JioFiber : ಜಿಯೊದಿಂದ ಡಬಲ್‌ ಫೆಸ್ಟಿವಲ್‌ ಬೊನಾಂಜಾ ಕೊಡುಗೆ ಪ್ರಾರಂಭ : ಜಿಯೊಫೈಬರ್‌ ಹೊಸ ಸಂಪರ್ಕದಲ್ಲಿ ಪಡೆಯಿರಿ ಭಾರಿ ಲಾಭ

ದೀಪಾವಳಿಗೆ ರಿಲಯನ್ಸ್‌ನ ಜಿಯೊ (Reliance Jio), ಹೊಸ ಜಿಯೊಫೈಬರ್‌ (JioFiber) ಸಂಪರ್ಕ ಖರೀದಿಸುವವರಿಗೆ ಡಬಲ್‌ ಫೆಸ್ಟಿವಲ್‌ ಬೊನಾಂಜಾ (Double Festival Bonanza) ಕೊಡುಗೆಯನ್ನು ಬಿಡುಗಡೆ ಮಾಡಿದೆ. ಈ ಕೊಡುಗೆಯನ್ನು ಸೀಮಿತ ಅವಧಿಗೆ ನೀಡಲಾಗಿದೆ. ಈ ಕೊಡುಗೆಯನ್ನು ಅಕ್ಟೋಬರ್‌ 18 ರಿಂದ 28 ರವರೆಗೆ ಜಿಯೊಫೈಬರ್‌ನ ಹೊಸ ಸಂಪರ್ಕ ತೆಗೆದುಕೊಳ್ಳವ ಮೂಲಕ ಪಡೆದುಕೊಳ್ಳಬಹುದಾಗಿದೆ. ಈ ಹೊಸ ಸಂಪರ್ಕವು ಗ್ರಾಹಕರಿಗೆ 100% ವೆಲ್ಯು ಬ್ಯಾಕ್‌ ಮತ್ತು 15 ದಿನಗಳ ಹೆಚ್ಚುವರಿ ಮಾನ್ಯತೆಯನ್ನು ನೀಡುತ್ತದೆ. ಹೊಸ ಸಂಪರ್ಕದಲ್ಲಿ ಗ್ರಾಹಕರು 6000 ರೂಪಾಯಿ ಮೌಲ್ಯದ ಉಚಿತ 4K ಜಿಯೊಫೈಬರ್‌ ಸೆಟ್‌–ಟಾಪ್‌–ಬಾಕ್ಸ್‌ ಅನ್ನು ಪಡೆದುಕೊಳ್ಳಬಹುದಾಗಿದೆ. ಈ ಕೊಡುಗೆಯ ಲಾಭ ಪಡೆಯಲು ಗ್ರಾಹಕರು 599 ರೂ. ಅಥವಾ 899 ರೂ. ಪ್ಲಾನ್‌ಗಳಿಗೆ 6 ತಿಂಗಳವರೆಗೆ ರಿಚಾರ್ಜ್‌ ಮಾಡಬೇಕಾಗುತ್ತದೆ.

ಜಿಯೊಫೈಬರ್‌ ಡಬಲ್‌ ಪೆಸ್ಟಿವಲ್‌ ಬೊನಾಂಜಾ ಆಫರ್‌ನ ಅಡಿಯಲ್ಲಿ ಜಿಯೊ, 599 ರೂ. ಮತ್ತು 899 ರೂ.ಗಳ ಎರಡು ಪ್ಲಾನ್‌ಗಳನ್ನು ಪರಿಚಯಿಸಿದೆ. ಇವೆರಡೂ 6 ತಿಂಗಳ ವ್ಯಾಲಿಡಿಟಿ ಹೊಂದಿರುವ ಪ್ಲಾನ್‌ಗಳಾಗಿವೆ. ಹೊಸ ಜಿಯೊಫೈಬರ್‌ ಸಂಪರ್ಕ ಪಡೆಯುವ ಮತ್ತು ಎರಡು ಯೋಜನೆಗಳಲ್ಲಿ ಯಾವುದಾದರೂ ಒಂದಕ್ಕೆ ಚಂದಾದಾರರಾಗುವವರು ಪ್ಲಾನ್‌ನ ಪ್ರಯೋಜನಗಳ ಜೊತೆಗೆ ಎರಡು ಹೆಚ್ಚುವರಿ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.

