ಹಲಸಿನ ಹಣ್ಣು (Jack Fruit ) ಅಂದ್ರೆ ಯಾರಿಗೆ ತಾನೆ ಇಷ್ಟವಾಗಲ್ಲ ಹೇಳಿ. ಬೇಸಿಗೆ ಆರಂಭವಾಗುತ್ತಲೇ ಹಲಸಿನ ಕಾಲ ಆರಂಭವಾಗಿ ಬಿಡುತ್ತೆ. ಬೇಸಿಗೆ, ಮಳೆಗಾಲ ಆರಂಭದಲ್ಲಿ ಸಿಗುವ ಈ ಪ್ರಾಕೃತಿಕ ಫಲದಿಂದ ಲೆಕ್ಕವಿಲ್ಲ ದಷ್ಟು ತಿಂಡಿ-ತಿನಿಸುಗಳನ್ನು ಮಾಡಬಹುದು. ಕೇರಳ, ಮಲೆನಾಡು, ಕರವಾಳಿ ಭಾಗಗಳಲ್ಲಂತೂ ಅತಿ ಜನಪ್ರಿಯ. ಇದು ಕೇವಲ ತಿನ್ನಲು ನಾಲಿಗೆಗೆ ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಉತ್ತಮ.

ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಪ್ರೊಟೀನ್, ವಿಟಮಿನ್ ಎ, ಸಿ ಮತ್ತು ಪೊಟಾಷಿಯಂ ಇದರಲ್ಲಿದ್ದು ಅದರಲ್ಲಿರುವ ಉತ್ಕರ್ಷಣ ನಿರೋಧ ಅಂಶಗಳಿಂದ, ಅಧಿಕ ನಾರಿನಾಂಶ ಇರುವುದರಿಂದ ಡಯಾಬಿಟಿಸ್ ರೋಗಿಗಳಿಗೆ ಉತ್ತಮ ಎನ್ನುತ್ತಾರೆ ವೈದ್ಯರು.

ಅಮೆರಿಕಾದ ಚಿಕಾಗೊದಲ್ಲಿ ನಡೆದ ಅಮೆರಿಕನ್ ಡಯಾಬಿಟಿಸ್ ಅಸೋಸಿಯೇಷನ್ ವಾರ್ಷಿಕ ಸಭೆಯಲ್ಲಿ ಹಲಸಿನ ಕಾಯಿ (Jack Fruit ) ಮತ್ತು ಹಣ್ಣನ್ನು ನಿಗದಿತ ಪ್ರಮಾಣದಲ್ಲಿ ಸೇವಿಸುವುದರಿಂದ ಟೈಪ್ 2 ಡಯಾಬಿಟಿಸ್ ನವರಿಗೆ ಗ್ಲಿಸಮಿಕ್ ನಿಯಂತ್ರಣವಾಗುತ್ತದೆ ಎಂದು ತಿಳಿದುಬಂದಿದೆ.

ಹಲಸಿನ ಕಾಯಿಯನ್ನು ಅನ್ನದ ಜೊತೆ, ದೋಸೆ, ಇಡ್ಲಿ, ಉಪ್ಮಾಗಳಲ್ಲಿ ಹಿಟ್ಟಿನ ರೂಪದಲ್ಲಿ ಸೇವಿಸುತ್ತಾರೆ. ಅನ್ನ ಮತ್ತು ಗೋಧಿ ಹಿಟ್ಟಿನ ಬದಲಿಗೆ ಹಲಸಿನ ಕಾಯಿಯನ್ನು ಸೇವಿಸಬಹುದು. ಹಲಸಿನ ಕಾಯಿ ತೊಳೆಯನ್ನು ಹಿಟ್ಟಿನ ರೂಪ ಮಾಡಲಾಗುತ್ತದೆ. ಕಾರ್ಬೊಹೈಡ್ರೇಟ್ ಗಳನ್ನು ಕಡಿಮೆ ಮಾಡಬಹುದು.ಕ್ಯಾಲರಿಗಳನ್ನು ಕಡಿಮೆ ಮಾಡಿ ತೂಕ ಇಳಿಸಿಕೊಳ್ಳಲು ಸಹ ನೆರವಾಗುತ್ತದೆ.

