Aishasultana:ದೇಶದ್ರೋಹ ಪ್ರಕರಣ….! ಜೈವಿಕ ಅಸ್ತ್ರ ಶಬ್ದಬಳಸಿದ ನಿರ್ಮಾಪಕಿ ಆಯಿಷಾ ಸುಲ್ತಾನಾಗೆ ಜಾಮೀನು…!!

ಕೇಂದ್ರ ಸರ್ಕಾರದ ವಿರುದ್ಧ ಜೈವಿಕ್ ಅಸ್ತ್ರ ಬಳಕೆ ಶಬ್ದ ಪ್ರಯೋಗ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದ ನಿರ್ಮಾಪಕಿ ಆಯಿಷಾ ಸುಲ್ತಾನಾಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್ ಶುಕ್ರವಾರ ಆಯಿಷಾ ಸುಲ್ತಾನಾಗೆ ನೀರಿಕ್ಷಣಾ ಜಾಮೀನು ಮಂಜೂರು ಮಾಡಿದೆ. ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಚರ್ಚೆಯೊಂದರಲ್ಲಿ ಪಾಲ್ಗೊಂಡಿದ್ದ ಆಯಿಷಾ ಸುಲ್ತಾನಾ ಲಕ್ಷದ್ವೀಪದ ಆಡಳಿತಾಧಿಕಾರಿ ಟೀಕಿಸಿದ್ದರು.

ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫ್ರುಲ್ ಪಟೇಲ್ ಅವರನ್ನು ಜೈವಿಕ ಅಸ್ತ್ರ ಎಂದು ಕರೆದಿದ್ದರು. ಅಲ್ಲದೇ ಕೇಂದ್ರ ಸರ್ಕಾರ ಪ್ರಫುಲ್ ಪಟೇಲ್ ಅವರನ್ನು  ಲಕ್ಷದ್ವೀಪದ ಜನರ ವಿರುದ್ಧ ಜೈವಿಕ ಅಸ್ತ್ರದಂತೆ ಬಳಸುತ್ತಿದೆ ಎಂದು ಆರೋಪಿಸಿದ್ದರು.

ಈ ಹಿನ್ನೆಲೆಯಲ್ಲಿ ಲಕ್ಷದ್ವೀಪದ ಬಿಜೆಪಿ ಅಧ್ಯಕ್ಷರು ಆಯಿಷಾ ವಿರುದ್ಧ ದ್ವೇಷಪ್ರಚಾರ ಹಾಗೂ ದೇಶದ್ರೋಹದ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಬೇಕೆಂದು ದೂರು ನೀಡಿದ್ದರು.

ಸುಳ್ಳು ಸುದ್ದಿ ಮೂಲಕ ಆಯಿಷಾ ಕೇಂದ್ರದ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಬಿಜೆಪಿ ನಾಯಕ ಅಬ್ದುಲ್ ಖಾದರ್ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಆಯಿಷಾ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಿತ್ತು. ಆಯಿಷಾ ಅಜ್ಜನ ಮನೆ ಕೇರಳ ಹಾಗೂ ಕರ್ನಾಟಕದ ಗಡಿಭಾಗದ ಕಾಸರಗೋಡು ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿಆಯಿಷಾ ಜಾಮೀನು ಕೋರಿ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದರು.

Comments are closed.