ಇದನ್ನೂ ಓದಿ : Redmi A1+ : ಸೀಮಿತ ಸಮಯದ ರಿಯಾಯಿತಿಯೊಂದಿಗೆ ಭಾರತದಲ್ಲಿ ಬಿಡುಗಡೆಯಾದ ರೆಡ್‌ಮಿ A1 ಪ್ಲಸ್‌

ಜಿಯೊಫೈಬರ್‌ನ 599ರೂ. ಗಳ ಪ್ಲಾನ್‌ 30Mbps ವೇಗ, 14 ಕ್ಕಿಂತ ಹೆಚ್ಚು OTT ಅಪ್ಲಿಕೇಶನ್‌ಗಳು, 550 ಕ್ಕಿಂತ ಹೆಚ್ಚಿನ ಬೇಡಿಕೆಯ ಚಾನಲ್‌ಗಳನ್ನು ನೀಡುತ್ತದೆ. ಪ್ಲಾನ್‌ನ ಬೆಲೆ ಮತ್ತು 647 ರೂ. ಗಳ ಜಿಎಸ್‌ಟಿ ವೆಚ್ಚವನ್ನು ಒಳಗೊಂಡಿರುವದಕ್ಕಾಗಿ ಜಿಯೊ 4241 ರೂ. ಶುಲ್ಕವನ್ನು ವಿಧಿಸುತ್ತದೆ. ಈ ಯೋಜನೆಯಲ್ಲಿ ಗ್ರಾಹಕರು 4500 ರೂ. ಗಳ ಮೌಲ್ಯದ ಶಾಪಿಂಗ್‌ ವೋಚರ್‌ ಅನ್ನು ಪಡೆಯುತ್ತಾರೆ. ಇದಲ್ಲದೆ ಈ ಯೋಜನೆಯು 15 ದಿನಗಳ ಹೆಚ್ಚುವರಿ ಮಾನ್ಯತೆಯನ್ನು ಹೊಂದಿದೆ.

ಜಿಯೊಫೈಬರ್‌ನ 899ರೂ. ಗಳ ಪ್ಲಾನ್ 100 Mbps ವೇಗವನ್ನು ನೀಡುತ್ತದೆ. ಜೊತೆಗೆ ರೂ 599 ಯೋಜನೆಯಂತೆಯೇ ಪ್ರಯೋಜನಗಳನ್ನು ನೀಡುತ್ತದೆ. ಆದರೆ ಈ ಪ್ಲಾನ್‌ನ ಜಿಎಸ್‌ಟಿ ವೆಚ್ಚವು 971 ರೂ. ಗಳಾದ್ದರಿಂದ ಜಿಯೊ ಇದಕ್ಕೆ 6365 ರೂ. ಶುಲ್ಕವನ್ನು ವಿಧಿಸುತ್ತದೆ.

ಜಿಯೊ, 899 ರೂ. ಗಳ ಪ್ಲಾನ್‌ ಅನ್ನು 3 ತಿಂಗಳಿಗೆ ಸಹ ನೀಡಿದೆ. ಇದೂ ಸಹ ಅದೇ ರೀತಿಯ ಪ್ರಯೋಜನಗಳನ್ನು ನೀಡುತ್ತದೆಯಾದರೂ ಹೆಚ್ಚುವರಿ 15 ದಿನಗಳ ಮಾನ್ಯತೆಯನ್ನು ಪಡೆದಿರುವುದಿಲ್ಲ.

ಇದನ್ನೂ ಓದಿ : Motorola Moto E22s : ಇಂದು ಬಿಡುಗಡೆಯಾಗಲಿರುವ ಮತ್ತೊಂದು ಬಜೆಟ್‌ ಫೋನ್‌ Moto E22s; ಇದರ ವಿಶೇಷತೆಗಳೇನಿರಬಹುದು…

(JioFiber Reliance Jio launches Jiofiber Double Festival Bonanza offer. Available for a limited time period)

Comments are closed.