು ಸಿಗುತ್ತದೆ. ಹೆಚ್ಚಿನವರು ಇದನ್ನು ಫ್ರೂಟ್ ಸಲಾಡ್ ಅಥವಾ ಜ್ಯೂಸ್ ಆಗಿ ಸೇವಿಸಲು ಇಷ್ಟಪಡುತ್ತಾರೆ. ಪಪ್ಪಾಯಿ ಹಣ್ಣಿನಲ್ಲಿ ಆರೋಗ್ಯಕರ ಅಂಶಗಳು ಕೂಡ ಇವೆ. ದೇಹದಲ್ಲಿನ ಹಲವು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಆದರೆ ಹೆಚ್ಚು ಮಾಗಿದ ಹಣ್ಣನ್ನು ಹಲವರು ತಿನ್ನಲು ಬಯಸುವುದಿಲ್ಲ. ಹೀಗಿರುವಾಗ ನೀವೊಮ್ಮೆ ಪಪ್ಪಾಯಿಯ ಹಲ್ವಾ ಟ್ರೈ ಮಾಡಿ ನೋಡಿ. ಸಿಹಿಯಾದ ಪಪ್ಪಾಯಿ ಹಲ್ವಾ ಮಾಡುವ ವಿಧಾನವನ್ನು ನಾನು ನಿಮಗೆ ತಿಳಿಸಿಕೊಡುತ್ತೇನೆ.

ಬೇಕಾಗುವ ಪದಾರ್ಥಗಳು (Pappaya Halva):
2 ಕಪ್ ಮಾಗಿದ ಪಪ್ಪಾಯಿ ಹಣ್ಣಿನ ಪ್ಯೂರಿ
ಅರ್ಧ ಕಪ್ ಸಕ್ಕರೆ
2 ಟೀಸ್ಪೂನ್ ತುಪ್ಪ
ಅರ್ಧ ಟೀಸ್ಪೂನ್ ಏಲಕ್ಕಿ ಪುಡಿ
ಗೋಡಂಬಿ ಹಾಗೂ ಒಣ ದ್ರಾಕ್ಷಿ

ಮಾಡುವ ವಿಧಾನ(Pappaya Halva):
ಮೊದಲಿಗೆ ಹಣ್ಣಿನ ಸಿಪ್ಪೆ ಬಿಡಿಸಿ, ಕತ್ತರಿಸಿ, ಒಳಭಾಗದ ಬೀಜಗಳನ್ನು ಬೇರ್ಪಡಿಸಿ, ಹೋಳುಗಳನ್ನು ಮಿಕ್ಸರ್ ಜಾರ್‌ಗೆ ಹಾಕಿ ಚೆನ್ನಾಗಿ ರುಬ್ಬಿಕೊಂಡು ಪಪ್ಪಾಯಿ ಪ್ಯೂರಿ ತಯಾರಿಸಿಟ್ಟುಕೊಳ್ಳಿ. ನಂತರ ಒಂದು ಕಡಾಯಿ ತೆಗೆದುಕೊಂಡು, ಅದರಲ್ಲಿ 1 ಟೀಸ್ಪೂನ್ ತುಪ್ಪ ಬಿಸಿ ಮಾಡಿ, ಗೋಡಂಬಿ ಹಾಗೂ ಒಣ ದ್ರಾಕ್ಷಿಯನ್ನು ಒಂದೊಂದಾಗಿ ಹುರಿಯಿರಿ. ಒಣ ಹಣ್ಣುಗಳು ಗೋಲ್ಡನ್ ಬ್ರೌನ್ ಬಣ್ಣಕ್ಕೆ ಬರುವವರೆಗೂ ಹುರಿದು ನಂತರ ತೆಗೆದು ಪಕ್ಕಕ್ಕಿಡಿ. ಈಗ ಕಡಾಯಿಗೆ ಪಪ್ಪಾಯಿ ಪ್ಯೂರಿ ಹಾಗೂ ಸಕ್ಕರೆ ಹಾಕಿ, ಸಕ್ಕರೆ ಕರಗುವವರೆಗೆ ಪ್ಯೂರಿಯನ್ನು ಚೆನ್ನಾಗಿ ಮಿಶ್ರಣ ಮಾಡುತ್ತಾ ಬೇಯಿಸಿಕೊಳ್ಳಿ. 2-3 ನಿಮಿಷಗಳ ಬಳಿಕ ಮಿಶ್ರಣಕ್ಕೆ ಇನ್ನೂ ಸ್ವಲ್ಪ ತುಪ್ಪ ಸೇರಿಸಿ, ಉರಿಯನ್ನು ಮಧ್ಯಮದಲ್ಲಿಟ್ಟುಕೊಂಡು ಆಗಾಗ ಮಗುಚುತ್ತಿರಿ. 8-10 ನಿಮಿಷಗಳಲ್ಲಿ ಮಿಶ್ರಣ ದಪ್ಪವಾಗುತ್ತಾ ಬರುತ್ತದೆ. ಬಳಿಕ ಸ್ಟೌ ಅನ್ನು ಆಫ್ ಮಾಡಿ. ಈಗ ಹುರಿದಿಟ್ಟುಕೊಂಡ ಒಣ ಹಣ್ಣು ಹಾಗೂ ಏಲಕ್ಕಿ ಪುಡಿಯನ್ನು ಹಲ್ವಾಗೆ ಹಾಕಿ ಮಿಶ್ರಣ ಮಾಡಿ. ಇದೀಗ ಪಪ್ಪಾಯಿ ಹಲ್ವಾ ತಯಾರಾಗಿದೆ. ಬಿಸಿ ಅಥವಾ ತಣ್ಣಗಾದ ಮೇಲೂ ಕೂಡ ಇದನ್ನು ಸವಿಯಬಹುದು.