ಪೂರ್ವ-ಮಧುಮೇಹ ಅಥವಾ ಮಧುಮೇಹ ರೋಗಿಯು ವೈದ್ಯರ ಚಿಕಿತ್ಸಾಲಯಕ್ಕೆ ಬಂದಾಗ, ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವ ವೈದ್ಯಕೀಯ ಪೌಷ್ಠಿಕ ಚಿಕಿತ್ಸೆಯನ್ನು ಅವರಿಗೆ ಸೂಚಿಸಲಾಗುತ್ತದೆ. ಹಲಸು ಸೇವನೆ ಇದಕ್ಕೆ ಸ್ಥಳೀಯ ಪರಿಹಾರವಾಗಿದೆ. ಇದು ನಮ್ಮ ಅಧ್ಯಯನದಲ್ಲಿ ಪ್ರಾಯೋಗಿಕವಾಗಿ ಸಾಬೀತಾಗಿದೆ.

ಹಲಸಿನಲ್ಲಿ(Jack Fruit ) ಹೆಚ್ಚಿನ ಫೈಬರ್ ಅಂಶ ಮತ್ತು ಕಡಿಮೆ ಗ್ಲೈಸೆಮಿಕ್ ಮಧುಮೇಹ ರೋಗಿಗಳಿಗೆ ಮಾತ್ರವಲ್ಲ ಕೊಲೆಸ್ಟ್ರಾಲ್ ಮತ್ತು ಬೊಜ್ಜು ರೋಗಿಗಳಿಗೂ ಸಹ ಉತ್ತಮ.ಹಲಸಿನ ಕಾಯಿ ಇತ್ತೀಚೆಗೆ ಹೊರದೇಶ ಗಳಲ್ಲಿ ಜನಪ್ರಿಯವಾಗುತ್ತಿದೆ. ಸೆರ್ಬಿಯಾ ಮೂಲದ ಆಹಾರ ಸಲಹೆ ಗಾರ ಸಿಮಿ ಮ್ಯಾಥ್ಯು ಹಲಸಿನ ಹಿಟ್ಟಿನಲ್ಲಿರುವ ಆರೋಗ್ಯ ಅಂಶವನ್ನು ಹೇಳುತ್ತಾರೆ.

ಔಷಧದ ಜೊತೆ ಹೋಲಿಕೆ ಮಾಡಬಹುದಾದ ಹಲಸನ್ನು ಪೌಷ್ಟಿಕಾಂಶ ವಾಗಿ, ವಿಟಮಿನ್ ಸಿ ಸೇವನೆಗೆ, ದೇಹದಲ್ಲಿ ಶಕ್ತಿ ಬಲವರ್ಧನೆಗೆ, ಕ್ಯಾನ್ಸರ್ ಗುಣಕಾರಿಯಾಗಿಯೂ ಬಳಸಬಹುದು.
ಇದನ್ನೂ ಓದಿ : ಮನೆಯಲ್ಲಿರುವ ಈ ವಸ್ತುಗಳನ್ನು ತಿಂದ್ರೆ ಹೆಚ್ಚುತ್ತೆ ರೋಗನಿರೋಧಕ ಶಕ್ತಿ
ಇದನ್ನೂ ಓದಿ : ಉಷ್ಣ ಅಲೆಯಿಂದ ಮಕ್ಕಳನ್ನು ರಕ್ಷಿಸಲು ಪೋಷಕರಿಗೆ ಇಲ್ಲಿದೆ ಸಲಹೆ
Jack Fruit Good for immunity Growth Dainties Support