kantara: ‘ಭೂತಕೋಲ ಎನ್ನುವುದು ಹಿಂದೂ ಸಂಸ್ಕೃತಿಯೇ ಅಲ್ಲ’ : ನಟ ಚೇತನ್​ ಹೊಸ ವಿವಾದ

kantara chetan : ಆ ದಿನಗಳು ಸಿನಿಮಾ ಖ್ಯಾತಿಯ ನಟ ಚೇತನ್​ಗೆ ವಿವಾದಗಳು ಹೊಸದೇನಲ್ಲ. ಒಂದಿಲ್ಲೊಂದು ಕಾರಣದಿಂದಾಗಿ ನಟ ಚೇತನ ವಿವಾದದ ಸುಳಿಯಲ್ಲಿ ಸಿಲುಕಿಕೊಂಡೇ ಇರುತ್ತಾರೆ. ರಾಜಕೀಯ ವಿಚಾರ ಆಗಿರಬಹುದು ಅಥವಾ ಸಿನಿಮಾದ ವಿಚಾರ ಆಗಿರಬಹುದು ನಟ ಚೇತನ್​ ನೀಡುವ ಪ್ರತಿಯೊಂದು ಹೇಳಿಕೆಗಳು ವಿವಾದವಾಗಿಯೇ ಬದಲಾಗುತ್ತದೆ. ಈ ಸಾಲಿಗೆ ಇದೀಗ ಕಾಂತಾರ ಸಿನಿಮಾ ಕೂಡ ಸೇರಿಕೊಂಡಿದೆ.

ನಟ ಹಾಗೂ ನಿರ್ದೇಶಕ ರಿಷಭ್​​ ಶೆಟ್ಟಿಯವರ ಕಾಂತಾರ ಸಿನಿಮಾವು ಭರ್ಜರಿ ಪ್ರದರ್ಶನ ಕಾಣುತ್ತಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಸ್ಯಾಂಡಲ್​ವುಡ್​ನ ಹಿಟ್​ ಸಿನಿಮಾಗಳ ಸಾಲಿಗೆ ಸೇರಿರುವ ಕಾಂತಾರ ಈಗಾಗಲೇ ನೂರು ಕೋಟಿ ಕ್ಲಬ್​​ ದಾಟಿದೆ. ಕರಾವಳಿ ಭಾಗದ ಪಂಜುರ್ಲಿ ದೈವ ಹಾಗೂ ಮಾನವನ ನಡುವಿನ ಸಂಘರ್ಷವನ್ನು ಆಧರಿಸಿ ಈ ಸುಂದರ ಕತೆಯನ್ನು ಹೆಣೆಯಲಾಗಿದ್ದು ಈ ಸಿನಿಮಾದಲ್ಲಿ ರಿಷಭ್​ ಶೆಟ್ಟಿ ಅಭಿನಯವು ಮೈನವಿರೇಳಿಸುವಂತಿದೆ.


ರಿಷಭ್​ ಶೆಟ್ಟಿ ಸಾಕಷ್ಟು ಸಂದರ್ಶನಗಳಲ್ಲಿ ಭೂತಕೋಲ ಎನ್ನುವುದು ಹಿಂದೂಗಳ ಸಂಸ್ಕೃತಿ ಎಂದು ಹೇಳಿಕೆ ನೀಡಿದ್ದರು. ಆದರೆ ಈ ಮಾತು ಸುಳ್ಳು ಎನ್ನುವುದು ನಟ ಚೇತನ್​ ವಾದವಾಗಿದೆ. ಕಾಂತಾರ ಸಿನಿಮಾ ದೇಶಮಟ್ಟದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದೆ. ರಿಷಭ್​ ಶೆಟ್ಟಿ ಭೂತ ಕೋಲ ಹಿಂದೂ ಸಂಸ್ಕೃತಿ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಈ ಹೇಳಿಕೆ ಸುಳ್ಳು. ನಮ್ಮ ಪಂಬದ, ನಲಿಕೆ, ಪರವರ ಬಹುಜನ ಸಂಪ್ರದಾಯಗಳು. ವೈದಿಕ ಬ್ರಾಹ್ಮಣೀಯ ಹಿಂದೂ ಧರ್ಮಕ್ಕಿಂತ ಹಿಂದಿನವು. ಮೂಲ ನಿವಾಸಿ ಸಂಸ್ಕೃತಿಗಳನ್ನು ಪರದೆ ಮೇಲೆ ಮತ್ತು ಹೊರಗೆ ಸತ್ಯದೊಂದಿಗೆ ಪ್ರದರ್ಶಿಸಬೇಕು ಎಂದು ಟ್ವೀಟಾಯಿಸಿದ್ದಾರೆ. ನಟ ಚೇತನ್​ರ ಈ ಹೇಳಿಕೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದ್ದು ಪರ -ವಿರೋಧದ ಮಾತುಕತೆಗಳು ಸೋಶಿಯಲ್​ ಮೀಡಿಯಾದಲ್ಲಿ ತುಸು ಹೆಚ್ಚಾಗಿಯೇ ಸದ್ದು ಮಾಡ್ತಿದೆ.

ಇದನ್ನೂ ಓದಿ : Pregnant:ಗರ್ಭಿಣಿ ಎಂದು ತಿಳಿದ ಎರಡೇ ದಿನಕ್ಕೆ ಮಗುವಿಗೆ ಜನ್ಮ ನೀಡಿದ ಮಹಿಳೆ

ಇದನ್ನು ಓದಿ : Bhargavi Vikyathi:ಸೆಲೆಬ್ರೆಟಿ ಸ್ಟೈಲಿಸ್ಟ್ ಭಾರ್ಗವಿ ವಿಖ್ಯಾತಿ ಹೊಸ ಸಾಹಸ – ವಿಖ್ಯಾತಿ ಸ್ಕೂಲ್ ಆಫ್ ಫ್ಯಾಶನ್ ಅಂಡ್ ಡಿಸೈನ್ ಅಕಾಡೆಮಿ ಓಪನ್

ಇದನ್ನೂ ಓದಿ : Australia announced new captain : ಟಿ20 ವಿಶ್ವಕಪ್ ಮಧ್ಯೆಯೇ ಹೊಸ ನಾಯಕನನ್ನು ಘೋಷಿಸಿದ ಕ್ರಿಕೆಟ್ ಆಸ್ಟ್ರೇಲಿಯಾ

bhoota kola is not hindu culture actor chetan react on kantara

Comments are closed.