Dilraj kaur:ದೇಶಕ್ಕಾಗಿ ಪದಕ ಗೆದ್ದ ಕ್ರೀಡಾಪಟು ಈಗ ರಸ್ತೆಬದಿ ವ್ಯಾಪಾರಿ….! ಹೊಟ್ಟೆ ತುಂಬಿಸೋಕೆ ದಿಲ್ರಾಜ್ ಪರದಾಟ..!!

ಕ್ರೀಡೆಯಾಗಲಿ, ಸೌಂದರ್ಯಸ್ಪರ್ಧೆಯಾಗಲಿ ಅಥವಾ ದೇಶವನ್ನು ಪ್ರತಿನಿಧಿಸುವ ಯಾವುದೇ ಸಾಹಸವಾಗಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿ ಗೆದ್ದು ಬಂದವರಿಗೆ  ಗೌರವ ಸಲ್ಲಿಸಬೇಕಾಗಿರೋದು ಸರ್ಕಾರಗಳ ಕರ್ತವ್ಯ. ಆದರೆ ಸರ್ಕಾರವೊಂದು ತನ್ನ ಕರ್ತವ್ಯ ಮರೆತ ಪರಿಣಾಮ 28 ಪದಕ ವಿಜೇತ ಒಲಂಪಿಕ್ ಕ್ರೀಡಾಪಟುವೊಬ್ಬರು ರಸ್ತೆ ಬದಿಯಲ್ಲಿ ಚಿಪ್ಸ್ ಬಿಸ್ಕೆಟ್ ಮಾರುತ್ತಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಸಾಧನೆ ಬರೆದು, ಕೇವಲ ಬದುಕಿಗಾಗಿ ರಸ್ತೆ ಬದಿಗೆ ಚಿಪ್ಸ್ ಮಾರೋ ಸ್ಥಿತಿಗೆ ತಲುಪಿರೋದು ಮತ್ಯಾರು ಅಲ್ಲಾ ಪ್ಯಾರಾ ಶೂಟರ್ ದಿಲ್ರಾಜ್ ಕೌರ್. ದಿಲ್ರಾಜ್ ಬದುಕಿನ ನಿರ್ವಹಣೆಗಾಗಿ ಡೆಹ್ರಾಡೂನ್ ನ ರಸ್ತೆ ಬದಿಯಲ್ಲಿ ಚಿಪ್ಸ್, ಬಿಸ್ಕತ್ ಮಾರಿ ಬದುಕುತ್ತಿದ್ದಾರೆ.

ಉತ್ತರಾಖಂಡ ಮೂಲದ ದಿಲ್ರಾಜ್ ಕೌರ್ ಪ್ಯಾರಾ ಶೂಟಿಂಗ್ ನಲ್ಲಿ ಹಲವು ಭಾರಿ ಭಾರತದ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಹಾರಿಸಿದ್ದಾರೆ. 2004 ರಿಂದ ಸ್ಪರ್ಧೆಗಳಲ್ಲಿ ಸಕ್ರಿಯವಾಗಿದ್ದ ದಿಲ್ರಾಜ್ ಕೌರ್ 2015 ರವರೆಗೆ ಹಲವು ಸ್ಪರ್ಧೆಗಳಲ್ಲಿ 28 ಪದಕ ಗೆದ್ದಿದ್ದಾರೆ.

ಹಲವಾರು ಬಾರಿ ಸಹಾಯ ಹಾಗೂ ಸೂಕ್ತ ಉದ್ಯೋಗಕ್ಕಾಗಿ ದಿಲ್ರಾಜ್ ಕೌರ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆದರೆ ಸರ್ಕಾರ ಅವರ ಮನವಿಯನ್ನು ಕಿವಿಗೆ ಹಾಕಿಕೊಂಡಿಲ್ಲ. ಹೀಗಾಗಿ ದಿಲ್ರಾಜ್ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈಗಾಗಲೇ ಅನಾರೋಗ್ಯದಿಂದ ತಂದೆ ಹಾಗೂ ಸಹೋದರನನ್ನು ಕಳೆದುಕೊಂಡಿರುವ ದಿಲ್ರಾಜ್ ತಾಯಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಉದರ ಪೋಷಣೆಗಾಗಿ ತಮ್ಮ ಸಾಧನೆಯ ಹೆಗ್ಗಳಿಕೆ ಬದಿಗಿಟ್ಟು ರಸ್ತೆ ಬದಿ ನಿಂತು ಚಿಪ್ಸ್ ಮಾರಾಟ ಮಾಡುತ್ತಿದ್ದಾರೆ.

17 ವರ್ಷಗಳ ಕಾಲ ಪ್ಯಾರಾಶೂಟರ್ ಆಗಿದ್ದ ದಿಲ್ರಾಜ್ 2007 ರಲ್ಲಿ ಥೈವಾನ್ ನಲ್ಲಿ ಹಾಗೂ 2015 ರಲ್ಲಿ ಬೆಂಗಳೂರಿನಲ್ಲಿ ನಡೆದ ವರ್ಲ್ಡ್ ಗೇಮ್ ನಲ್ಲೂ ಪದಕ ಗೆದ್ದಿದ್ದಾರೆ. ಇದುವರೆಗೂ 28 ಚಿನ್ನ, 5 ಬೆಳ್ಳಿ ಹಾಗೂ 6 ಕಂಚಿನ ಪದಕ ಗೆದ್ದ ದಿಲ್ರಾಜ್ ಭಾರತದ ಮೊದಲ ಮಹಿಳಾ ಪ್ಯಾರಾ ಶೂಟರ್ ಖ್ಯಾತಿಗೂ ಭಾಜನರಾಗಿದ್ದರು.

Comments are closed.