ಪಪ್ಪಾಯ ಹಣ್ಣು (Pappaya Halva) ತಿನ್ನುವುದರಿಂದ ಆಗುವ ಪ್ರಯೋಜನಗಳು:
ಪರಂಗಿ ಹಣ್ಣು ಸೇವನೆಯಿಂದ ನಿಮ್ಮ ದೇಹಕ್ಕೆ ಫೈಟೋನ್ಯೂಟ್ರಿಯೆಂಟ್ಸ್ ಅಂಶಗಳು ಮತ್ತು ವಿಟಮಿನ್ ಅಂಶಗಳು ಸಾಕಷ್ಟು ಸಿಗುವಂತಾಗಿ ಹೃದಯದ ಕಾಯಿಲೆಗಳಿಂದ ನಿಮ್ಮನ್ನು ದೂರ ಇರಿಸುತ್ತದೆ. ಫ್ಲೇವನಾಯ್ಡ್ ಅಂಶಗಳು ಮತ್ತು ವಿಟಮಿನ್ ಎ ಅಂಶ ಯಥೇಚ್ಛವಾಗಿ ಸಿಗುವ ಕಾರಣದಿಂದ ಕಣ್ಣುಗಳಿಗೆ ಪರಂಗಿಹಣ್ಣು ತುಂಬಾ ಒಳ್ಳೆಯದು. ಕಣ್ಣುಗಳ ಒಳಪದರವನ್ನು ತಂಪಾಗಿ ನೋಡಿಕೊಂಡು ದೃಷ್ಟಿಯನ್ನು ಹೆಚ್ಚು ಮಾಡುವ ಗುಣ ಪರಂಗಿ ಹಣ್ಣಿನಲ್ಲಿ ಕಂಡು ಬರುತ್ತದೆ. ಬೆಳಗಿನ ಉಪಾಹಾರ ಸಮಯದಲ್ಲಿ ಪಪ್ಪಾಯಿಯನ್ನು ತಿನ್ನುವುದರಿಂದ ಹೊಟ್ಟೆಯು ಸ್ವಚ್ಛವಾಗಿರುತ್ತದೆ. ಪಪ್ಪಾಯಿಯ ತಾಜಾತನವು ಹೊಟ್ಟೆಗೆ ತುಂಬಾ ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ : Dates And Almond Recipe:ಖರ್ಜೂರ, ಬಾದಾಮಿ ಉಂಡೆ ಟ್ರೈ ಮಾಡಿ : ಆರೋಗ್ಯ ವೃದ್ದಿಸಿಕೊಳ್ಳಿ

ಇದನ್ನೂ ಓದಿ : Doddapatre Gojju Recipe:ಮನೆಯ ಹಿತ್ತಲಲ್ಲಿ ಬೆಳೆಯುವ ದೊಡ್ಡ ಪತ್ರೆಯ ಗೊಜ್ಜು ಮಾಡುವುದು ಹೇಗೆ?

ವಿಟಮಿನ್ ಎ ಮತ್ತು ವಿಟಮಿನ್ ಸಿ ಪಪ್ಪಾಯಿಯಲ್ಲಿ ಹೇರಳವಾಗಿ ಕಂಡುಬರುತ್ತದೆ, ಇದು ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಪಪ್ಪಾಯಿಯನ್ನು ಬಳಸುವುದರಿಂದ ದೇಹದ ರೋಗನಿರೋಧಕ ಶಕ್ತಿಯೂ ಬಲಗೊಳ್ಳುತ್ತದೆ. ವಿಟಮಿನ್ ಸಿ ದೇಹದ ಬೆಳವಣಿಗೆಗೆ ಅವಶ್ಯಕವಾಗಿದೆ.

(Pappaya Halva) Papaya fruit is available in any season. Most people like to consume it as a fruit salad or juice. Papaya fruit also has health benefits. It solves many health problems in the body. But many people do not want to eat overripe fruit

Comments are closed.